ತಂತ್ರಜ್ಞಾನದಿಂದ ತುಂಬಿಹೋಗಿರುವ ಜಗತ್ತನ್ನು ʻನೆಟ್ ಜಿರೋʼ ಹಾಗೂ ಪರಿಸರ ಪರಿಕಲ್ಪನೆಯಾದ ʻಇಂಗಾಲ ಕಡಿತʼ ಅಥವಾ ಇಂಗಾಲ ತೆಗೆಯುವಿಕೆ (Decarbonization)ದ ಅನಿವಾರ್ಯತೆಯನ್ನು ಅರ್ಥೈಸಿಕೊಳ್ಳುವುದು ಮುಖ್ಯವಾಗಿದೆ. ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯು ಪರಿಸರದ ಪರಿಕಲ್ಪನೆಯಷ್ಟೇ ಅಲ್ಲದೇ ಈಗಿನ ಸಂದರ್ಭಕ್ಕೆ ತಂತ್ರಜ್ಞಾನದ ದೃಷ್ಟಿಕೋನದಿಂದ ನೋಡುವುದು ಮುಖ್ಯವಾಗಿದೆ.
ಜಾಗತೀಕ ಡಿಕಾರ್ಬೊನೈಸೇಷನ್ ಎಂದರೇನು?
Global Decorbonization - ವಿಶ್ವದಾದ್ಯಂತ ಇಂಗಾಲ ತೆಗೆಯುವಿಕೆ ಎಂದರೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು, ಮುಖ್ಯವಾಗಿ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡುವ ಅಥವಾ ತೆಗೆದುಹಾಕುವ ಪ್ರಕ್ರಿಯೆ. ಇದು ಹವಾಮಾನ ವೈಪರೀತ್ಯ ಮತ್ತು ಜೀವವೈವಿಧ್ಯಕ್ಕೆ ಮಾರಕವಾಗುವ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ತಡೆಗಟ್ಟುವುದರ ಜೊತೆಗೆ ಆರ್ಥಿಕ ಅವಕಾಶಗಳನ್ನು ಒದಗಿಸುವುದು, ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ಮತ್ತು ಜಾಗತಿಕ ಸಹಕಾರವನ್ನು ಬೆಳೆಸುವಲ್ಲಿ ಪ್ರಾಮುಖ್ಯತೆ ಹೊಂದಿದೆ.
ಇದು ಇಂಧನ ದಕ್ಷತೆ, ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಹೆಚ್ಚಿಸಿ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಪ್ರೇರೇಪಿಸುತ್ತದೆ. ಇದರೊಟ್ಟಿಗೆ ಆರ್ಥಿಕ, ಸಾಮಾಜಿಕ ಹಾಗೂ ತಾಂತ್ರಿಕ ಅಂಶಗಳಿಗೆ ಈ ನಿಯಂತ್ರಕಾರಿ ವಿಷಯಸೂಚಿ ಅವಲಂಬಿತವಾಗಿದೆ ಎನ್ನಲಾಗಿದೆ. The Unspeakable Word Guessing Game for Kids Aged 5 Plus Fast-Paced Educational and Party Game 90 Cards One Minute Sand Timer and Manual Improves Vocabulary Communication and Thinking Skills
ಉದ್ದೇಶವೇನು?
ನೆಟ್ ಜಿರೋ ಕಾನ್ಸೆಪ್ಟ್ ಎಂದರೆ, ವಾತಾವರಣದಲ್ಲಿ ಬಿಡುಗಡೆಯಾಗುವ ಹಸಿರುಮನೆ ಅನಿಲಗಳ (Green house gases GHSs) ಪ್ರಮಾಣವನ್ನು ತಗ್ಗುಗೊಳಿಸಿ, ಅದನ್ನು ಸಮತೋಲನಗೊಳಿಸುವುದಾಗಿದೆ. ಇದು ಹವಾಮಾನ ಬದಲಾವಣೆ, ಇಂಧನ ಮೂಲಗಳ ಸಂರಕ್ಷಣೆ, ಹೊಸ ತಂತ್ರಜ್ಞಾನಗಳ ನಾವಿನ್ಯತೆಗೆ ಒತ್ತು ನೀಡುವುದಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದಲ್ಲಿ ಡಿಕಾರ್ಬೊನೈಸೇಷನ್ ನಿರ್ಣಾಯಕವಾಗಿದೆ. ಇದನ್ನೂ ಓದಿ: ಪುಟಾಣಿಗಳು ಆಟಕ್ಕೂ ಸೈ, ಶಿಸ್ತಿಗೂ ಜೈ!