ಮಕ್ಕಳು ನಾಗರೀಕ ಸಮಾಜದ ಆಸ್ತಿ. ಈಗಿನ GenZ ಕಾಲದಲ್ಲಿ ಮಕ್ಕಳು, ಸ್ಪೋರ್ಟಿವ್ ಇರಬಹುದು. ಆದರೆ, ಅವರಲ್ಲಿನ ಮಾನವೀಯ ಗುಣಾಂಶಗಳು ಶಿಕ್ಷಣದ ಒಂದು ಭಾಗವೇ ಆಗಿದೆ. ಅವರು ಪಡೆವ ಶಿಕ್ಷಣವು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಅವರ ಸಂಪೂರ್ಣ ಶೈಕ್ಷಣಿಕ ಕಲಿಕೆ ಮತ್ತು ಬೆಳವಣಿಗೆಗಾಗಿ ಶಿಕ್ಷಣವೆಂಬ ಆಶಾಕಿರಣವು ಮುನ್ನಲೆಯಲ್ಲಿದೆ.
ಮೊಟ್ಟಮೊದಲು, ಮಕ್ಕಳಿಗೆ ಮನೆಯೇ ಪಾಠ ಶಾಲೆಯಾಗಿರುತ್ತದೆ. ಹೀಗಾಗಿ, ಮೌಲ್ಯ ಶಿಕ್ಷಣದ ಅರಿವು, ಸಾಮರ್ಥ್ಯವನ್ನು ಮೊದಲುಗೊಳಿಸಬೇಕು. ಇದು ಮೊದಲುಗೊಳ್ಳುವುದು ಕೌಟುಂಬಿಕ ಮಾನದಂಡಗಳಿಂದ. ಇಲ್ಲಿಂದ ಮೊದಲಾಗಿ, ಅವರ ನೈಸರ್ಗಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಪುಷ್ಠಿ ದೊರಕುತ್ತದೆ.
ಇವುಗಳನ್ನು ತಿಳಿಯಪಡಿಸುವುದಕ್ಕಿಂತಲೂ, ಅದರ ಆಪೋಷನವು ಪ್ರತಿಯೊಬ್ಬರ ವ್ಯಕ್ತಿತ್ವ ಮತ್ತು ನಡವಳಿಕೆಗೆ ಸಂಬಂಧಪಟ್ಟಿದ್ದಾಗಿರುತ್ತದೆ. ಈ ಕುರಿತು, ಹೊಂದಬೇಕಾದ ಕೆಲವೊಂದು ಮೌಲ್ಯಯುತ ಗುಣಾಂಶಗಳು ಇಂತಿವೆ:
ಗೌರವಯುತ ಆದ್ಯತೆ - ಮಕ್ಕಳ ಪೋಷಕರು ಹಾಗೂ ಪಾಲಕರು ತಾವು ತೋರುವ ಪ್ರವೃತ್ತಿಯಿಂದ ಅವರು ಪ್ರಭಾವಿತರಾಗಿರುತ್ತಾರೆ. ಈ ನಿಟ್ಟಿನಲ್ಲಿ, ಮಕ್ಕಳ ಶಿಕ್ಷಣ ಮತ್ತು ಕಲಿಕೆ ವಿಷಯವಾಗಿ ಅವರಿಗೆ ನೀಡಬೇಕಾದ ಸಲಹೆ ಮತ್ತು ಸೂಚನೆಯನ್ನು ಅವರ ಆದ್ಯತೆ ಮೇರೆಗೆ ಸೂಚಿಸುವುದು. Magnetic Educational Chess Board Set with Folding Chess Board 2 Plyaers Travel Toys for Kids and Adults (10 Inch) (Black Color)
ಪ್ರಾಮಾಣಿಕೃತ ಭಾವನೆ - ಮಕ್ಕಳ ಮಾನಸಿಕ ಸಮತೋಲನಕ್ಕೆ ಅವರ ಭಾವನೆಗಳಿಗೆ ಸ್ಪಂದಿಸಬೇಕಾದ್ದು ಅತಿಮುಖ್ಯ. ಸಾವಧಾನದಿಂದ ಕೂತು ಅವರನ್ನು ಅರ್ಥೈಸಿಕೊಳ್ಳುವುದು. ಇದನ್ನೂ ಓದಿ: ಚಂಡೀಗಢಕ್ಕೆ ಲೆಫ್ಟಿನೆಂಟ್ ಗರ್ವನರ್ ನೇಮಿಸುವ ಕೇಂದ್ರದ ಮಸೂದೆಗೆ ಪಂಜಾಬ್ ಸರ್ಕಾರದಿಂದ ವಿರೋಧ!
ನಮ್ಯತೆ ಹಾಗೂ ಕರುಣೆ - ಮಕ್ಕಳ ಮನಸ್ಸು ಚಂಚಲವಾಗಿದ್ದು, ಅವರ ವರ್ತನೆಗಳಲ್ಲಿ ಸವಾಲುಗಳು ಕಂಡುಬಂದರೆ, ಸಹಾನುಭೂತಿಯಿಂದ ಅವರನ್ನು ಗಮನಿಸುವುದು ಮತ್ತು ಕಾಳಜಿವಹಿಸುವುದು.
ಚಾರಿತ್ರ್ಯ ಮಾರ್ಗಸೂಚಿ - ಸನ್ನಡತೆ ಮತ್ತು ಸಚ್ಚಾರಿತ್ರ್ಯದ ಕುರಿತು ಅವಲೋಕಿಸಲು ಮಕ್ಕಳಿಗೆ ಸಹಕರಿಸುವುದು ಮತ್ತು ಸರಿಯಾದ ಮಾರ್ಗಸೂಚಿಯನ್ನು ತಿಳಿಸುವುದು.
ನೈತಿಕ ಮೌಲ್ಯ ಹಾಗೂ ಶಿಸ್ತು - ಮಕ್ಕಳ ಮೌಲ್ಯ ಶಿಕ್ಷಣದ ಪ್ರಮುಖ ಗುರಿಯು ನೈತಿಕತೆಯನ್ನು ಹೊಂದುವುದು. ಇದರಲ್ಲಿ ಸತ್ಯಸಂಧತೆ, ಪರಸ್ಪರ ಗೌರವ, ಧೈರ್ಯ, ಕೃತಜ್ಞತೆ, ಜವಾಬ್ದಾರಿ, ತಾಳ್ಮೆಯ ಕುರಿತು ಸ್ನೇಹಪರತೆಯಿಂದ ಇರುವುದು. ಇದನ್ನೂ ಓದಿ: ಅಧಿಕಾರ ಹಸ್ತಾಂತರ ಕಿತ್ತಾಟದಿಂದ ಆಡಳಿತ ನಿಷ್ಕ್ರಿಯವಾಗಿದೆ, ಕಾಂಗ್ರೆಸ್ ಹೈಕಮಾಂಡ್ ಸಿಎಂ ಯಾರೆಂದು ಸ್ಪಷ್ಟಪಡಿಸಬೇಕು - ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ!