Skip to main content
ವಿಡಿಯೋ
1/3
general

New Labour Codes - ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳು ಜಾರಿ - ನ.26 ಕ್ಕೆ ವಿರೋಧಿತ ಪ್ರತಿಭಟನೆ!

By Shravanthi R
New Labour Codes - ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳು ಜಾರಿ - ನ.26 ಕ್ಕೆ ವಿರೋಧಿತ ಪ್ರತಿಭಟನೆ!

ಸ್ವತಂತ್ರ್ಯ ನಂತರದಿಂದ ಇದ್ದ ಕಾರ್ಮಿಕ ಸಂಹಿತೆ ನೀತಿಗಳ ಸುಧಾರಿತ ರೂಪಗಳಾಗಿ ಶುಕ್ರವಾರ ಜಾರಿಗೊಳಿಸಲಾಗಿರುವ ಕೇಂದ್ರ ಸರ್ಕಾರದ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳ ಪರಿಷ್ಕರಣೆಗೆ ಪರ - ವಿರೋಧಗಳು ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿಶ್ವಾಸಪೂರ್ಣ; ಕೇಂದ್ರ ಸರ್ಕಾರವು ಹೊರಡಿಸಿದ ಹೊಸ ಕಾರ್ಮಿಕ ಸಂಹಿತೆ ನೀತಿಗಳನ್ನು ಶುಕ್ರವಾರ (ನ. 22) ಜಾರಿಗೊಳಿಸಲು ಘೋಷಿಸಿತು. ನಾಲ್ಕು ನೂತನ ಕಾರ್ಮಿಕ ಸಂಹಿತೆಗಳಾದ ವೇತನ ಸಂಹಿತೆ (2019), ಕೈಗಾರಿಕೆ ಸಂಪರ್ಕ ಸಂಹಿತೆ (2020), ಸಾಮಾಜಿಕ ಭದ್ರತೆ ಕುರಿತ ಸಂಹಿತೆ (2020) ಹಾಗೂ ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಉದ್ಯೋಗ ಕುರಿತ ನಿಬಂಧನೆಗಳ ಸಂಹಿತೆ (2020) ಜಾರಿಗೊಳಿಸಲಾಗಿದೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ನಲ್ಲಿ ತಿಳಿಸಿರುವ ಪ್ರಧಾನಿ ಮೋದಿ “ಅಧಿಸೂಚಿತ ನೂತನ ಕಾರ್ಮಿಕ ಸಂಹಿತೆಗಳು ಸ್ವಾತಂತ್ರ್ಯ ನಂತರ ರೂಪಿಸಿರುವ ಸುಧಾರಿತ ಕಾರ್ಮಿಕ ಸಂಹಿತೆಗಳು. ಇದರಿಂದ ಕಾರ್ಮಿಕರ ಸಬಲೀಕರಣ ಸಾಧ್ಯವಾಗಲಿದೆ. ಈ ಸಂಹಿತೆಗಳಿಂದ ನಾರಿಶಕ್ತಿ ಹಾಗೂ ಯುವಶಕ್ತಿಗೆ ಸಾರ್ವತ್ರಿಕ ಸಾಮಾಜಿಕ ಬದ್ದತೆ ಹಾಗೂ ಲಾಭದಾಯಕ ಅವಕಾಶಗಳನ್ನು ಒದಗಿಸುವಲ್ಲಿ ಮೈಲಿಗಲ್ಲಾಗಲಿವೆ” ಎಂದು ತಿಳಿಸಿದ್ದಾರೆ. iQOO Z10x 5G (Ultramarine, 6GB RAM, 128GB Storage) | 6500 mAh Large Capacity Battery | Dimensity 7300 Processor | Military-Grade Durability

ಸಂಹಿತೆಗಳ ವಿರೋಧಿಸಿ ಬೃಹತ್‌ ಪ್ರತಿಭಟನೆ -

ಈ ಮೊದಲಿನ 29 ಕಾರ್ಮಿಕ ಕಾಯ್ದೆಗಳ ಬದಲಾಗಿ ಈ ನಾಲ್ಕು ಸಂಹಿತೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು, ಈ ಬಗ್ಗೆ ವಿರೋಧಗಳು ಕೇಳಿಬಂದಿದೆ ಎನ್ನಲಾಗಿದೆ. ಇದು ಜನವಿರೋಧಿ ಕೇಂದ್ರದ ಕರಾಳ ಕಾರ್ಮಿಕ ನೀತಿಗಳೆಂದು ಆಗ್ರಹಿಸಿ, ನ.26 ರಂದು ಸಂವಿಧಾನ ದಿನಾಚರಣೆ ಸಂದರ್ಭದಲ್ಲಿ ಕೇಂದ್ರದ ಶ್ರಮ ಶಕ್ತಿ ನೀತಿ 2025 ರ ಕರಡು ಪ್ರತಿಗಳನ್ನು ಸುಟ್ಟು ಪ್ರತಿಭಟಿಸಲಾಗುವುದೆಂದು ತಿಳಿಸಲಾಗಿದೆ. ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಹುಕಾಲದ ನಂತರ ಜಗದೀಪ್‌ ಧನ್‌ಕರ್‌ ಅವರ ಮೊದಲ ಭಾಷಣ