ಪುರಾಣಾಧಾರಿತ ಆನಿಮೇಟೆಡ್ ಸಿನಿಮಾ ‘ಮಹಾವತಾರ ನರಸಿಂಹ’ ಈಗ 98ನೇ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹತೆ ಪಡೆದಿದೆ. ಬಿಡುಗಡೆ ಆದ ಕ್ಷಣದಿಂದಲೇ ಪ್ರೇಕ್ಷಕರ ಮನ ಗೆದ್ದ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ಅಂತರಾಷ್ಟ್ರೀಯ ಸ್ಪರ್ಧೆಯಲ್ಲೂ ತನ್ನ ಹೆಸರು ಸೇರಿಸಿಕೊಂಡಿದೆ. ಅಂತಿಮ ಹಂತದ ಆಸ್ಕರ್ ನಾಮಿನೇಷನ್ ಪಟ್ಟಿ 2026ರ ಜನವರಿ 22ರಂದು ಹೊರಬೀಳಲಿದೆ.
2025ರ ಅತ್ಯಂತ ಯಶಸ್ವಿ ಸಿನಿಮಾಗಳ ಪೈಕಿ ‘ಮಹಾವತಾರ ನರಸಿಂಹ’ ಕೂಡೊಂದಾಗಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿದ್ದು, ಆನಿಮೇಟೆಡ್ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬಹುದೆಂಬುದನ್ನು ಸಾಬೀತು ಮಾಡಿದೆ. ಇದೀಗ ‘ಆನಿಮೇಟೆಡ್ ಫೀಚರ್ ಫಿಲ್ಮ್’ ವಿಭಾಗದಲ್ಲಿ ಆಸ್ಕರ್ ನಾಮಿನೇಷನ್‌ಗೆ ಅವಕಾಶ ಪಡೆದು ಭಾರತಕ್ಕೆ ಹೆಮ್ಮೆ ತರುವ ನಿರೀಕ್ಷೆ ಮೂಡಿಸಿದೆ.Fossil Men Leather Bronson Analog Black Dial Watch-Me3219, Band Color-Brown
ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು, ನಿರ್ದೇಶನವನ್ನು ಅಶ್ವಿನ್ ಕುಮಾರ್ ಮಾಡಿದ್ದಾರೆ. ನರಸಿಂಹ ಪುರಾಣ, ವಿಷ್ಣು ಪುರಾಣ ಮತ್ತು ಶ್ರೀಮದ್ಭಾಗವತ ಪುರಾಣದ ಆಧಾರದಲ್ಲಿ ಕಥೆಯನ್ನು ರೂಪಿಸಲಾಗಿದೆ. ಜುಲೈ 25ರಂದು ಬಿಡುಗಡೆಯಾದ ಈ ಸಿನಿಮಾ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಪ್ರದರ್ಶಿತವಾಗಿದೆ.
ಭಾರತ ಮಾತ್ರವಲ್ಲ, ವಿಶ್ವದ ಹೆಚ್ಚಿನ ಭಾಗಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಒಟ್ಟು 326 ಕೋಟಿ ರೂಪಾಯಿ ಗಳಿಸಿದೆ. ಆಸ್ಕರ್ ಸ್ಪರ್ಧೆಗೆ ಅರ್ಹತೆ ಪಡೆದು ಸಿನಿಮಾ ಮತ್ತೆ ಸುದ್ದಿಯಲ್ಲಿದೆ.ಇದನ್ನು ಓದಿ:ಬಿಗ್ ಬಾಸ್ ಕನ್ನಡ 12: ರಕ್ಷಿತಾ ಶೆಟ್ಟಿಗೆ ಕಿಚ್ಚ ಸುದೀಪ್ ಚಪ್ಪಾಳೆ – ಮನೆಯಲ್ಲಿ ದೊಡ್ಡ ಟ್ವಿಸ್ಟ್! ಮಾಹಿತಿ ಇಲ್ಲಿದೆ
ಈ ಬಾರಿ ಆಸ್ಕರ್ ನಾಮಿನೇಷನ್‌ಗೆ 35 ಆನಿಮೇಟೆಡ್ ಸಿನಿಮಾಗಳು ಪೈಪೋಟಿ ನೀಡುತ್ತಿವೆ. ‘ಮಹಾವತಾರ ನರಸಿಂಹ’ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದರೆ, ಆಸ್ಕರ್‌ಗೆ ನಾಮಿನೇಟ್ ಆಗುವ ಭಾರತದ ಮೊದಲ ಆನಿಮೇಟೆಡ್ ಸಿನಿಮಾ ಎಂಬ ಗೌರವ ಸಿಗಲಿದೆ.
ಆಸ್ಕರ್ ನಾಮಿನೇಷನ್‌ಗಳನ್ನು ಜನವರಿ 22, 2026ರಂದು ಪ್ರಕಟಿಸಲಾಗುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾರ್ಚ್ 15, 2026ರಂದು ನಡೆಯಲಿದೆ. ಭಾರತದಿಂದ ನೀರಜ್ ಘಯ್ವಾನ್ ನಿರ್ದೇಶನದ ‘ಹೋಮ್‌ಬೌಂಡ್’ ಸಿನಿಮಾ ಈಗಾಗಲೇ ‘ಅತ್ಯುತ್ತಮ ಅಂತರಾಷ್ಟ್ರೀಯ ಚಿತ್ರ’ ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆ ಆಗಿರುವುದು ಮತ್ತೊಂದು ಹೆಮ್ಮೆ.