ದೆಹಲಿ ಮತ್ತು ಗುರುಗ್ರಾಮದ ಎರಡು ಗೇಮಿಂಗ್ ಕಂಪನಿಗಳು ಕೃತಕ ಬುದ್ದಿಮತ್ತೆಯ ತಂತ್ರಾಂಶಗಳನ್ನು ಬಳಸಿ, ಮನುಷ್ಯರ ಸ್ವರೂಪದಂತೆ ರೂಪಿಸಿ ಆನ್‌ಲೈನ್ ಜೂಜು ಹಾಗೂ ಗೇಮಿಂಗ್ ಮೂಲಕ ಚಂದಾದಾರರಿಗೆ ಸಾವಿರಾರು ಕೋಟಿ ಹಣವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಕ್ರಮಕೈಗೊಂಡಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಎರಡೂ ಕಂಪನಿಗಳ ₹523.57 ಕೋಟಿ ಮೊತ್ತದ ಠೇವಣಿಗಳಿಗೆ ಮುಟ್ಟಗೋಲು ಹಾಕಿದೆ ಎಂದು ವರದಿ ತಿಳಿಸಿದೆ.
ಆನ್‌ಲೈನ್ ಗೇಮಿಂಗ್ ನಿಷೇಧವಿದ್ದರೂ ಸಹ ವಿನ್‌ಝೋ ಮತ್ತು ಪಾಕೆಟ್52 ಎಂಬ ಎರಡು ಗೇಮಿಂಗ್ ಆಪ್‌ಗಳ ವಿರುದ್ದ ಇ.ಡಿ ಯ ಬೆಂಗಳೂರು ವಲಯ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಈ ವಿರುದ್ದ ಇ.ಡಿ ಯು ವಿನ್ ಗೇಮ್ಸ್ ಪ್ರೈ.ಲಿಮಿಟೆಡ್ ಮತ್ತು ನಿರ್ದೇಸ ನೆಟ್‌ವರ್ಕ್ಸ್ ಪ್ರೈ. ಲಿಮಿಟೆಡ್ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿತ್ತು.
ಈ ಸಂಬಂಧ ತನಿಖೆ ನಡೆಸಿದಾಗ ಎರಡೂ ಕಂಪನಿಗಳ ಕಚೇರಿಯು ದೆಹಲಿ ಮತ್ತು ಗುರುಗ್ರಾಮದಲ್ಲಿ ಕಚೇರಿಗಳಿರುವುದಾಗಿ ತಿಳಿದುಬಂದಿದೆ. ಇಲ್ಲಿ ಮನುಷ್ಯರ ಹೆಸರಿನಲ್ಲಿ ಎಐ ಖಾತೆಗಳನ್ನು ಸೃಷ್ಟಿಸಿ, ಚಂದಾದಾರರು ಎಐಗಳ ಜೊತೆಗೆ ಆಡುವಂತೆ ಮಾಡಿದ್ದರು ಎಂದು ಶೋಧದ ವೇಳೆ ತಿಳಿದುಬಂದಿದೆ. Imagimake Mapology India with State Capitals - Educational Toy and Learning Aid for Boys and Girls - India Map Puzzle - Jigsaw Puzzle, 25 Pieces, Kids
ಲಕ್ಷಕ್ಕೂ ಹೆಚ್ಚು ಚಂದಾದಾರರಿರುವ ಈ ಗೇಮಿಂಗ್ ಆಪ್‌ಗಳ ದುರುಪಯೋಗ ಮತ್ತು ಮೋಸದಾಟದ ಬಹುತೇಕ ಸಂದರ್ಭ ಜನರಿಗೆ ನಂಬಿಸಿ, ಸೋಲುಣಿಸಿದರು. ಈ ಕಾರಣ ಚಂದಾದಾರರು ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಇ.ಡಿ ತನಿಖೆ ನಡೆಸಿ, ಕಂಪನಿಗಳ ಬ್ಯಾಂಕ್ ಠೇವಣಿ ಹಾಗೂ ಷೇರು ಮತ್ತು ಮ್ಯೂಚ್ಯುವಲ್ ಫಂಡ್ ಹೂಡಿಕೆಗಳನ್ನು ಸೇರಿದಂತೆ ₹500+ ಕೋಟಿ ಮೊತ್ತದ ಸ್ವತ್ತುಗಳಿಗೆ ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: 10ನೇ ತರಗತಿಯ ನಂತರ ಸರ್ಕಾರಿ ಉದ್ಯೋಗ: ನಿಮ್ಮ ಮುಂದಿರುವ ಅವಕಾಶಗಳು ಇಲ್ಲಿವೆ!