Skip to main content
ವಿಡಿಯೋ
1/3
general

ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಹುಕಾಲದ ನಂತರ ಜಗದೀಪ್‌ ಧನ್‌ಕರ್‌ ಅವರ ಮೊದಲ ಭಾಷಣ

By Shravanthi R
ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಹುಕಾಲದ ನಂತರ ಜಗದೀಪ್‌ ಧನ್‌ಕರ್‌ ಅವರ ಮೊದಲ ಭಾಷಣ

ಅನಾರೋಗ್ಯದ ಕಾರಣಗಳಿಂದ ಜುಲೈನಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜಗದೀಪ್‌ ಧನ್‌ಕರ್‌ ಅವರು ಸುಮಾರು ನಾಲ್ಕು ತಿಂಗಳ ಬಳಿಕ ಸಾರ್ವಜನಿಕವಾಗಿ ಮಾತನಾಡಿದ್ದಾರೆ.

ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಜಂಟಿ ಪ್ರಧಾನ ಕಾರ್ಯದರ್ಶಿ ಮನ್‌ಮೋಹನ್ ವೈದ್ಯ ಅವರ 'ಹುಮ್ ಔರ್ ಯೆಹ್ ವಿಶ್ವ' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರು ಭಾಗವಹಿಸಿ ಭಾಷಣ ಮಾಡಿದರು. ಈ ಮೂಲಕ ಅವರು ಸತತ ನಾಲ್ಕು ತಿಂಗಳುಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. 

ಇದೇ ಸಂದರ್ಭದಲ್ಲಿ ಅವರು, ಆರ್‌ಎಸ್‌ಎಸ್‌ ಅನ್ನು ಪ್ರಶಂಸಿಸಿದರು. ಪುಸ್ತಕದ ಕುರಿತು ವಿಮರ್ಶಿಸಿದರಲ್ಲದೇ, “ಸಮಯದ ಕೊರತೆಯಿಂದಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಚಕ್ರವ್ಯೂಹದಲ್ಲಿ ಸಿಲುಕಿದರೆ ಹೊರಬರುವುದು ತುಂಬಾ ಕಷ್ಟ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ ಎನ್ನಲಾಗಿದೆ. OnePlus Nord 5 | Snapdragon 8s Gen 3 | Stable 144FPS Gaming | Dual 50MP Flagship Camera | Powered by OnePlus AI | 8GB + 256GB | Dry Ice

ಧನ್‌ಕರ್‌ ಅವರು ಏಪ್ರಿಲ್ 2022 ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಈ ವರ್ಷದ ಜುಲೈನಲ್ಲಿ ಅಧಿವೇಶನ ಪ್ರಾರಂಭವಾದ ಕೇವಲ ಒಂದು ದಿನದಲ್ಲಿ ಆರೋಗ್ಯ ಸಮಸ್ಯೆಯಿರುವುದಾಗಿ ತಿಳಿಸಿ, ರಾಜೀನಾಮೆ ನೀಡಿದ್ದು ಚರ್ಚೆಗೀಡಾಯಿತು. ಇದನ್ನೂ ಓದು: ಎಟಿಎಂ ಕ್ಯಾಶ್‌ವ್ಯಾನ್‌ ದಾಳಿ ಪ್ರಕರಣ - ಪೋಲಿಸರಿಂದ ಪ್ರಮುಖ ಸಂಚುಕೋರರ ಬೇಟೆ - 7.11 ಕೋಟಿ ರಿಕವರಿ!