Skip to main content
ವಿಡಿಯೋ
1/3
webstory

ಎಸ್‌ಎಸ್‌ಎಲ್‌ಸಿ ನಂತರದ ವೃತ್ತಿಶಿಕ್ಷಣ ಹಾಗೂ ಶೈಕ್ಷಣಿಕ ಆಯ್ಕೆಗಳು - ಇಲ್ಲಿದೆ ಮಾಹಿತಿ

By Shravanthi R
ಎಸ್‌ಎಸ್‌ಎಲ್‌ಸಿ ನಂತರದ ವೃತ್ತಿಶಿಕ್ಷಣ ಹಾಗೂ ಶೈಕ್ಷಣಿಕ ಆಯ್ಕೆಗಳು - ಇಲ್ಲಿದೆ ಮಾಹಿತಿ

10th ಮುಗಿತಾ ಯೋಚನೆ ಮಾಡಬೇಡಿ. ಈ ನಿರ್ಣಾಯಕ ಹಂತದಲ್ಲಿ, ನಿಮ್ಮ ಮುಂದಿನ ವೃತ್ತಿ ಹಾಗೂ ಶೈಕ್ಷಣಿಕ ಮಾರ್ಗವನ್ನು ಕಂಡುಕೊಳ್ಳಲು, ಸುಲಭ ಮತ್ತು ಪರಿಣಾಮಕಾರಿಯಾದ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವುದು ಅತಿಮುಖ್ಯವಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಮುಗಿದ ನಂತರ, ಪಿಯುಸಿ/12th ಗೆ ಸಾಂಪ್ರಾದಾಯಿಕ ಸ್ಟ್ರೀಮ್‌ಗಳಾದ ವಿಜ್ಞಾನ, ವಾಣಿಜ್ಯ ಹಾಗೂ ಕಲೆ ವಿಷಯಾಧಾರಿತ ಆಯ್ಕೆಗಳನ್ನು ಮಾಡುತ್ತಾರೆ. ಇದಕ್ಕೆ ತೆರನಾದ ವೃತ್ತಿ ಅವಕಾಶಗಳನ್ನು ಅರಸಿಹೋಗುತ್ತಾರೆ. ಉದಾಹರಣೆಗೆ:

ಸ್ಟ್ರೀಮ್ಸ್‌(Stream)

ವಿಷಯಗಳು (Main Subjects)

ವಿಶೇಷತೆಗಳು (Key Specializations)

ಉದ್ಯೋಗಾವಕಾಶಗಳು (Job Opportunities)

ವಿಜ್ಞಾನ (Science)

ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry), ಜೀವಶಾಸ್ತ್ರ (Biology) / ಗಣಿತ (Mathematics)

ಇಂಜಿನಿಯರಿಂಗ್ (B.E./B.Tech), ವೈದ್ಯಕೀಯ (MBBS, BDS, ಆಯುಷ್), ಫಾರ್ಮಸಿ, ರಿಸರ್ಚ್, ವಿಜ್ಞಾನಿ.

ಸಾಫ್ಟ್‌ವೇರ್ ಇಂಜಿನಿಯರ್, ಡಾಕ್ಟರ್, ರಿಸರ್ಚ್ ಅಸಿಸ್ಟೆಂಟ್, ಶಿಕ್ಷಕ, ವಿಜ್ಞಾನ ಆಧಾರಿತ ಕೈಗಾರಿಕೆಗಳು.

ವಾಣಿಜ್ಯ (Commerce)

ಲೆಕ್ಕಶಾಸ್ತ್ರ (Accountancy), ವ್ಯಾಪಾರ ಅಧ್ಯಯನ (Business Studies), ಅರ್ಥಶಾಸ್ತ್ರ (Economics), ಗಣಿತ/ಮಾಹಿತಿ ಅಭ್ಯಾಸ (IP)

ಅಕೌಂಟೆನ್ಸಿ (CA), ಹಣಕಾಸು (Finance), ಬ್ಯಾಂಕಿಂಗ್, ಮಾರ್ಕೆಟಿಂಗ್, ಕಂಪನಿ ಸೆಕ್ರೆಟರಿ (CS).

ಬ್ಯಾಂಕ್ ಮ್ಯಾನೇಜರ್, ಅಕೌಂಟೆಂಟ್, ಲೆಕ್ಕ ಪರಿಶೋಧಕ, ಹಣಕಾಸು ವಿಶ್ಲೇಷಕ, ಮಾರ್ಕೆಟಿಂಗ್ ಮ್ಯಾನೇಜರ್.

ಕಲೆ (Arts/Humanities)

ಇತಿಹಾಸ (History), ರಾಜ್ಯಶಾಸ್ತ್ರ (Political Science), ಮನಃಶಾಸ್ತ್ರ (Psychology), ಸಮಾಜಶಾಸ್ತ್ರ (Sociology), ಸಾಹಿತ್ಯ (Literature)

ಕಾನೂನು (Law/LLB), ಪತ್ರಿಕೋದ್ಯಮ (Journalism), ನಾಗರಿಕ ಸೇವೆಗಳು (Civil Services), ಶಿಕ್ಷಣ, ವಿನ್ಯಾಸ (Design).

ವಕೀಲರು, ಪತ್ರಕರ್ತರು, IAS/KAS ಅಧಿಕಾರಿಗಳು, ಶಿಕ್ಷಕರು, ವಿನ್ಯಾಸಕರು, ಸಮಾಜ ಕಾರ್ಯಕರ್ತರು.

ಅದೇ ರೀತಿ, ತ್ವರಿತ ಉದ್ಯೋಗ ಆಧಾರಿತ ಡಿಪ್ಲೋಮಾ ಕೋರ್ಸ್‌ಗಳ (Job-Oriented Diploma Courses) ಮಾಡಬಹುದು, ಪಿಯುಸಿ ನಂತರ, ಕೌಶಲ್ಯಾಧಾರಿತ ಉದ್ಯೋಗಕ್ಕೆ ಈ ಕೋರ್ಸ್‌ಗಳನ್ನು ಮಾಡಬಹುದು. Konex Magnetic Chess Board Game Set for Kids & Adults | Durable, Lightweight & Foldable Board with Inbuilt Storage & Anti Scratch Surface | Ideal Indoor & Travel Friendly Game (9.5 x 9.5 Inch, Brown)

  • ಪಾಲಿಟೆಕ್ನಿಕ್ ಡಿಪ್ಲೊಮಾ ಇನ್ ಇಂಜಿನಿಯರಿಂಗ್ (Polytechnic/Diploma in Engineering):

ಸ್ಪೆಷಲೈಸೇಷನ್ಸ್‌ಗಳು: ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್.

ಹುದ್ದೆ: ಜೂನಿಯರ್‌ ಇಂಜಿನಿಯರ್‌, ಟೆಕ್ನಿಷಿಯನ್‌

ಪ್ರಯೋಜನ: ಪ್ರಾಯೋಗಿಕ ಜ್ಞಾನಕ್ಕೆ ಒತ್ತು ನೀಡುತ್ತದಲ್ಲದೇ, ಪದವಿ (B.Tech) ಗೆ ಪ್ರವೇಶಿಸಲು ಎರಡನೇ ವರ್ಷಕ್ಕೆ ನೇರ ಪ್ರವೇಶ (Lateral Entry) ಪಡೆಯಲು ಸಹಾಯ ಮಾಡುತ್ತದೆ.

  • ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (DMLT):

ಆರೋಗ್ಯ ಮತ್ತು ರೋಗನಿರ್ಣಯ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಸೂಕ್ತ. ಆಸ್ಪತ್ರೆಗಳು ಮತ್ತು ರೋಗನಿರ್ಣಯ ಪ್ರಯೋಗಾಲಯಗಳಲ್ಲಿ ಕೆಲಸ ಪಡೆಯಬಹುದು.

ಸ್ಪೆಷಲೈಸೇಷನ್ಸ್‌ಗಳು: ಪ್ಯಾಥಾಲಜಿ, ಮೈಕ್ರೋಬಯಾಲಜಿ, ಬಯೋಕೆಮಿಸ್ಟ್ರಿ.

ಹುದ್ದೆ: ಮೆಡಿಕಲ್‌ ಲ್ಯಾಬ್‌ ಟೆಕ್ನಿಷಿಯನ್‌, ಹೆಲ್ತ್‌ಕೇರ್‌ ಅಸಿಸ್ಟೆಂಟ್‌

  • ಹೋಟೆಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾ (Diploma in Hotel Management):

ಆತಿಥ್ಯ, ಅಡುಗೆ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ ಉತ್ತಮ.

ಹುದ್ದೆ: ಚೆಫ್‌, ಇವೆಂಟ್‌ ಪ್ಲಾನರ್‌, ಹೋಟೆಲ್‌ ಮ್ಯಾನೇಜರ್‌,

  • ಐಟಿಐ ಕೋರ್ಸ್‌ಗಳು (ITI - Industrial Training Institute):

ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಮೆಕ್ಯಾನಿಕ್ ಇತ್ಯಾದಿ ಕೈಗಾರಿಕಾ ಕೌಶಲ್ಯಗಳನ್ನು ಕಲಿಸಿ, ತಕ್ಷಣದ ಉದ್ಯೋಗಕ್ಕೆ ಸಿದ್ಧಗೊಳಿಸುತ್ತವೆ. ಇದನ್ನೂ ಓದಿ: ಮಕ್ಕಳೇ ಆಸ್ತಿಯಾಗುವಂತೆ ಬೆಳೆಸಿ - ಹೊರೆಯಂತಲ್ಲ.! ಆಸ್ಪತ್ರೆನಾ - NCC ನಾ ಆಯ್ಕೆ ನಿಮ್ಮದಾ!?

ಟ್ರೆಂಡಿಂಗ್‌ ಕೋರ್ಸ್‌ಗಳು -

ಇಂದಿನ ಡಿಜಿಟಲ್‌ ಎರಾದಲ್ಲಿ, ಇಂಡಸ್ಟ್ರೀ ಅಥವಾ ಮಾರುಕಟ್ಟೆಯಲ್ಲಿರುವ ಬೇಡಿಕೆ ಮೇರೆಗೆ ನಿಮ್ಮ ಕೋರ್ಸ್‌ಗಳ ಪ್ಲಾನಿಂಗ್‌ ಮುಖ್ಯವಾಗಿದೆ. ಬೆಳೆಯುತ್ತಿರುವ ತಂತ್ರಜ್ಞಾನ ಹಾಗೂ ಹೂಡಿಕೆ ಪ್ರಪಂಚದಲ್ಲಿ ಅದಕ್ಕೆ ಪೂರಕವಾದ ಕೋರ್ಸ್‌ಗಳನ್ನು ಮಾಡುವುದು ಮತ್ತೊಂದು ಮಾರ್ಗವಾಗಿದೆ.

  • ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಶನ್ (Digital Marketing Certification): ಆನ್‌ಲೈನ್ ವ್ಯವಹಾರ ಹೆಚ್ಚುತ್ತಿರುವ ಕಾರಣ, SEO, ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಮತ್ತು ವಿಷಯ ರಚನೆಯಂತಹ ಕೌಶಲ್ಯಗಳಿಗೆ ಭಾರಿ ಬೇಡಿಕೆಯಿದೆ.

ಹುದ್ದೆಗಳು: SEO ಅನಲಿಸ್ಟ್‌, ಸೋಷಿಯಲ್‌ ಮೀಡಿಯಾ ಮ್ಯಾನೇಜರ್‌

  • ಗ್ರಾಫಿಕ್ ಡಿಸೈನಿಂಗ್ ಮತ್ತು ಅನಿಮೇಷನ್ (Graphic Designing & Animation): ಸೃಜನಶೀಲ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಜಾಹೀರಾತು, ಗೇಮಿಂಗ್ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಉತ್ತಮ ಅವಕಾಶ.

ಹುದ್ದೆ: ಗ್ರಾಫಿಕ್‌ ಡಿಸೈನರ್‌, ಅನಿಮೇಟರ್‌

  • ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ಸ್ (Data Entry & Computer Applications): ಕಚೇರಿ ಕೆಲಸಗಳಿಗೆ ಮತ್ತು ಮೂಲಭೂತ IT ಕೌಶಲ್ಯಗಳಿಗೆ ಅಗತ್ಯ.

ಹುದ್ದೆ: ಡೇಟಾ ಆಪರೇಟರ್‌, ಐಟಿ ಅನಲಿಸ್ಟ್‌

  • ಕೃಷಿ, ವ್ಯವಸಾಯ ಕೋರ್ಸ್‌ಗಳು

ಕೃಷಿಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಸುಸ್ಥಿರ ಕೃಷಿ ಹಾಗೂ ಆಧುನಿಕ ಕೃಷಿ ತಂತ್ರಗಳು ಹಾಗೂ ಸಾವಯವ ಕೃಷಿ, ಇಲ್ಲವೇ ಅಗ್ರಿ ಬಿಜಿನೆಸ್‌ ನಿಂದ ಲಾಭದಾಯಕ ವೃತ್ತಿ ಶಿಕ್ಷಣ ವ್ಯವಹಾರಕ್ಕೆ ಅವಕಾಶದಾಯಕವಾಗಿದೆ.

ಮುಂದಿನ ನೆಮ್ಮದಿಯುತ ವೃತ್ತಿ ಅಥವಾ ಶೈಕ್ಷಣಿಕ ಜೀವನಕ್ಕಾಗಿ ಪೋಷಕರ ಶಿಕ್ಷಕರ ಮಾರ್ಗದರ್ಶನದ ಜೊತೆಗೆ, ನಿಮ್ಮ ಆಸಕ್ತಿ ಹಾಗೂ ಸಾಮರ್ಥ್ಯವನ್ನ, ಅವಧಿಗೆ ತಕ್ಕ ಅವಕಾಶಗಳನ್ನು ಪಡೆಯಲು ಸಿದ್ದಗೊಳ್ಳುವುದು ಯಶಸ್ವಿ ಜೀವನದ ಕಡೆಗೆ ಇಡಬಹುದಾದ ಪುಟ್ಟ ಹೆಜ್ಜೆಗಳಾಗಲಿದೆ. ಇದನ್ನೂ ಓದಿ: ಶಿಕ್ಷಣವೆಂಬ ಆಶಾಕಿರಣ - ಮಕ್ಕಳ ಶೈಕ್ಷಣಿಕ ಸಾಮರ್ಥ್ಯಕ್ಕೊಂದು ದಿನನಿತ್ಯದ ಲೇಖನ ಸಂಗ್ರಹ