Skip to main content
ವಿಡಿಯೋ
1/3
cinema

ಪ್ರಭಾಸ್ 'ದಿ ರಾಜಾ ಸಾಬ್' ಸಿನಿಮಾ ರಿಲೀಸ್ ಫಿಕ್ಸ್..ಸಂಕ್ರಾಂತಿಗೆ ಪ್ರಭಾಸ್‌ ಕೊಡ್ತಾರಾ ಪೊಂಗಲ್‌ ..!ಇಲ್ಲಿದೆ ಮಾಹಿತಿ

By Ram Chethan
ಪ್ರಭಾಸ್ 'ದಿ ರಾಜಾ ಸಾಬ್' ಸಿನಿಮಾ ರಿಲೀಸ್ ಫಿಕ್ಸ್..ಸಂಕ್ರಾಂತಿಗೆ ಪ್ರಭಾಸ್‌ ಕೊಡ್ತಾರಾ ಪೊಂಗಲ್‌ ..!ಇಲ್ಲಿದೆ ಮಾಹಿತಿ

ಪ್ರಭಾಸ್ ನಟಿಸಿರುವ ‘ದಿ ರಾಜಾ ಸಾಬ್’ ಸಿನಿಮಾ 2026ರ ಜನವರಿ 9ರಂದು ಬಿಡುಗಡೆಯಾಗಲಿದೆ. ಮೊದಲ ಸಿಂಗಲ್ ‘ರೆಬೆಲ್ ಸಾಬ್’ ಪ್ರೋಮೋ ಔಟ್ ಆಗಿ ಟ್ರೆಂಡ್ ಆಗುತ್ತಿದೆ.

ಪ್ರಭಾಸ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ‘ದಿ ರಾಜಾ ಸಾಬ್’ ಈಗ ಅಧಿಕೃತವಾಗಿ ತನ್ನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಸಿನಿಮಾ 2026ರ ಜನವರಿ 9ರಂದು, ಸಂಕ್ರಾಂತಿ–ಪೊಂಗಲ್ ಹಬ್ಬದ ಸಂದರ್ಭದಲ್ಲಿ ಹೊರಬರಲಿದೆ. ಹಬ್ಬದ ಸೀಸನ್‌ಗೆ ದೊಡ್ಡ ಮಟ್ಟದ ರಿಲೀಸ್ ಪ್ಲಾನ್ ಮಾಡಿರುವ ತಯಾರಕರು, ಪ್ರೇಕ್ಷಕರಿಗೆ ವಿಶೇಷ ಉಡುಗೊರೆಯಂತೆ ಮೊದಲ ಹಾಡಿನ ಪ್ರೋಮೋವನ್ನು ಬಿಡುಗಡೆ ಮಾಡಿದ್ದಾರೆ.Fossil Men Leather Bronson Analog Black Dial Watch-Me3219, Band Color-Brown

ಚಿತ್ರದ ಮೊದಲ ಸಿಂಗಲ್ ‘ರೆಬೆಲ್ ಸಾಬ್’ ನವೆಂಬರ್ 23, 2025 ರಂದು ಬಿಡುಗಡೆಯಾಗುತ್ತಿದೆ. ಹಾಡಿನ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದ್ದು, ಪ್ರಭಾಸ್ ಅವರ ಸ್ಟೈಲಿಷ್ ಲುಕ್ ಮತ್ತು ಎನರ್ಜಿ ಅಭಿಮಾನಿಗಳನ್ನು ಖುಷಿಪಡಿಸಿದೆ. ಚಿತ್ರ ತಂಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ಈ ಅಪ್ಡೇಟ್‌ನ್ನು ಹಂಚಿಕೊಂಡಿದ್ದು, ಸಿನಿಮಾ ಕುರಿತು ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ.ಇದನ್ನು ಓದಿ:ಮಹಾವತಾರ ನರಸಿಂಹ ಸಿನಿಮಾ 98ನೇ ಆಸ್ಕರ್ ಸ್ಪರ್ಧೆಗೆ ಅರ್ಹ...ಅಂತಿಮ ನಾಮಿನೇಷನ್ ಜನವರಿ 22ಕ್ಕೆ ..!ಹೆಚ್ಚಿನ ಮಾಹಿತಿ ಇಲ್ಲಿದೆ

‘ದಿ ರಾಜಾ ಸಾಬ್’ ಸಿನಿಮಾ ಬಗ್ಗೆ ಈಗಾಗಲೇ ಪ್ರೇಕ್ಷಕರಲ್ಲಿ ದೊಡ್ಡ ಕುತೂಹಲ ಇದೆ. ಪ್ರಭಾಸ್ ಅವರ ಹೊಸ ಪಾತ್ರ, ಭರ್ಜರಿ ತಂತ್ರಜ್ಞಾನ ಮತ್ತು ಗ್ರ್ಯಾಂಡ್ ಪ್ರೆಸೆಂಟೇಷನ್‌ಗಾಗಿ ಈ ಸಿನಿಮಾ ಚರ್ಚೆಯಲ್ಲಿದೆ. ಹಬ್ಬದ ವೀಕಿನಲ್ಲಿ ಬಿಡುಗಡೆಯಾಗುತ್ತಿರುವುದರಿಂದ, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಆರಂಭ ನಿರೀಕ್ಷಿಸಲಾಗಿದೆ