Skip to main content
ವಿಡಿಯೋ
1/3
entertainment

ಸ್ಮೃತಿ ಮಂದಾನಗೆ ಮದುವೆ ಸಂಭ್ರಮ - ಪಲಾಶ್‌ ಮುಚ್ಚಲ್‌ ಜೊತೆಗೆ ಪ್ರೇಮವಿವಾಹದ ಸವಿಕ್ಷಣಗಳು

By Shravanthi R
ಸ್ಮೃತಿ ಮಂದಾನಗೆ ಮದುವೆ ಸಂಭ್ರಮ - ಪಲಾಶ್‌ ಮುಚ್ಚಲ್‌ ಜೊತೆಗೆ ಪ್ರೇಮವಿವಾಹದ ಸವಿಕ್ಷಣಗಳು

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌ ಅವರೊಂದಿಗೆ ಇಂದು (ನ.23) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಅದ್ಭುತ ಆಟಗಾರ್ತಿ ಸ್ಮೃತಿ ಮಂದಾನ ಅವರು, ಸಂಗೀತ ಸಂಯೋಜಕ ಪಲಾಶ್‌ ಮುಚ್ಚಲ್‌ ಅವರೊಟ್ಟಿಗೆ ಹಸಮಣೆಯೇರಲಿದ್ದಾರೆ. ಸ್ಟಾರ್‌ ಬ್ಯಾಟರ್‌ ಎನಿಸಿರುವ ಅವರು, ಗಾಯಕಿ ಪಲಾಕ್‌ ಮುಚ್ಚಲ್‌ ಅವರ ಸಹೋದರರಾಗಿರುವ ಪಲಾಶ್‌ ಮುಚ್ಚಲ್‌ ಅವರೊಟ್ಟಿಗೆ ಬಹುಕಾಲದಿಂದ ಪ್ರೀತಿಸುತ್ತಿದ್ದು, ಇಂದು (ನ.23) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ಈ ಸಂಭ್ರಮಕ್ಕೆ ಸಾಕ್ಷಿಯಾಗಿ ನೆನ್ನೆ (ನ. 22) ಹಲ್ದಿ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಈಗಾಗಲೇ ಮುದ್ದಾದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಈ ಜೋಡಿಯಿಂದ ಮತ್ತೊಮ್ಮೆ ಕ್ರಿಕೆಟ್‌ ಹಾಗೂ ಸಿನಿಮಾ, ಮನರಂಜನೆ ಕ್ಷೇತ್ರದ ನಂಟಿರುವ ಗಂಡ - ಹೆಂಡತಿಯರ ಸಾಲಿಗೆ ಸೇರ್ಪಡೆಯಾಗಿದೆ. ಇವರಿಬ್ಬರ ಸಂಭ್ರಮದ ಮದುವೆಯಲ್ಲಿ ಗಣ್ಯರು, ಆಟಗಾರರು, ಕಲಾವಿದರು ಭಾಗಿಯಾಗಿ ಮಿಂಚಿದ್ದಾರೆ. iQOO Neo 10R 5G (Raging Blue, 8GB RAM, 128GB Storage) | Snapdragon 8s Gen 3 Processor | India's Slimmest 6400mAh Battery Smartphone | Segment's Most Stable 90FPS for 5 Hours

ಪಲಾಶ್‌ ಅವರ ಅಕ್ಕ ಪಲಾಕ್‌ ಮುಚ್ಚಲ್‌ ಕಳೆದ ದಶಕದಿಂದ ಗಾನಪ್ರಿಯರನ್ನು ರಂಜಿಸುತ್ತಾ ಬಂದಿದ್ದಾರೆ. ಅವರು ಕನ್ನಡದಲ್ಲಿ ಹಾಡಿರುವ ಪ್ರತೀ ಹಾಡು ಸಹ ಕನ್ನಡಿಗರ ಮನದಲ್ಲಿ ಅಚ್ಚೊತ್ತಿದೆ. ಅಯೋಗ್ಯ ಚಿತ್ರದ “ಏನಮ್ಮಿ ಏನಮ್ಮಿ”, ಅಧ್ಯಕ್ಷ ಚಿತ್ರದ “ಸುಮ್‌ ಸುಮ್ನೆ”, ರಣವಿಕ್ರಮದ “ನೀನೇ ನೀನೇ” ಹಾಡುಗಳೂ ಸೇರಿದಂತೆ ಮುಂತಾದ ಸುಮಧುರ ಹಾಡುಗಳಿಂದ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಪ್ರಭಾಸ್ 'ದಿ ರಾಜಾ ಸಾಬ್' ಸಿನಿಮಾ ರಿಲೀಸ್ ಫಿಕ್ಸ್..ಸಂಕ್ರಾಂತಿಗೆ ಪ್ರಭಾಸ್‌ ಕೊಡ್ತಾರಾ ಪೊಂಗಲ್‌ ..!ಇಲ್ಲಿದೆ ಮಾಹಿತಿ