Skip to main content
ವಿಡಿಯೋ
1/3
cinema

ಎ.ಆರ್. ರೆಹಮಾನ್ ಸೂಫಿ ಧರ್ಮಾಂತರ: ಜ್ಯೋತಿಷಿಯ ಸಲಹೆಯಿಂದ ಬದಲಾದ ಹೆಸರು..! ಇಲ್ಲಿದೆ ಮಾಹಿತಿ

By Ram Chethan
ಎ.ಆರ್. ರೆಹಮಾನ್ ಸೂಫಿ ಧರ್ಮಾಂತರ: ಜ್ಯೋತಿಷಿಯ ಸಲಹೆಯಿಂದ ಬದಲಾದ ಹೆಸರು..! ಇಲ್ಲಿದೆ ಮಾಹಿತಿ

ಎ.ಆರ್. ರೆಹಮಾನ್ ಮೊದಲಿಗೆ ಹಿಂದೂ ಕುಟುಂಬದಲ್ಲಿ ಜನಿಸಿದರೂ ನಂತರ ಸೂಫಿ ಧರ್ಮಕ್ಕೆ ಮತಾಂತರಗೊಂಡರು. ದಿಲೀಪ್ ಕುಮಾರ್ ಎಂಬ ಹೆಸರಿನಿಂದ ರೆಹಮಾನ್ ಆಗುವವರೆಗೆ ಅವರ ಆಧ್ಯಾತ್ಮಿಕ ಪ್ರಯಾಣ, ಜ್ಯೋತಿಷಿಯ ಸಲಹೆ, ಹಾಗೂ ಎಲ್ಲ ಧರ್ಮಗಳಿಗೂ ನೀಡುವ ಗೌರವದ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ.

ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ತಮ್ಮ ವಿಶಿಷ್ಟ ಸಂಗೀತದ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರ ಮನಗೆದ್ದಿದ್ದಾರೆ. ಅನೇಕ ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡಿ, ತಮ್ಮ ಅದ್ಭುತ ಸಂಯೋಜನೆಗಾಗಿ ಆಸ್ಕರ್ ಅವಾರ್ಡ್‌ಗೂ ಭಾಜನರಾಗಿದ್ದಾರೆ. ಜನರಿಗೆ ತಿಳಿದಿರುವ ರೆಹಮಾನ್ ಅವರ ಜೀವನದಲ್ಲಿ ಒಂದು ಆಸಕ್ತಿದಾಯಕ ಸಂಗತಿ ಎಂದರೆ, ಅವರು ಮೊದಲಿಗೆ ಹಿಂದೂ ಕುಟುಂಬದಲ್ಲಿ ಜನಿಸಿದ್ದರೂ ನಂತರ ಸೂಫಿ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರ ಮೂಲ ಹೆಸರು ದಿಲೀಪ್ ಕುಮಾರ್ ಆಗಿದ್ದು, ಧರ್ಮಾಂತರಗೊಳ್ಳುವ ಬಳಿಕ ಅವರು ತಮ್ಮ ಹೆಸರನ್ನು ‘ಎ.ಆರ್. ರೆಹಮಾನ್’ ಎಂದು ಬದಲಿಸಿಕೊಂಡರು.GUESS Analog White Dial Men's Watch-U0291G4M

ಇತ್ತೀಚಿನ ಸಂದರ್ಶನದಲ್ಲಿ ರೆಹಮಾನ್ ಧರ್ಮಾಂತರಗೊಂಡ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಅವರ ಮಾತಿನ ಪ್ರಕಾರ, ಜೀವನದ ಒಂದು ಹಂತದಲ್ಲಿ ಅವರು ಆಧ್ಯಾತ್ಮಿಕ ಹುಡುಕಾಟದಲ್ಲಿ ಮುಳುಗಿದ್ದಾಗ ಸೂಫಿ ಪರಂಪರೆ ಅವರಿಗೆ ಆಕರ್ಷಕವಾಗಿತ್ತು. ಅವರ ಕುಟುಂಬದ ಮೇಲೂ ಅದ್ಭುತವಾಗಿ ಪರಿಣಾಮ ಬೀರಿದ್ದ ಕಾರಣ ಅವರು ಸೂಫಿ ಧರ್ಮವನ್ನು ಆರಿಸಿಕೊಂಡರು. ರೆಹಮಾನ್ ಅವರ ಹೆಸರನ್ನು ಬದಲಾಯಿಸಿದ ಹಿನ್ನೆಲೆಯೂ ಕುತೂಹಲಕಾರಿಯೇ. ಒಂದು ಹಿಂದೂ ಜ್ಯೋತಿಷಿಯವರು ‘ರೆಹಮಾನ್’ ಎಂಬ ಹೆಸರನ್ನು ಇಡುವಂತೆ ಅವರಿಗೆ ಸಲಹೆ ನೀಡಿದ್ದು, ಆ ಹೆಸರೇ ಅವರು ಇಡೀ ವಿಶ್ವಕ್ಕೆ ಪರಿಚಿತರಾಗುವಂತೆ ಮಾಡಿತು.ಇದನ್ನು ಓದಿ:ಬಾಲಯ್ಯ ಅಖಂಡ 2 ಟ್ರೈಲರ್ ಔಟ್: ಭಾರಿ ಆಕ್ಷನ್, ಪವರ್‌ಫುಲ್ ಡೈಲಾಗ್‌ಗಳೊಂದಿಗೆ ಬಾಕ್ಸ್ ಆಫೀಸ್ ಗದ್ದಲಕ್ಕೆ ಸಿದ್ಧ ..!

ಸಂದರ್ಶನದಲ್ಲಿ ಅವರು ಇನ್ನೊಂದು ಮಹತ್ತರ ವಿಷಯವನ್ನೂ ಹಂಚಿಕೊಂಡಿದ್ದಾರೆ. ಯಾವುದೇ ಧರ್ಮವನ್ನು ಕೇವಲ ನಂಬಿಕೆಯಾಗಿ ಕಾಣದೇ, ಎಲ್ಲ ಧರ್ಮಗಳ ತತ್ತ್ವಗಳನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಧರ್ಮವೇನು ಎಂಬುದಕ್ಕಿಂತ, ಮಾನವೀಯತೆಯೇ ಮುಖ್ಯ ಎಂದು ಅವರು ನಂಬುತ್ತಾರೆ. ಎಲ್ಲರ ಧರ್ಮವನ್ನೂ ಗೌರವಿಸುವುದು, ಪ್ರತಿಯೊಬ್ಬರ ನಂಬಿಕೆಗೆ ಸ್ಥಾನ ನೀಡುವುದು ತಮ್ಮ ಜೀವನದ ಮುಖ್ಯ ಪಾಠವೆಂದು ಹೇಳಿದ್ದಾರೆ.