ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡ ಬಳಿಕ ನಟಿ ಮಂಜು ಭಾಷಿಣಿ ಈಗ ಮತ್ತೆ ಕಿರುತೆರೆಯಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಅವರು ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಶ್ರೀ ಗಂಧದಗುಡಿ’ ತಂಡಕ್ಕೆ ಸೇರಿದ್ದಾರೆ. ಈ ಸುದ್ದಿಯಿಂದ ಅವರ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿದೆ.
ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿಯಲ್ಲಿ ಮಂಜು ಭಾಷಿಣಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಇನ್ನೂ ರಹಸ್ಯ. ಇದು ಕೇವಲ ಅತಿಥಿ ಪಾತ್ರವೇ ಅಥವಾ ಮುಂದುವರಿಯುವ ಪ್ರಮುಖ ಪಾತ್ರವೇ ಅನ್ನುವುದನ್ನು ಚಾನಲ್ ಇನ್ನೂ ಬಹಿರಂಗಪಡಿಸಿಲ್ಲ. ಧಾರಾವಾಹಿಯ ಮುಂದಿನ ಕಂತುಗಳಲ್ಲಿ ಇದರ ಉತ್ತರ ಸಿಗಲಿದೆ.Arayna Women's Cotton Printed Floral Straight Kurta with Palazzo Pants and Dupatta
ಮಂಜು ಭಾಷಿಣಿ ಕಿರುತೆರೆಯ ಜನಪ್ರಿಯ ಮುಖ. ಅವರು ‘ಸಿಲ್ಲಿ ಲಲ್ಲಿ’ಯಲ್ಲಿ ಲಲಿತಾಂಬ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ನಂತರ ‘ಪುಟ್ಟಕ್ಕನ ಮಕ್ಕಳು’ಯಲ್ಲಿ ಬಡ್ಡಿ ಬಂಗಾರಮ್ಮ ಪಾತ್ರದಲ್ಲೂ ಗಮನ ಸೆಳೆದರು. ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಭಾಗವಹಿಸಿ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಕೆಲವೇ ದಿನಗಳಿದ್ದರೂ ಅವರ ನೇರಸ್ವಭಾವ ಮತ್ತು ಅಭಿಪ್ರಾಯ ಹಂಚಿಕೊಳ್ಳುವ ಶೈಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.ಇದನ್ನು ಓದಿ:ಮಹಾವತಾರ ನರಸಿಂಹ ಸಿನಿಮಾ 98ನೇ ಆಸ್ಕರ್ ಸ್ಪರ್ಧೆಗೆ ಅರ್ಹ...ಅಂತಿಮ ನಾಮಿನೇಷನ್ ಜನವರಿ 22ಕ್ಕೆ ..!ಹೆಚ್ಚಿನ ಮಾಹಿತಿ ಇಲ್ಲಿದೆ
ಬಿಗ್ ಬಾಸ್‌ನಿಂದ ಹೊರಬಂದ ನಂತರ ಮಂಜು ಭಾಷಿಣಿ ಮತ್ತೆ ಧಾರಾವಾಹಿಗೆ ಮರಳುತ್ತಿರುವುದು ಅವರಿಗೇ ದೊಡ್ಡ ಅವಕಾಶ. ಸಂಜನಾ ಬುರ್ಲಿ ಸೇರಿದಂತೆ ಹಲವು ನಟರು ನಟಿಸುತ್ತಿರುವ ‘ಶ್ರೀ ಗಂಧದಗುಡಿ’ಯಲ್ಲಿ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.
ಅಭಿಮಾನಿಗಳು ಮಂಜು ಭಾಷಿಣಿಯ ಹೊಸ ಅವತಾರವನ್ನು ನೋಡಲು ಕಾತುರದಿಂದ ಎದುರು ನೋಡುತ್ತಿದ್ದಾರೆ.