‘ಬಿಗ್ ಬಾಸ್ ಕನ್ನಡ ಸೀಸನ್ 12’ ಈ ವಾರ ದೊಡ್ಡ ತಿರುವು ಕಂಡಿದೆ. ರಕ್ಷಿತಾ ಶೆಟ್ಟಿ ಅವರ ಶಾಂತ, ಸಮಾಧಾನಕರ ಆಟವನ್ನು ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್‌ನಲ್ಲಿ ವಿಶೇಷವಾಗಿ ಹೊಗಳಿದರು. ಕಳೆದ ವಾರ ಅಶ್ವಿನಿ ಗೌಡ ಅವರಿಗೆ ಕಳಪೆ ಪಟ್ಟ ಸಿಕ್ಕಿದ್ದರೆ, ಈ ವಾರ ರಕ್ಷಿತಾ ಶೆಟ್ಟಿ ಅವರು ಕಿಚ್ಚನ ಚಪ್ಪಾಳೆ ಪಡೆದದ್ದು ಅವರ ಅಭಿಮಾನಿಗಳನ್ನು ಖುಷಿಪಡಿಸಿದೆ. ನಾಮಿನೇಷನ್‌ನಲ್ಲಿ ಇದ್ದರೂ ರಕ್ಷಿತಾ ಸೇಫ್ ಆಗಿದ್ದು ಅವರ ಆಟಕ್ಕೆ ಮತ್ತಷ್ಟು ಬಲ ನೀಡಿದೆ.
ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಆರಂಭದಿಂದಲೇ ಮನೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಅಶ್ವಿನಿ ಗೌಡ ಅವರಿಂದ ಟಾರ್ಗೆಟ್ ಆದರೂ, ರಕ್ಷಿತಾ ಅವರು ಶಾಂತವಾಗಿ ಪರಿಸ್ಥಿತಿಯನ್ನು ಹತ್ತಿಕ್ಕಿದರು. ಅಶ್ವಿನಿ ಗೌಡ ಅವರೇ ತಮಗೆ ಜಗಳ ಮಾಡಿದರೂ, ಅವರು ಉಪವಾಸ ಮಾಡಿದಾಗ ರಕ್ಷಿತಾ ತೋರಿಸಿದ ಕಾಳಜಿ ಮನೆ ಸದಸ್ಯರ ಮನಸೆಳೆದಿತ್ತು. ಅದನ್ನೇ ಕಿಚ್ಚ ಸುದೀಪ್ ಅವರು ಮೆಚ್ಚಿ ಚಪ್ಪಾಳೆ ನೀಡಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta
ವಾರ ಪೂರ್ತಿ ಮನೆಯಲ್ಲಿ ಜಗಳ, ಗಲಾಟೆ ನಡೆದಿದ್ದರೂ, ರಕ್ಷಿತಾ ತಮ್ಮ ವರ್ತನೆಯಲ್ಲಿ ಮಾನವೀಯತೆ, ತಾಳ್ಮೆ ತೋರಿದರು. "ತಪ್ಪುಗಳಾದರೂ ತಿದ್ದುಕೊಂಡು, ಹಿಂದಿನ ವ್ಯಕ್ತಿತ್ವಕ್ಕೆ ಮರಳಿ ಉತ್ತಮವಾಗಿ ಆಡುತ್ತಿದ್ದೀರಿ" ಎಂದು ಸುದೀಪ್ ಅವರು ಮೆಚ್ಚುಗೆಯ ಮಾತು ಹೇಳಿದರು. ಅಶ್ವಿನಿ ಗೌಡ ಅವರಿಗೆ ಸಹಾಯ ಮಾಡಿದ ವಿಷಯವನ್ನು ರಕ್ಷಿತಾ ಅವರು ಹೇಳಿಕೊಂಡಿಲ್ಲ ಎಂಬುದೂ ಸುದೀಪ್ ಅವರಿಗೆ ಇಷ್ಟವಾಯಿತು.ಇದನ್ನು ಓದಿ:ದರ್ಶನ್ ‘ಡೆವಿಲ್’ ಸಿನಿಮಾ ಬಿಡುಗಡೆ ದಿನಾಂಕ ಬದಲಾವಣೆ – ಹೊಸ ದಿನಾಂಕ ಪ್ರಕಟ..!ಇಲ್ಲಿದೆ ಮಾಹಿತಿ
ಇನ್ನೊಂದೆಡೆ, ಅಶ್ವಿನಿ ಗೌಡ ಅವರಿಗೆ ಈ ವಾರ ಕಠಿಣವಾಗಿತ್ತು. ಹಲವು ಜಗಳಗಳಲ್ಲಿ ಸಿಲುಕಿ, ಮತ್ತೊಮ್ಮೆ ಕಳಪೆ ಪಟ್ಟ ಪಡೆದು ಜೈಲಿಗೂ ಹೋಗಬೇಕಾಯಿತು. ವೀಕೆಂಡ್‌ನಲ್ಲಿ ಸುದೀಪ್ ಅವರಿಂದ ಕಠಿಣ ಕ್ಲಾಸ್ ಕೂಡ ಸಿಕ್ಕಿತು. ಮುಂದಿನ ದಿನಗಳಲ್ಲಿ ಅವರು ತಮ್ಮ ಆಟವನ್ನು ಬದಲಾಯಿಸದಿದ್ದರೆ ಇಮೇಜ್ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಹರಿದಾಡುತ್ತಿದೆ.
‘ಬಿಗ್ ಬಾಸ್ ಕನ್ನಡ 12’ರಲ್ಲಿ ಈಗಾಗಲೇ ಗಿಲ್ಲಿ ನಟ, ರಘು, ಧನುಷ್ ಮತ್ತು ರಕ್ಷಿತಾ ಶೆಟ್ಟಿ ಮಾತ್ರ ಕಿಚ್ಚನ ಚಪ್ಪಾಳೆ ಪಡೆದ ಸ್ಪರ್ಧಿಗಳು. ಈ ವಾರದ ಪ್ರದರ್ಶನದಿಂದ ರಕ್ಷಿತಾ ಶೆಟ್ಟಿ ಟಾಪ್ ಆಟಗಾರರ ಪಟ್ಟಿಯಲ್ಲಿ ಮತ್ತಷ್ಟು ದೃಢವಾಗಿ ನಿಂತಿದ್ದಾರೆ.