ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ಭವಿಷ್ಯದಲ್ಲಿ ರಾಷ್ಟದ ಅಭಿವೃದ್ಧಿಗೆ ಮಕ್ಕಳ ಪ್ರತಿಯೊಂದು ಬೆಳವಣಿಗೆ ಪೂರಕವಾಗಿದೆ. ಹೀಗಾಗಿ ಮಕ್ಕಳನ್ನ ಜಂಕ್ ಫುಡ್ , ಸ್ಕ್ರೀನಿಂಗ್ ಟೈಮ್, ಪಾರ್ಟಿ ಮೂಡ್ ಎಂದು ಸಮಯ ಕಳೆಯಲು ಬಿಡುವುದು ಎಷ್ಟರಮಟ್ಟಿಗೆ ಸರಿ ಆಗುತ್ತದೆ ಎಂದು ಆಲೋಚಿಸಿ. ಆಗ ಮಾತ್ರ ಸ್ಪಷ್ಟವಾಗುತ್ತದೆ ಅಗತ್ಯಕ್ಕಿಂತ ಹೆಚ್ಚು ಅನಾರೋಗ್ಯ ತಿನ್ನಿಸು, ಓಡಾಟ, ಸಮಯ ವ್ಯಯ್ಯದಿಂದ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಅಲೆಯುವುದೇ ಜಾಸ್ತಿ. ಇದೆಲ್ಲ ತಪ್ಪಬೇಕಾದರೆ ಮಕ್ಕಳ ಬದುಕಿಗೊಂದು Success ಮಾರ್ಗ ಇದೆ.
ಅದುವೇ NCC – National Cadet Corps.
ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಇರುವ ಯುವಜನ ಶಿಸ್ತಿನ ತರಬೇತಿ ಸಂಸ್ಥೆಯೇ NCC.
ಯುವಕರಲ್ಲಿ ಶಿಸ್ತು, ನಾಯಕತ್ವ, ದೇಶಪ್ರೇಮ ಮತ್ತು ಸಮಾಜಸೇವಾ ಮನೋಭಾವ ಬೆಳೆಸುವುದು ಇದರ ಉದ್ದೇಶವಾಗಿದೆ.
ಯಾವ ಹಂತದಲ್ಲಿ NCC ಕಲಿಯಬಹುದು?
JD/JW (Junior Division/Wing) 8ನೇ ತರಗತಿಯಿಂದ 10ನೇ ತರಗತಿ ವರೆಗೆ ಸೇರಲು ಅವಕಾಶ ಇದೆ. ಹಾಗೇ SD/SW (Senior Division/Wing) PUC / ಕಾಲೇಜು / ಡಿಗ್ರಿ ವಿದ್ಯಾರ್ಥಿಗಳು ಸೇರಿಕೊಳ್ಳಬಹುದಾಗಿದೆ.
NCC ಸೇರಲು ಶಾಲೆ ಮತ್ತು ಕಾಲೇಜುಗಳಲ್ಲಿ ಯೂನಿಟ್‌ಗಳು ಲಭ್ಯವಿದೆ. PALM ROYAL HANDICRAFTS 17 X 17 Inches Roll Up Vinyl Professional Tournament Chess Board Set Mat, with Storage Box, Big Heavy Chess Pieces with Extra Queens for Kids and Adults
ಹಾಗೇ ಈ NCC ನಲ್ಲಿ ಯಾವ ತರಬೇತಿಗಳು ಇರುತ್ತವೆ?
ಪೆರೇಡ್ ಮತ್ತು ಮಿಲಿಟರಿ ಟ್ರೈನಿಂಗ್, ಶೂಟಿಂಗ್, ಟ್ರೆಕ್ಕಿಂಗ್, ಕ್ಯಾಂಪ್‌ಗಳು, ಅಡ್ವೆಂಚರ್ ಕ್ಯಾಂಪ್ಸ್ , ಸೋಶಿಯಲ್ ಸರ್ವೀಸ್ ಪ್ರೋಗ್ರಾಂಗಳು, ರಾಷ್ಟ್ರ ಮಟ್ಟದ ರಿಪಬ್ಲಿಕ್ ಡೇ ಪೆರೇಡ್, ತಾಲ್ ಸೇನಿಕ ಕ್ಯಾಂಪ್ ಗಳಲ್ಲೂ ಭಾಗವಹಿಸಬಹುದಾಗಿದೆ.
ಹೀಗೆ NCC ಯಲ್ಲಿ ಸೇರುವುದರಿಂದ ಮಕ್ಕಳ ಸಮಯ ಸದುಪಯೋಗ ಆಗುತ್ತದೆ. ಹಾಗೇ ಮಕ್ಕಳು ದೈಹಿಕ ದಂಡನೆ ಕೆಲಸ ಮಾಡುವುದರಿಂದ ಅನಾರೋಗ್ಯವು ಹತ್ತಿರ ಸುಳಿಯಲ್ಲ. ಅಷ್ಟೇ ಅಲ್ಲ ಸರ್ಕಾರಿ ಉದ್ಯೋಗಗಳಲ್ಲಿ (ಎನ್‌ಡಿಎ, ಸೇನಾ ನೇಮಕಾತಿ, ಪೊಲೀಸ್, CRPF ಇತ್ಯಾದಿ ಉದ್ಯೋಗದ ವಿಶೇಷ ಅವಕಾಶವು ಇದೆ. ಇದನ್ನೂ ಓದಿ: ಶಿಕ್ಷಣವೆಂಬ ಆಶಾಕಿರಣ - ಮಕ್ಕಳ ಶೈಕ್ಷಣಿಕ ಸಾಮರ್ಥ್ಯಕ್ಕೊಂದು ದಿನನಿತ್ಯದ ಲೇಖನ ಸಂಗ್ರಹ
ಜೊತೆಗೆ S.S.C (Short Service Commission) ನಲ್ಲಿ Special Entry ಕೊಡಲಿದ್ದು, ಕಾಲೇಜು ಅಡ್ಮಿಷನ್ ಮತ್ತು ಜಾಬ್ ಇಂಟರ್ವ್ಯೂಗಳಲ್ಲಿ ಹೆಚ್ಚುವರಿ ಮೌಲ್ಯ ಸಿಕ್ಕಿರುವ ನಿದರ್ಶನಗಳು ಇದೆ. ಇದಲ್ಲದೇ ವೈಯಕ್ತಿಕವಾಗಿ ನೇತೃತ್ವ, ಆತ್ಮವಿಶ್ವಾಸ ಮತ್ತು ಶಿಸ್ತು ವೃದ್ಧಿ, ರಾಷ್ಟ್ರ ಸೇವೆ ಮಾಡುವ ಅವಕಾಶವು ಇದೆ.
ಶಾಲಾ - ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು NCC ಸೇರಿದಕ್ಕಾಗಿ ಮೂರು ಬಗೆಯ ಪ್ರಮಾಣಪತ್ರವನ್ನ ನೀಡಲಾಗುತ್ತದೆ. ಇದು ಸಹ ಹಲವು ಪ್ರಯೋಜನಗಳನ್ನ ನೀಡುತ್ತದೆ.
‘A’ Certificate ಶಾಲಾ ವಿದ್ಯಾರ್ಥಿಗಳು ಮೂಲ ಶಿಸ್ತು ತರಬೇತಿ
‘B’ Certificate ಕಾಲೇಜು SD/SW ಜಾಬ್‌ಗಳಿಗೆ ಮೌಲ್ಯವರ್ಧನೆ
‘C’ Certificate ಸೀನಿಯರ್ ಕ್ಯಾಡೆಟ್ಸ್ ಸೇನೆ/ಪೊಲೀಸ್ ನೇಮಕಾತಿಯಲ್ಲಿ ವಿಶೇಷ ರಿಯಾಯಿತಿ ಸಿಗುತ್ತದೆ.
13 ರಿಂದ 25 ವರ್ಷ ವಯಸ್ಸಿನ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಇದರೊಂದಿಗೆ ಏಕತೆಯೇ ಶಿಸ್ತು ಎಂದು ಬೋದಿಸಲಾಗಿರುತ್ತದೆ. NCC ಜೀವನದ ಯಶಸ್ಸಿಗೆ ಬೇಕಾದ ವ್ಯಕ್ತಿತ್ವ ಮತ್ತು ಮೌಲ್ಯಗಳ ಪಾಠವನ್ನ ತಿಳಿಸುತ್ತದೆ. ಇದನ್ನೂ ಓದಿ: ಶಾಂಘೈ ವಿಮಾನ ನಿಲ್ದಾಣದಲ್ಲಿ ಯುಕೆ ನಿವಾಸಿಗೆ ಕಿರುಕುಳ: ಅರುಣಾಚಲದ ಮಹಿಳೆಗೆ ‘ಚೀನೀ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ’ ಎಂದು ಒತ್ತಾಯ!