Skip to main content
ವಿಡಿಯೋ
1/3
general

ಪುಟಾಣಿಗಳು ‌ಆಟಕ್ಕೂ ಸೈ, ಶಿಸ್ತಿಗೂ ಜೈ!

By Shravanthi R
ಪುಟಾಣಿಗಳು ‌ಆಟಕ್ಕೂ ಸೈ, ಶಿಸ್ತಿಗೂ ಜೈ!

ಆಟದ ಜೊತೆಗೆ ಶಿಸ್ತು, ಸಹಕಾರ, ಪರಿಸರ ಸಂರಕ್ಷಣೆ, ದೇಶಪ್ರೇಮ, ಸೇವಾ ಮನೋಭಾವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಿರುವ Bharath Scouts and Guides Youth movement ಎಂಬುದು, ಮಕ್ಕಳು ನಾಳೆ ಉತ್ತಮ ನಾಗರಿಕರಾಗಿ ಬೆಳೆವಂತೆ ಮಾಡುತ್ತದೆ. ‘Do Your Best’ ಎಂಬ ಧೀಮಂತ್ರದೊಂದಿಗೆ ಮಕ್ಕಳಿಗೆ ಶಕ್ತಮನೋಭಾವವನ್ನು ಕಲ್ಪಿಸಿಕೊಡುತ್ತದೆ.

ಆಟದ ಜೊತೆ ಪಾಠ ಕಲಿಸುವ ಕೋರ್ಸ್ ಅದುವೇ "Cubs" & "Bulbuls" - Bharat Scouts and Guides ಸಂಸ್ಥೆಯೂ ಪುಟ್ಟ ಮಕ್ಕಳಿಗಾಗಿ ಮೊದಲ ಹಂತದ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮಕ್ಕಳಿಗೂ ಶಾಲೆ ಹಂತದಲ್ಲೇ ಓದಿನ ಜೊತೆ ಪಾಠದ ಸಿಟಿಜನ್ ಡ್ಯೂಟಿ ಹೇಳಿಕೊಡುತ್ತದೆ. ಯೆಸ್, Cubs ಹುಡುಗರಿಗಾಗಿ ಹಾಗೇ Bulbuls ಹುಡುಗಿಯರಿಗಾಗಿ ಇರುವ ತರಬೇತಿಯಾಗಿದೆ.

5 ರಿಂದ 10 ವರ್ಷದ ಮಕ್ಕಳು ಈ ತರಬೇತಿ ಪಡೆಯಬಹುದು. ಪ್ರಾಥಮಿಕ ಶಾಲಾ ಹಂತದಲ್ಲಿ 1 ರಿಂದ 5 ನೇ ತರಗತಿವರೆಗೂ ಕಲಿಸಬಹುದಾಗಿದೆ. ಈ ಸಮಯದಲ್ಲಿ ಶಿಸ್ತು, ಸರದಿ, ನಿಂತು, ನಡೆದು ಹೋಗುವುದು ,ಜತೆಗೂಡಿ ಕೆಲಸ ಮಾಡುವುದು, ಸಹಕಾರ, ಪರಿಸರ ಸಂರಕ್ಷಣೆ, ಆಟಗಳ ಮೂಲಕ ವ್ಯಕ್ತಿತ್ವ ಅಭಿವೃದ್ಧಿ, ರಾಷ್ಟ್ರಭಕ್ತಿ ಮತ್ತು ಸೇವಾ ಮನೋಭಾವ, ಕಲೆ, ಹಾಡು, ನೃತ್ಯ, ಕ್ರೀಡೆ, ಮೋಜಿನ ಚಟುವಟಿಕೆಗಳು, ಪ್ರಾಮಾಣಿಕತೆ ಮತ್ತು ಶಪಥ ಹೀಗೆ ಹಲವು ಚಟುವಟಿಕೆ ಮಾಡಿಸಲಾಗುತ್ತದೆ.

ಹಾಗೇ ಪ್ರತಿ ಬಾರಿ Cubs & Bulbul ನಲ್ಲಿ Promise (Oath) ಪಡೆಯಲಾಗುತ್ತದೆ.

“I promise to do my best, to do my duty to God and my country, to keep the Cub/Bulbul law, and to do a good turn every day.” Cubelelo Drift 3M v3 3x3 Magnetic Speedcube (Standard) | Latest Version with New & Improved Internal Structure for Smooth Turns & Stability | Cube Toy for 6-10 Years Old Boys Girls Adults

Pravesh ಪ್ರಾರಂಭಿಕ ಪರೀಕ್ಷೆ, Pratham Charan 1st Star ಮೂಲ ಕೌಶಲ್ಯ ತರಬೇತಿ, Dwitiya Charan 2nd Star ಉನ್ನತ ಕಲಿಕೆಗಳು, Heerak - Golden Arrow Award ವಿಶೇಷ ಸಾಧನೆ ಎಂದು ಪರಿಗಣಿಸಲಾಗುತ್ತದೆ.

ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ವೃದ್ಧಿ, ಶಿಸ್ತು ಮತ್ತು ಸಾಮಾಜಿಕ ಸೇವೆ ಕಲಿಯಲು ಸಹಾಯ ಮಾಡಲಾಗುತ್ತದೆ. ಮುಂದುವರೆದು Scouts & Guides 6th std–12th std ಹಂತಕ್ಕೆ ಬಲವಾದ ನೆಲೆ ಆಗಿದೆ. ಸ್ಪರ್ಧೆ, ಕ್ಯಾಂಪ್, ಸಾಹಸ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವು ಇದೆ.

Do your best ಇದು ಈ ತರಬೇತಿಯ ಮೂಲಮಂತ್ರವಾಗಿದೆ. ಸರಳವಾಗಿ ಹೇಳುವುದಾದರೆ Cubs ಅಂಡ್ Bulbuls ಆಟ, ಶಿಕ್ಷಣ, ಶಿಸ್ತು, ಸೇವೆ, ವ್ಯಕ್ತಿತ್ವ ನಿರ್ಮಾಣ ಆಗಿದೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ನಂತರದ ವೃತ್ತಿಶಿಕ್ಷಣ ಹಾಗೂ ಶೈಕ್ಷಣಿಕ ಆಯ್ಕೆಗಳು - ಇಲ್ಲಿದೆ ಮಾಹಿತಿ