Skip to main content
ವಿಡಿಯೋ
1/3
general

ದೆಹಲಿ ವಾಯುಮಲಿನ - ವಾಸ್ತವ ತಂದ ಒತ್ತಡ - ಪ್ರವಾಸವನ್ನು ಅರ್ಧಕ್ಕೇ ಕೈಬಿಟ್ಟ ಉದ್ಯಮಿ ಯಾರು ಗೊತ್ತಾ!?

By Shravanthi R
ದೆಹಲಿ ವಾಯುಮಲಿನ - ವಾಸ್ತವ ತಂದ ಒತ್ತಡ - ಪ್ರವಾಸವನ್ನು ಅರ್ಧಕ್ಕೇ ಕೈಬಿಟ್ಟ ಉದ್ಯಮಿ ಯಾರು ಗೊತ್ತಾ!?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಹೆಚ್ಚಳವಾದ ವಾಯುಮಾಲಿನ್ಯದ ಪ್ರಭಾವಳಿ ಹೇಗಿದೆಯೆಂದರೆ, ಅತೀವ ಆರೋಗ್ಯ ಸಮಸ್ಯೆಗೆ ತುತ್ತಾಗುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇದಕ್ಕೆ ಉದಾಹರಣೆಯೆಂಬಂತೆ ಉದ್ಯಮಿ ಮನುಕುಮಾರ್‌ ಜೈನ್‌ ಅಲ್ಲಿನ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

ದೆಹಲಿಯಲ್ಲಿ ವಾಯು ಮಾಲಿನ್ಯದ ಗಂಭೀರತೆ ಎಷ್ಟಿದೆ ಎಂದರೆ, ಆರೋಗ್ಯವಂತ ವ್ಯಕ್ತಿಗಳು ಸಹ ಅಲ್ಲಿರುವುದು ಕಷ್ಟವಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಇತ್ತೀಚೆಗೆ, ಟೆಕ್ ಉದ್ಯಮಿಯೊಬ್ಬರು ದೆಹಲಿಯ ವಾಯು ಗುಣಮಟ್ಟದ ಪರಿಣಾಮ ತೀವ್ರ ಅಸ್ವಸ್ಥತೆ ಅನುಭವಿಸಿ, ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹಿಂದಿರುಗಿದ್ದಾರೆ.

ಟೆಕ್ ಉದ್ಯಮಿ ಹಾಗೂ ಶಾವೊಮಿ ಇಂಡಿಯಾದ ಮಾಜಿ ಮುಖ್ಯಸ್ಥ ಮನುಕುಮಾರ್‌ ಜೈನ್‌ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ಬಗ್ಗೆ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡು, ಅಲ್ಲಿನ ವಾತಾವರಣದಿಂದ ಕಣ್ಣುಗಳು ಉರಿಯ ತೊಡಗಿದವು, ಗಂಟಲಲ್ಲಿ ಉರಿವ ಸಂವೇದನೆ, ಉಸಿರಾಟದ ಸಮಸ್ಯೆಯಾಯ್ತು ಎಂದು ವಿವರಿಸಿದ್ದಾರೆ.

ಪರಿಸ್ಥಿತಿ ತೀವ್ರವಾದಾಗ, ಅವರು ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜಿಸಿದ್ದ ಸಭೆಗಳನ್ನು ರದ್ದುಗೊಳಿಸಿ, ತಕ್ಷಣವೇ ವಾಪಸಾಗಿದ್ದಾರೆ. OPPO K13x 5G 6000mAh and 45W SUPERVOOC Charger & AI (Sunset Peach, 128 GB) (4 GB RAM)

ದೆಹಲಿ ತಲುಪಿದ ಕೆಲವೇ ಗಂಟೆಗಳಲ್ಲಿ ಅವರಿಗೆ ಉಂಟಾದ ಅಸ್ವಸ್ಥ ಅನುಭವದಿಂದಾಗಿ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ. "ನನಗೆ ಈ ಊರು ಇಷ್ಟ ಆದರೆ, ಈಗಿನ ಪರಿಸ್ಥಿತಿಗೆ ನಾನು ಯಾರನ್ನೂ ಹೊಣೆಯಾಗಿಸುವುದಿಲ್ಲ. ಇದಕ್ಕೆ ನಾವೆಲ್ಲರೂ ಹೊಣೆಯಾಗಿದ್ದೇವೆ. ಇದರಿಂದ ಮುಕ್ತವಾಗಿ, ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಶುದ್ದ ಗಾಳಿ ಸಿಗುವ ಹಾಗೆ ಮಾಡೋಣ" ಎಂದು ಈ ಬಗ್ಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನಕ್ಕಾಗಿ ದೇವರ ಮೊರೆ - ಡಿಸಿಎಂ ಡಿಕೆ ಶಿವಕುಮಾರ್‌ ನಿವಾಸದಲ್ಲಿ ಜೇನುಕಲ್‌ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ಪೂಜೆ!?