Skip to main content
ವಿಡಿಯೋ
1/3
metro

ಎಟಿಎಂ ಕ್ಯಾಶ್‌ವ್ಯಾನ್‌ ದಾಳಿ ಪ್ರಕರಣ - ಪೋಲಿಸರಿಂದ ಪ್ರಮುಖ ಸಂಚುಕೋರರ ಬೇಟೆ - 7.11 ಕೋಟಿ ರಿಕವರಿ!

By Shravanthi R
ಎಟಿಎಂ ಕ್ಯಾಶ್‌ವ್ಯಾನ್‌ ದಾಳಿ ಪ್ರಕರಣ - ಪೋಲಿಸರಿಂದ ಪ್ರಮುಖ ಸಂಚುಕೋರರ ಬೇಟೆ - 7.11 ಕೋಟಿ ರಿಕವರಿ!

ನಗರದಲ್ಲಿ ಹಗಲು ದರೋಡೆ ಪ್ರಕರಣವಾದ ಎಟಿಎಂ ಹಣ ತುಂಬಿಸಿದ್ದ ವ್ಯಾನ್‌ ಕಳ್ಳತನಕ್ಕೆ ಸಂಬಂಧಿಸಿದಂತೆ ನಗರ ಪೋಲಿಸರು ಪ್ರಮುಖ ಆರೋಪಿಗಳನ್ನು ವೇಗವಾಗಿ ಬಂಧಿಸುವಲ್ಲಿ ಕಾರ್ಯನಿರತರಾಗಿದ್ದಾರೆ.

ನವೆಂಬರ್‌ 19 ರಂದು ವರದಿಯಾದ ಎಟಿಎಂ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪೋಲಿಸರು ಆರೋಪಿಗಳನ್ನು ಭೇದಿಸುತ್ತಿದ್ದಾರೆ. ಈ ಪೈಕಿ, ಆಂಧ್ರದ ಮಹಿಳೆ ಸೇರಿದಂತೆ ಮೂವರು ಆರೋಪಿಗಳ ಜೊತೆಗೆ ಇದೀಗ ತಮಿಳುನಾಡಿನಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

ಎಟಿಎಂಗೆ ಹಣ ತುಂಬಿಸಲು ತೆರಳಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ 7.11 ಕೋಟಿ ದರೋಡೆ ಮಾಡಲಾಗಿದೆ. ಇದರಲ್ಲಿ 5.76 ಕೋಟಿಯನ್ನು ವಶಪಡಿಸಿಕೊಂಡಿರುವುದಾಗಿಯೂ; ಪ್ರಕರಣದ ಆರೇಳು ಮಂದಿ ಆರೋಪಿಗಳಲ್ಲಿ, ಈಗಾಗಲೇ 4 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ತಿಳಿಸಲಾಗಿದೆ.  OPPO K13 5G with 7000mAh and 80W SUPERVOOC Charger in-The-Box, ICY Purple (8GB, 128GB)

ಶಂಕಿತರ ಹೆಸರನ್ನು ಬಹಿರಂಗ ಪಡಿಸಿಲ್ಲವಾದರೂ ಈ ದರೋಡೆಯನ್ನು ವೆಬ್‌ ಸರಣಿಯಿಂದ ಪ್ರೇರಣೆ ಪಡೆದು ನಡೆಸಲಾಗಿದೆ ಎಂದು ಅನುಮಾನ ವ್ಯಕ್ತವಾಗಿದೆ. ಹಣ ಸಾಗಣೆಗೆ ತಿರುಪತಿಯಲ್ಲಿ ಇನೊವಾ ಕಾರು ಬಳಕೆ ಮಾಡಲಾಗಿದ್ದು ಅದನ್ನು ಜಪ್ತಿ ಮಾಡಲಾಗಿದೆ. ಕಾರಿನಲ್ಲಿದ್ದ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆಂದು ವರದಿಯಲ್ಲಿ ತಿಳಿದುಬಂದಿತ್ತು. ಈ ಸಂಬಂಧ ಪ್ರಕರಣದ ತನಿಖೆ ಇನ್ನಷ್ಟು ಚುರುಕುಗೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಚಳಿಗಾಲದ ಆರೋಗ್ಯ ಮತ್ತು ಫ್ಯಾಷನ್ ಗೈಡ್ - ಸೇವಿಸಬೇಕಾದ ಆಹಾರಗಳು ಮತ್ತು ಧರಿಸಬೇಕಾದ ಬಟ್ಟೆಗಳು