Skip to main content
ವಿಡಿಯೋ
1/3
globalnews

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗೆ ಜೋರ್ಹಾನ್‌ ಮಮ್ದಾನಿ ಸಭೆ - ವಾಗ್ವಾದದಿಂದ ಸಂವಾದದವರೆಗೆ!?

By Shravanthi R
ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗೆ ಜೋರ್ಹಾನ್‌ ಮಮ್ದಾನಿ ಸಭೆ - ವಾಗ್ವಾದದಿಂದ ಸಂವಾದದವರೆಗೆ!?

ಇತ್ತೀಚೆಗೆ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನೂತನ ಮೇಯರ್‌ ಆಗಿ ಚುನಾಯಿತರಾಗಿ ಆಯ್ಕೆಯಾದ ಸಮಾಜವಾದಿ ನಾಯಕ ಜೋರ್ಹಾನ್‌ ಮಮ್ದಾನಿ ಅವರು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಟ್ಟಿಗೆ ಯುಸ್‌ ವೈಟ್‌ಹೌಸ್‌ನಲ್ಲಿ ಸಂವಾದ ನಡೆಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ನ್ಯೂಯಾರ್ಕ್‌ ಸಿಟಿಯ ನೂತನ ಮೇಯರ್‌ ಆಗಿ ಆಯ್ಕೆಯಾದ ಬಳಿಕ ಅವರನ್ನು ಭೇಟಿ ಮಾಡಿ ಪರಸ್ಪರ ಮುಖಾಮುಖಿಯಾಗಿದ್ದಾರೆ. ಓವಲ್‌ ಕಚೇರಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೌಹಾರ್ದಯುತವಾಗಿ ಸಭೆ ನಡೆಸಿ ಮಾತನಾಡಿರುವುದಾಗಿ ತಿಳಿಸಿದ್ದಾರೆ. 

ಈ ಹಿಂದೆ ಮಮ್ದಾನಿಯವರನ್ನು ಟೀಕಿಸುತ್ತಿದ್ದ ಟ್ರಂಪ್‌ ಅವರು, ಸಭೆಯ ಬಳಿಕ "ಅವರೊಟ್ಟಿಗೆ ಮಾತನಾಡಿದ್ದು, ಸಭೆ ನಡೆಸಿದ್ದು ಉತ್ಪಾದಕವಾಗಿತ್ತು" ಎಂದು ಹೇಳಿದ್ದಾರೆ. "ಮುಂದಿನ ದಿನಗಳಲ್ಲಿ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುವರೆಂಬ ವಿಶ್ವಾಸ ನನಗಿದೆ" ಎಂದಿದ್ದಾರೆ. Oppo K12x 5G with 45W SUPERVOOC Charger in-The-Box (Breeze Blue, 128 GB) (6 GB RAM)

"ಚುನಾವಣೆಯಲ್ಲಿ ಅವರು ಪ್ರಬಲ ಪ್ರತಿಸ್ಪರ್ಧಿಗಳ ವಿರುದ್ದ ಹೋರಾಟ ನಡೆಸಿ ಗೆದ್ದಿದ್ದಾರೆ. ಅವರ ಗೆಲುವನ್ನು ಅಭಿನಂದಿಸುತ್ತೇನೆ. ಅವರೊಂದಿಗಿನ ಸಂವಾದ ಅದ್ಭುತವಾಗಿತ್ತು. ಅವರ ಭೇಟಿಯನ್ನು ಆನಂದಿಸಿದ್ದೇನೆ" ಎಂದು ತಿಳಿಸಿದ್ದಾರೆ. 

ಇತ್ತ ಮಮ್ದಾನಿಯವರು, ಗೆಲುವಿನ ಭಾಷಣ ನೀಡಿದಂದು, "ದೇಶದ ಅಧ್ಯಕ್ಷರನ್ನು ಹೇಗೆ ಸೋಲಿಸಬಹುದು ಎಂಬುದು ನನ್ನ ಬಯಕೆಯಾಗಿತ್ತು. ಜೊತೆಗೆ ನ್ಯೂಯಾರ್ಕ್‌ ಜನರಿಗಾಗಿ ಅಧ್ಯಕ್ಷರು ಸೇರಿದಂತೆ ಯಾರೊಂದಿಗೂ ಕೆಲಸ ಮಾಡಲು ಸಿದ್ದ" ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಭೂಕಂಪನದ ಮಾರ್ದನಿ: ಬಾಂಗ್ಲಾ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡುಕ!