ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣ ಮತ್ತೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗಿದೆ. 2019ರಲ್ಲಿ ದೇಗುಲದ ಗರ್ಭಗುಡಿಯ ಮುಂದೆ ಇರುವ ದ್ವಾರಪಾಲಕರ ವಿಗ್ರಹಗಳ ಚಿನ್ನದ ರಕ್ಷಾಕವಚಗಳನ್ನು ದುರಸ್ತಿ ಮಾಡಲು ಚೆನ್ನೈಗೆ ಕಳುಹಿಸಲಾಯಿತು. ಆದರೆ ಅವು ದೇವಾಲಯಕ್ಕೆ ಹಿಂದಿರುಗಿದಾಗ ತೂಕ ಕಡಿಮೆಯಾಗಿರುವುದು ಗಮನಕ್ಕೆ ಬಂತು. ಚಿನ್ನ ಕದಿಯಲಾಗಿದೆ ಎಂಬ ಆರೋಪಗಳು ತಲೆದೋರಿದವು.
ಈ ಘಟನೆ ಕೇರಳ ಹೈಕೋರ್ಟ್ ಮತ್ತು ವಿಧಾನಸಭೆಯಲ್ಲಿಯೂ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು. ವಿರೋಧ ಪಕ್ಷಗಳು ಸರ್ಕಾರ ಮತ್ತು ದೇವಸ್ವಂ ಮಂಡಳಿಯನ್ನು ಗಂಭೀರವಾಗಿ ಟೀಕಿಸಿತು. ನಂತರ, ಹೈಕೋರ್ಟ್ ಸೂಚನೆಯಂತೆ ವಿಶೇಷ ತನಿಖಾ ತಂಡ (SIT) ರಚಿಸಲಾಯಿತು ಮತ್ತು ಪ್ರಕರಣದ ವಿವಿಧ ಕೋನಗಳಿಂದ ತನಿಖೆ ಶುರುವಾಯಿತು.Kenneth Cole Maroon Dial Automatic Watch for Men-NEKCWGL2124704MN
ತನಿಖೆಯಲ್ಲಿ ಮೊದಲಾಗಿ ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಬಂಧಿತರಾಗಿ ಜೈಲು ಸೇರಿದರು. ಅವರು ದುರಸ್ತಿ ವೆಚ್ಚವನ್ನು ಹೊತ್ತುಕೊಳ್ಳುವುದಾಗಿ ಹೇಳಿಕೊಂಡಿದ್ದರೂ, ಚಿನ್ನವನ್ನು ಕರಗಿಸಿ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಎದುರಾಗಿದೆ. ನಂತರ ಮತ್ತೆ ಕೆಲವೇ ಚಿನ್ನದ ಲೇಪನ ಹಾಕಿ ಶ್ರೀಮಂತರ ಮನೆಗಳಲ್ಲಿ ಪೂಜೆ ಮಾಡಿ ಹಣ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.
ಈ ಪ್ರಕರಣದಲ್ಲಿ ಶಬರಿಮಲೆ ದೇವಸ್ಥಾನದ ಮಾಜಿ ಅಧಿಕಾರಿಗಳು ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ. ಮಾಜಿ ಆಡಳಿತಾಧಿಕಾರಿ ಮುರಾರಿ ಬಾಬು, ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ವಾಸು ಮತ್ತು ಪದ್ಮಕುಮಾರ್ ಸೇರಿದಂತೆ ಹಲವು ಮಂದಿ ಆರೋಪಿಗಳ ಪಟ್ಟಿಯಲ್ಲಿ ಸೇರಿದ್ದಾರೆ.ಯಶ್ ಎದುರು ಪೈಪೋಟಿ ಕೊಡಲಿದ್ದಾರೆ ಸಲ್ಮಾನ್ ಖಾನ್....ಯಾವ ಸಿನಿಮಾ ಗೊತ್ತಾ? ಇಲ್ಲಿದೆ ಮಾಹಿತಿ
ಈ ನಡುವೆ, ಕಾಂತಾರ ಚಿತ್ರ ಖ್ಯಾತಿಯ ನಟ ಜಯರಾಮ್ ಹೆಸರು ಪ್ರಕರಣಕ್ಕೆ ಸಂಬಂಧಿಸಿ ಹೊರಬಂದಿರುವುದು ಹೊಸ ವಿವಾದ ಹುಟ್ಟಿಸಿದೆ. 2019ರಲ್ಲಿ ಚೆನ್ನೈನಲ್ಲಿರುವ ಪೂಜೆಯಲ್ಲಿ ದ್ವಾರಪಾಲಕರ ವಿಗ್ರಹಗಳೊಂದಿಗೆ ಭಾಗವಹಿಸಿದ್ದ ಕಾರಣ ಅವರನ್ನು SIT ವಿಚಾರಣೆಗಾಗಿ ಕರೆಸಿಕೊಳ್ಳಲು ಯೋಜಿಸಿದೆ ಎನ್ನಲಾಗಿದೆ.
ಈ ಬಗ್ಗೆ ನಟ ಜಯರಾಮ್ ತಮ್ಮ ಪ್ರತಿಕ್ರಿಯೆ ನೀಡಿದ್ದು:
“ನಾನು 50 ವರ್ಷಗಳಿಂದ ಶಬರಿಮಲೆಗೆ ಹೋಗುತ್ತೇನೆ. 2019ರಲ್ಲಿ ನಡೆದ ಪೂಜೆಗೆ ಅಧಿಕೃತವಾಗಿ ಆಹ್ವಾನಿಸಲಾಗಿತ್ತು, ಅದಕ್ಕಾಗಿ ಭಾಗವಹಿಸಿದ್ದೆ. ಐದು ವರ್ಷಗಳ ನಂತರ ಇದು ಸಮಸ್ಯೆಯಾಗುತ್ತದೆ ಎನ್ನುವುದನ್ನು ನಾನು ಊಹಿಸಲಿಲ್ಲ. ಸತ್ಯ ಹೊರಬಂದರೆ ನನಗೆ ಸಂತೋಷ. ನಾನು ತಪ್ಪು ಮಾಡಿದ್ದರೆ ಪರಿಣಾಮ ಎದುರಿಸಲು ಸಿದ್ಧ” ಎಂದು ಸ್ಪಷ್ಟಪಡಿಸಿದ್ದಾರೆ.
SIT ತಂಡ ನಟ ಜಯರಾಮ್ ಅವರನ್ನು ಸಾಕ್ಷಿಯಾಗಿ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ವರದಿ ಹೊರಬಿದ್ದಿದೆ. ಇದರಿಂದಾಗಿ, ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣ ಮತ್ತೊಮ್ಮೆ ದೊಡ್ಡ ಸಂಚಲನ ಸೃಷ್ಟಿಸಿದೆ. ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿಯೂ ಈ ವಿಚಾರ ಚರ್ಚೆಯ ವಿಷಯವಾಗಿದೆ.