Skip to main content
ವಿಡಿಯೋ
1/3
cinema

ಯಶ್‌ ಎದುರು ಪೈಪೋಟಿ ಕೊಡಲಿದ್ದಾರೆ ಸಲ್ಮಾನ್‌ ಖಾನ್....ಯಾವ ಸಿನಿಮಾ ಗೊತ್ತಾ? ಇಲ್ಲಿದೆ ಮಾಹಿತಿ

By Ram Chethan
ಯಶ್‌ ಎದುರು ಪೈಪೋಟಿ ಕೊಡಲಿದ್ದಾರೆ ಸಲ್ಮಾನ್‌ ಖಾನ್....ಯಾವ ಸಿನಿಮಾ ಗೊತ್ತಾ? ಇಲ್ಲಿದೆ ಮಾಹಿತಿ

ಯಶ್ ನಟನೆಯ ‘ಟಾಕ್ಸಿಕ್’ ಮತ್ತು ಸಲ್ಮಾನ್ ಖಾನ್ ಅವರ ‘ಬ್ಯಾಟಲ್ ಆಫ್ ಗಾಲ್ವಾನ್’ ಒಂದೇ ದಿನ ರಿಲೀಸ್ ಆಗಲಿವೆ. 2026 ಮಾರ್ಚ್ 19ರಂದು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸ್ಪರ್ಧೆ ನಿರೀಕ್ಷೆ.

ಕೆಜಿಎಫ್ ಸರಣಿಯ ಮೂಲಕ ಯಶ್ ದೇಶದ ಮಟ್ಟದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಈಗ ಅವರ ಹೊಸ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಾಲ್ವಾನ್’ ಕೂಡ ಬಿಡುಗಡೆಗೆ ಸಜ್ಜಾಗಿದೆ. ಎರಡೂ ಸಿನಿಮಾಗಳು ಒಂದೇ ದಿನಕ್ಕೆ ಬರಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸ್ಪರ್ಧೆ ಕಾಣೋದು ಖಚಿತ.

2018ರಲ್ಲಿ ಯಶ್ ನಟನೆಯ ಕೆಜಿಎಫ್ ಮತ್ತು ಶಾರುಖ್ ಖಾನ್‌ಗಳ ಜೀರೋ ಒಂದೇ ದಿನ ಬಿಡುಗಡೆಯಾಗಿದ್ದಾಗ, ಕೆಜಿಎಫ್ ದೊಡ್ಡ ಗೆಲುವು ಸಾಧಿಸಿತ್ತು. 2022ರಲ್ಲಿ ಕೆಜಿಎಫ್ 2 ಎದುರು ಬಿಡುಗಡೆಯಾದ ವಿಜಯ್ ಅವರ ಬೀಸ್ಟ್ ಕೂಡ ಹಿನ್ನಡೆ ಅನುಭವಿಸಿತ್ತು. ಇದೇ ಕಾರಣಕ್ಕೆ, ಈ ಬಾರಿ ‘ಟಾಕ್ಸಿಕ್’ ಎದುರು ಯಾವ ಸಿನಿಮಾ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.Arayna Women's Cotton Printed Floral Straight Kurta with Palazzo Pants and Dupatta

ಸಲ್ಮಾನ್ ಖಾನ್ ಅವರ ‘ಬ್ಯಾಟಲ್ ಆಫ್ ಗಾಲ್ವಾನ್’ ಅನ್ನು ಮಾರ್ಚ್ 19, 2026ಕ್ಕೆ ರಿಲೀಸ್ ಮಾಡುವ ಯೋಜನೆ ಇದೆ. ಸಲ್ಲುಗೆ ಈದ್ ಸಮಯದ ಜೊತೆ ವಿಶೇಷ ಸಂಪರ್ಕ ಇರುವುದರಿಂದ, ಈ ದಿನಾಂಕವನ್ನು ತಂಡ ಬಹಳ ಪ್ರಮುಖವಾಗಿ ನೋಡುತ್ತಿದೆ. ಡಿಸೆಂಬರ್ ವೇಳೆಗೆ ಶೂಟಿಂಗ್ ಪೂರ್ಣಗೊಂಡು, ಎರಡು ತಿಂಗಳಲ್ಲಿ ಪೋಸ್ಟ್‌ ಪ್ರೊಡಕ್ಷನ್ ಮುಗಿಸಲಿರುವ ಮಾಹಿತಿ ಬಂದಿದೆ. ದಿನಾಂಕ ಮುಂದೂಡಿದರೆ ಸಿನಿಮಾ ದೀಪಾವಳಿ ವೇಳೆಗೆ ಹೋಗುವ ಸಾಧ್ಯತೆ ಇದೆ.


ಬ್ಯಾಟಲ್ ಆಫ್ ಗಾಲ್ವಾನ್’ ನೈಜ ಘಟನೆಯ ಆಧಾರಿತ ಸಿನಿಮಾ. ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆಯನ್ನು ಚಿತ್ರದಲ್ಲಿ ತೋರಿಸಲಿದ್ದಾರೆ. ಈ ವಿಷಯದ ಮೇಲೆ ಸಲ್ಲುಗೆ ದೊಡ್ಡ ವಿಶ್ವಾಸವಿದ್ದರೂ, ‘ಟಾಕ್ಸಿಕ್’ ಎದುರು ಗೆಲ್ಲುವುದು ಸುಲಭ ಅಲ್ಲವೆಂಬ ಮಾತು ಕೇಳಿಬರುತ್ತಿದೆ.ಬಿಗ್‌ ಬಾಸ್ ಬಳಿಕ ಮಂಜು ಭಾಷಿಣಿ ಧಾರಾವಾಹಿʼಗೆ ಎಂಟ್ರಿ..! ಹೆಚ್ಚಿನ ಮಾಹಿತಿ ಇಲ್ಲಿದೆ

ಇನ್ನೊಂದೆಡೆ, ಯಶ್ ನಟನೆಯ ‘ಟಾಕ್ಸಿಕ್’ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟ್ ಆಗುತ್ತಿರುವ ಕಾರಣ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲಿದೆ. ಚಿತ್ರದ ಬಜೆಟ್ ಕೂಡ ದೊಡ್ಡದು ಎಂಬ ಮಾಹಿತಿ ಬಂದಿದೆ.

ಇದೇ ಸಮಯದಲ್ಲಿ ಅಜಯ್ ದೇವಗನ್ ಅವರ ‘ಧಮಾಲ್ 4’ ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮಾರ್ಚ್ 19ರಂದು ಮೂರು ದೊಡ್ಡ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಗದ್ದಲ ಆಗಬಹುದು.