ನವೆಂಬರ್ 10 ರಂದು ದೆಹಲಿಯಲ್ಲಿ ನಡೆಸಿದ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳು ಬೆಳಕಿಗೆ ಬರುತ್ತಲಿದೆ. ಇದೀಗ ಏಳು ಜನರನ್ನು ಬಂಧಿಸಲಾಗಿದ್ದು, ಈ ಸಂಬಂಧಿತ ಮತ್ತೋರ್ವ ಉಗ್ರನನ್ನು ಸೆರೆಹಿಡಿಯಲಾಗಿದೆ. ಈ ಕುಕೃತ್ಯಕ್ಕೆ ವೈದ್ಯರಿಂದಲೇ ದೇಣಿಗೆ ನೀಡಲಾಗಿತ್ತೆಂದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಕೇಸ್‌ನಲ್ಲಿ ಶಾಮೀಲಾಗಿರುವ ವೈದ್ಯ ಉಗ್ರರನ್ನು ಪೋಲಿಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಬಂಧಿತ ಆರೋಪಿ ಮುಜಮ್ಮಿಲ್ ಗನೈ ಸ್ಪೋಟಕ ಮಾಹಿತಿ ತಿಳಿಸಿದ್ದಾನೆ. ಸ್ಪೋಟಕ್ಕೆ ಬೇಕಾಗಿದ್ದ ಅಗತ್ಯ ಸಾಮಗ್ರಿಗಳನ್ನು ಖರೀದಿಗೆ ಐವರು ವೈದ್ಯರು ಹಣ ನೀಡಿದ್ದರು ಎಂದು ಬಾಯಿಬಿಟ್ಟಿದ್ದಾನೆ. ಈ ಭಯೋತ್ಪಾದಕ ದಾಳಿ ನಡೆಸಲು ಎರಡು ವರ್ಷಗಳಿಂದ ಸಂಚು ರೂಪಿಸಲಾಗಿತ್ತೆಂದು ವೈಟ್‌ಕಾಲರ್ ಟೆರರ್‌ನ ಪ್ರಮುಖ ಆರೋಪಿ ತಿಳಿಸಿದ್ದಾನೆಂದು ಹೇಳಲಾಗಿದೆ. Redmi 13 5G Prime Edition, Hawaiian Blue, 8GB+128GB | India Debut SD 4 Gen 2 AE | 108MP Pro Grade Camera | 6.79in Largest Display in Segment
ತನಿಖಾಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಲೇ ಉಗ್ರವಾದ ನಡೆಸುತ್ತಿದ್ದ ಪುಲ್ವಾಮಾ ಮೂಲದ ತುಫೈಲ್ ನಿಯಾಜ್ ಭಟ್ ಎಂಬಾತನನ್ನು ಬಂಧಿಸಿರುವುದಾಗಿದೆ ವರದಿ ತಿಳಿಸಿದೆ. ಮತ್ತೊಂದೆಡೆ, ಅಲ್- ಫಲಾಹ್ ವಿಶ್ವವಿದ್ಯಾಲಯಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ತನಿಖೆ ಚುರುಕುಗೊಳಿಸಿರುವ ಎನ್‌ಐಎಯಿಂದ ಮತ್ತಷ್ಟು ಮಾಹಿತಿ ಬಯಲಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಚಂಡೀಗಢಕ್ಕೆ ಲೆಫ್ಟಿನೆಂಟ್ ಗರ್ವನರ್ ನೇಮಿಸುವ ಕೇಂದ್ರದ ಮಸೂದೆಗೆ ಪಂಜಾಬ್ ಸರ್ಕಾರದಿಂದ ವಿರೋಧ!