ರಾಜ್ಯದಲ್ಲಿ ತೀವ್ರ ಚರ್ಚೆಯಾಗಿರುವ ಸಿಎಂ ಸ್ಥಾನದ ಬಲಾಬಲದ ನಡುವೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರಿನ ತಮ್ಮ ನಿವಾಸದಲ್ಲಿ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ವಿಷೇಶ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಅವರು ತಾವು ಸಿಎಂ ಆಗುವ ಮುನ್ನ ಕೈಗೊಂಡಿದ್ದ ಪೂಜೆಯನ್ನು ನಡೆಸಿರುವ ಹಿನ್ನಲೆಯಲ್ಲಿ, ಈ ಬೆಳವಣಿಗೆ ಡಿಕೆಶಿ ಅವರ ಸಿಎಂ ಕನಸಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎನ್ನಲಾಗುತ್ತಿದೆ.
ಹಾಸನದ ಪುರಾಣ ಪ್ರಸಿದ್ದ ಈ ದೇವರಿಗೆ, ಶುಕ್ರವಾರ ಡಿಸಿಎಂ ಅವರ ಮನೆಯಲ್ಲಿ ಐವರು ಪೂಜಾರಿಗಳಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಪೂಜಾವಿಧಾನವನ್ನು ನೆರವೇರಿಸಿದ್ದಾಗಿ ವರದಿಯಾಗಿದೆ. ಧಾರ್ಮಿಕ ಮಹತ್ವ ಹೊಂದಿರುವ ಈ ಕ್ಷೇತ್ರವು ಅರಸೀಕೆರೆ ತಾಲ್ಲೂಕಿನ ಬೆಟ್ಟದ ಮೇಲಿದೆ. ಲಕ್ಷಾಂತರ ಭಕ್ತರು, ಸಿದ್ದೇಶ್ವರ ಸ್ವಾಮೀಜಿ ಗದ್ದುಗೆಯಿಂದ ಪ್ರಸಾದ ಪಡೆದು, ಪಾದುಕೆ ದರ್ಶನ ಪಡೆಯುತ್ತಾರೆ. ಇಲ್ಲಿ ಇಷ್ಟಾರ್ಥಗಳು ಸಿದ್ದಿಸುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಲಾಗಿದೆ. OPPO K13x 5G 6000mAh and 45W SUPERVOOC Charger & AI (Breeze Blue, 128 GB) (6 GB RAM)
ಯಡಿಯೂರಪ್ಪ ಅವರು ಈ ಕ್ಷೇತ್ರಕ್ಕೆ ಬಂದು ಹೋದ ನಂತರ ಸಿಎಂ ಆದರು ಎಂದು ಹೇಳಲಾಗುತ್ತದೆ. ಜುಲೈನಲ್ಲಿ ಅನೇಕ ದೇಗುಲಗಳಿಗೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್ ಅವರು, ಈ ಕ್ಷೇತ್ರಕ್ಕೂ ಭೇಟಿ ನೀಡಿದ್ದರು. ಇದೀಗ ವಿಷೇಶವಾಗಿ ಪಾದುಕೆಯನ್ನು ಮನೆಗೇ ಕರೆಸಿಕೊಂಡು ಪೂಜೆ ಸಲ್ಲಿಸಿರುವುದು ಗಮನಾರ್ಹವೆನಿಸಿದೆ. ಇದನ್ನೂ ಓದಿ: ದುಬೈ ಏರ್ ಶೋ 2025: ಭಾರತೀಯ ಯುದ್ದವಿಮಾನ ತೇಜಸ್ ಪತನ - ಪೈಲಟ್ ಸಾ*ವು!