ಸೆಪ್ಟೆಂಬರ್ 27ರಂದು ಕರೂರ್‌ನಲ್ಲಿ ನಡೆದ ದುರಂತ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಘಟನೆ ನಂತರ, ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ನಾಯಕ ವಿಜಯ್ ಅವರು ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು ಎರಡು ತಿಂಗಳ ವಿರಾಮದ ಬಳಿಕ, ವಿಜಯ್ ಅವರು ಭಾನುವಾರ ಕಾಂಚೀಪುರಂನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ವಿಶೇಷ ಸಭೆ ನಡೆಸಿ ತಮ್ಮ ‘ಮೀಟ್ ದಿ ಪೀಪಲ್’ ಅಭಿಯಾನವನ್ನು ಮತ್ತೆ ಪ್ರಾರಂಭಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.Fossil Men Leather Bronson Analog Black Dial Watch-Me3219, Band Color-Brown
TVK ಕಾರ್ಯಕರ್ತರಲ್ಲಿ ಈ ಕಾರ್ಯಕ್ರಮಕ್ಕೆ ದೊಡ್ಡ ನಿರೀಕ್ಷೆ ಇದ್ದು, ಭಾರೀ ಜನಸಂದಣಿ ತಪ್ಪಿಸಲು ವಿಶೇಷ ವ್ಯವಸ್ಥೆಯನ್ನೂ ಮಾಡಿದ್ದಾರೆ. ಸಾಮಾಜಿಕ ಜಾಲತಾಣ X (ಮಾಜಿ Twitter) ನಲ್ಲಿ ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ಅವರು ಮಾಹಿತಿ ಹಂಚಿಕೊಂಡಿದ್ದು, ಕಾಂಚೀಪುರಂ ಜಿಲ್ಲೆಯ ಕಾರ್ಯಕರ್ತರ ಪೈಕಿ QR ಕೋಡ್ ಮೂಲಕ ಪ್ರವೇಶ ಟಿಕೆಟ್ ಪಡೆದ 2,000 ಮಂದಿಗೆ ಮಾತ್ರ ಈ ಒಳಾಂಗಣ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನು ಓದಿ:ಪ್ರಭಾಸ್ 'ದಿ ರಾಜಾ ಸಾಬ್' ಸಿನಿಮಾ ರಿಲೀಸ್ ಫಿಕ್ಸ್..ಸಂಕ್ರಾಂತಿಗೆ ಪ್ರಭಾಸ್ ಕೊಡ್ತಾರಾ ಪೊಂಗಲ್ ..!ಇಲ್ಲಿದೆ ಮಾಹಿತಿ
ವಿಜಯ್ ಅವರ ಈ ಸಭೆ, ಪಕ್ಷದ ಕಾರ್ಯಕರ್ತರಿಗೆ ಹೊಸ ಉತ್ಸಾಹ ನೀಡುವ ನಿರೀಕ್ಷೆಯಿದೆ. ಕರೂರ್ ದುರಂತದ ನಂತರ ಸಾರ್ವಜನಿಕ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡಿದ್ದ ವಿಜಯ್ ಅವರು, ಇದೀಗ ಪುನಃ ಜನಸಂಪರ್ಕ ಅಭಿಯಾನಕ್ಕೆ ಮರುಪ್ರಾರಂಭ ಸಿಗುತ್ತಿರುವುದು ರಾಜಕೀಯ ವಲಯದಲ್ಲೂ ಚರ್ಚೆಯ ವಿಷಯವಾಗಿದೆ.