ದುಬೈ ಏರ್ ಶೋ ಸಂದರ್ಭದಲ್ಲಿ ಭಾರತದ ವಾಯುಪಡೆಯ ಅತ್ಯಂತ ಶಕ್ತಿಶಾಲಿ ಎನಿಸಿದ್ದ ತೇಜಸ್ ಯುದ್ದವಿಮಾನವು ಪತನಗೊಂಡಿದೆ. ಈ ಪರಿಣಾಮದಿಂದ, ಇದರಲ್ಲಿದ್ದ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅವರು ಹುತಾತ್ಮರಾಗಿದ್ದಾರೆ ಎಂದು ತಿಳಿಸಲಾಗಿದೆ.
ಪ್ರದರ್ಶನದ ವೇಳೆ, ಟೇಕ್ ಆಫ್ ಆಗುತ್ತಿದ್ದ ಸಂದರ್ಭದಲ್ಲಿ ಗಮನಸೆಳೆದಿದ್ದ ತೇಜಸ್ ಕೆಲವೇ ಕ್ಷಣಗಳಲ್ಲಿ ನೆಲಕ್ಕುರುಳಿತು. ತನ್ನ ಸಮತೋಲನ ಕಳೆದುಕೊಂಡು, ನೆಲದ ಕಡೆಗೆ ವಾಲಿತ್ತು. ಹೊಸ ಸಾಧನೆ ತೋರುತ್ತಿದೆ ಎಂದು ಭಾವಿಸಲಾಗಿದ್ದ ವೇಳೆ ವಿಧಿಯಾಟ ಬೇರೆಯಾಗಿತ್ತು. ಇದು ಎರಡನೇ ವಿನಾಶಕಾರಿ ದುರಂತವೆಂದು ಹೇಳಲಾಗಿದೆ. realme 14x 5G Smartphone 6+128GB Golden Glow, 6.67-inch Screen, 120Hz Display, 6000mAh Battery, 80MP Camera, MediaTek Dimensity 6300, ArmorShell Protection, IP69
ತೇಜಸ್ ಅಪಘಾತದ ಸಂದರ್ಭದಲ್ಲಿ ಆಕಾಶವು ಕಪ್ಪು ಹೊಗೆಯಿಂದ ಕೂಡಿತ್ತು. ಪರಿಸ್ಥಿತಿ ಹದಗೆಟ್ಟು, ಬೆಂಕಿಯುಂಡೆಯಾಗಿ ಪರಿಣಮಿಸಿತ್ತು. ಈ ವೇಳೆ ಪೈಲಟ್ ವಿಂಗ್ ಕಮಾಂಡರ್ ನಮಾಂಶ್ ಸ್ಯಾಲ್ ಅವರು ಹೊರಬರಲು ಸಾಧ್ಯವಾಗದೇ ಬದುಕುಳಿಯಲಾಗಲಿಲ್ಲ ಎಂದು ವರದಿ ತಿಳಿಸಿದೆ. ಘಟನೆಗೆ ನಿಖರ ಕಾರಣವನ್ನು ತಿಳಿಸಿಲ್ಲವಾಗಿ, ಈ ಕುರಿತ ಊಹಾಪೋಹಗಳು ಹರಿದಾಡಿದೆ. ಇದನ್ನೂ ಓದಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಜೋರ್ಹಾನ್ ಮಮ್ದಾನಿ ಸಭೆ - ವಾಗ್ವಾದದಿಂದ ಸಂವಾದದವರೆಗೆ!?