ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮನಸ್ತಾಪಗಳು ಸಾಮಾನ್ಯವಾಗಿ ನಡೆಯುತ್ತವೆ. ಇತ್ತೀಚೆಗೆ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ನಡುವೆ ಇದೇ ರೀತಿ ಭಿನ್ನಾಭಿಪ್ರಾಯ ಮೂಡಿದೆ. 'ಎಂತ ಗೊತ್ತುಂಟ ಗಯ್ಸ್' ಎಂದು ರಕ್ಷಿತಾರನ್ನು ಅನುಕರಿಸಿ ಧ್ರುವಂತ್ ಟೀಕೆಗೆ ಗುರಿಯಾಗಿದ್ದರು. ಈ ವಿಷಯದಿಂದ ರಕ್ಷಿತಾ ಬೇಸರಗೊಂಡಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta
ಭಾನುವಾರದ ಸಂಚಿಕೆಯಲ್ಲಿ ಸುದೀಪ್ ನೀಡಿದ ಚಟುವಟಿಕೆಯೊಂದರಲ್ಲಿ 'ನಂಬಿಸಿ ಮೋಸ ಮಾಡಿದವರು' ಯಾರು ಎಂಬುದನ್ನು ಸ್ಪರ್ಧಿಗಳು ತಿಳಿಸಬೇಕಿತ್ತು. ಆಗ ರಕ್ಷಿತಾ, ಧ್ರುವಂತ್ ಹೆಸರನ್ನು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ರಕ್ಷಿತಾ ಶೆಟ್ಟಿ ಆಡಿದ ಮಾತುಗಳು ಪ್ರೇಕ್ಷಕರ ಗಮನ ಸೆಳೆದವು.
ರಕ್ಷಿತಾ ಅವರು, "ನಾನು ಜನರೊಂದಿಗೆ ಮಾತನಾಡುವ ಶೈಲಿಯೇ ಹಾಗೆ. ಯೂಟ್ಯೂಬ್ ಚಾನೆಲ್ ಆರಂಭಿಸಿ ಆರು ತಿಂಗಳಲ್ಲೇ ಬಿಗ್ ಬಾಸ್‌ಗೆ ಬಂದಿರುವುದು ನನ್ನ ಸಾಮರ್ಥ್ಯ. ನಾನು ಅವರಂತಿಲ್ಲ, ಅವರು ನನ್ನಂತಿಲ್ಲ. ನಾನು ಅನನ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ" ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಮೇಘನಾ ಸರ್ಜಾ ಈಗ ತಲೈವಾ ರಜನಿಕಾಂತ್ ಚಿತ್ರದಲ್ಲಿ ನಟನೆ
"ಮಲ್ಲಮ್ಮ ಅವರು ಹೊರಹೋಗಲು ಶೇಕಡಾ 80ರಷ್ಟು ಕಾರಣ ಧ್ರುವಂತ್. ಈ ಕಾರಣಕ್ಕಾಗಿ 'ನಂಬಿಸಿ ಮೋಸ ಮಾಡಿದ್ರು' ಎಂಬ ಟ್ಯಾಗ್ ಅನ್ನು ಧ್ರುವಣ್ಣನಿಗೆ ನೀಡುತ್ತೇನೆ" ಎಂದು ರಕ್ಷಿತಾ ಹೇಳಿದ್ದರು. ಆದರೆ, 'ಅಣ್ಣ' ಎಂದು ಕರೆದ ಬಗ್ಗೆ ತಕ್ಷಣವೇ ಪಶ್ಚಾತ್ತಾಪ ವ್ಯಕ್ತಪಡಿಸಿ, "ನೀವು ನನ್ನ ಅಣ್ಣ ಆಗಲು ಅರ್ಹರಲ್ಲ, ಹಾಗಾಗಿ ಧ್ರುವ್ ಸರ್ ಎನ್ನುತ್ತೇನೆ" ಎಂದು ಸೇರಿಸಿದರು.
ರಕ್ಷಿತಾ ಶೆಟ್ಟಿ ಅವರ ಈ ಮಾತುಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ಮತ್ತು ಈ ವಿಡಿಯೋ ಸಖತ್ ವೈರಲ್ ಆಗಿದೆ. ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ.
ಕಳೆದ ವಾರ ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದು ಅನೇಕರಿಗೆ ಅಸಮಾಧಾನ ತಂದಿದೆ. "ತಪ್ಪು ಮಾಡಿದವರು ಅನೇಕರಿದ್ದಾರೆ, ಆದರೆ ರಕ್ಷಿತಾಗೆ ಮಾತ್ರ ಕ್ಲಾಸ್ ಯಾಕೆ?" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ.