Skip to main content
ವಿಡಿಯೋ
1/3
general

10ನೇ ತರಗತಿಯ ನಂತರ ಸರ್ಕಾರಿ ಉದ್ಯೋಗ: ನಿಮ್ಮ ಮುಂದಿರುವ ಅವಕಾಶಗಳು ಇಲ್ಲಿವೆ!

By Shravanthi R
10ನೇ ತರಗತಿಯ ನಂತರ ಸರ್ಕಾರಿ ಉದ್ಯೋಗ: ನಿಮ್ಮ ಮುಂದಿರುವ ಅವಕಾಶಗಳು ಇಲ್ಲಿವೆ!

10th ಮುಗಿತು. ನನಗಿನ್ನು ಓದಿನಲ್ಲಿ ಆಸಕ್ತಿಯಿಲ್ಲ ಎನ್ನುವ ಮಕ್ಕಳ ಕರಿಯರ್‌ ಆಪ್ಶನ್‌ಗಾಗಿ ಗೊಂದಲಬೇಡ. ಕೇವಲ 10th ಪಾಸ್‌ ಆಗಿದ್ದರೆ, ಸರ್ಕಾರಿ ಹುದ್ದೆ ಪಡೆವ ಅವಕಾಶಗಳಿವೆ. ಈ ಕುರಿತ ಆಯ್ಕೆಗಳು, ಹುದ್ದೆಗಳ ಮಾಹಿತಿ ಇಲ್ಲಿದೆ.

10 ನೇ ತರಗತಿ ನಂತರ ಮುಂದಿನ ವಿದ್ಯಾಭ್ಯಾಸ ಬೇಡ ಎನ್ನುವವರಿಗೆ ಆತಂಕ ಬೇಡ. ಸರ್ಕಾರಿ ಹುದ್ದೆ ಬೇಕೆನ್ನುವ ಹೊಂಗನಸಿನ ಹುದ್ದೆಗಳಿವೆ. ಅದಕ್ಕಾಗಿ, ತುಸು ಶ್ರಮವಹಿಸಿ ಮಾಹಿತಿ ಸಂಗ್ರಹ ಹಾಗೂ ನೇಮಕಾತಿ ಪ್ರಕ್ರಿಯೆಗೆ ತಯಾರಿ ನಡೆಸಿದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆಯನ್ನು ಪಡೆಯಲು ಸಾಧ್ಯವಾಗುವುದು. ಈ ಎಲ್ಲಾ ಆಯ್ಕೆಗಳ ಬಗ್ಗೆ ಇಲ್ಲಿದೆ ಮಾಹಿತಿ. 

  1. ಪೋಸ್ಟಲ್‌ ಅಸಿಸ್ಟಂಟ್‌ /  ಸ್ಟಾರ್ಟಿಂಗ್‌ ಅಸಿಸ್ಟಂಟ್‌

ಭಾರತದ ಅಂಚೆ ಇಲಾಖೆಯಡಿಯಲ್ಲಿ, ಪ್ರತಿಯೊಂದು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬರುವ ಅಂಚೆಕಚೇರಿಗಳಿಂದ ಹಿಡಿದು ತಾಲ್ಲೂಕು ಮಟ್ಟದ ಅಂಚೆಕಚೇರಿವರೆಗೂ ಅನೇಕ ಹುದ್ದೆಗಳಿವೆ. ಇದು ಕೇಂದ್ರ ಸರ್ಕಾರದ ಹುದ್ದೆಯಾಗಿದ್ದು, ಆಕರ್ಷಕ ಸಂಬಳ ಹಾಗೂ ಸೌಲಭ್ಯಗಳಿರಲಿವೆ. ಪ್ರತಿ ವರ್ಷ ಅತಿ ಹೆಚ್ಚು ನೇಮಕವಾಗುವ ಗ್ರಾಮೀಣ ಡಾಕ್‌ ಸೇವಕ್‌/ ಪೋಸ್ಟಲ್‌ ಅಸಿಸ್ಟೆಂಟ್‌/ ಸ್ಟಾರ್ಟಿಂಗ್‌ ಅಸಿಸ್ಟೆಂಟ್‌ ಹುದ್ದೆಗಳಿವೆ. ಇದಕ್ಕೆ ಯಾವುದೇ ಪರೀಕ್ಷೆಯಿರುವುದಿಲ್ಲ. ವಿದ್ಯಾರ್ಹತೆಯ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್‌ ಮಾಡಿ ನೇಮಕ ಮಾಡಲಾಗುವುದೆಂದು ತಿಳಿಸಲಾಗಿದೆ. 

  1. ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ (ಎಂಟಿಎಸ್‌)

ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರ ಸರ್ಕಾರದ ಸಂಸ್ಥೆಗಳು, ಇಲಾಖೆಗಳು ಹಾಗೂ ಕಚೇರಿಗಳಲ್ಲಿರುವ ಗ್ರೂಪ್‌ ಸಿ ನಾನ್‌ ಗೆಜೆಟೆಡ್‌ ಹುದ್ದೆಗಳಾದ ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌, ಹವಾಲ್ದಾರ್‌ ಹುದ್ದೆಗಳನ್ನು ಕಾಲ್‌ಫಾರ್‌ ಮಾಡುತ್ತದೆ. 

  1. ರೈಲ್ವೇ ಗ್ರೂಪ್‌ ಡಿ ಹುದ್ದೆಗಳು

ದೇಶದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶ ಇರುವ ಇಲಾಖೆಯೆನಿಸಿರುವ ರೈಲ್ವೇ ಇಲಾಖೆಯಡಿಯಲ್ಲಿ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿರುತ್ತದೆ. ಈ ಪೈಕಿ ಗ್ರೂಪ್‌ ಡಿ ಹುದ್ದೆಗಳಿಗೆ 10 ನೇ ತರಗತಿ ಉತ್ತೀರ್ಣರಾಗಿದ್ದರೆ ಅರ್ಜಿ ಹಾಕಬಹುದಾಗಿದೆ. ಇಂಡಿಯನ್‌ ರೈಲ್ವೆಯ ಟ್ರ್ಯಾಕ್‌ಮ್ಯಾನ್‌ ಅಥವಾ ಹೆಲ್ಪರ್‌ ಹುದ್ದೆಗಳು ಇದರಡಿಯಲ್ಲಿವೆ.

  1. ಸೇವಕರ ಹುದ್ದೆಗಳು

ಈ ಹುದ್ದೆಗಳು ರಾಜ್ಯದ ವಿವಿಧ ಇಲಾಖೆಗಳು ಹಾಗೂ ನ್ಯಾಯಾಲಯಗಳಲ್ಲಿ( ಹೈಕೋರ್ಟ್‌, ಜಿಲ್ಲಾ, ತಾಲ್ಲೂಕು ಮಟ್ಟದ ಎಲ್ಲಾ) ಸೇವಕ/ ಜವಾನ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಸ್ಪಷ್ಟ ಕನ್ನಡ ಓದಲು, ಬರೆಯಲು, ಬಂದಿದ್ದರೆ ಸಾಕು ಎನ್ನಲಾಗಿದೆ.

  1. ಪೋಲಿಸ್‌ ಕಾನ್ಸ್‌ಟೇಬಲ್‌

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) ಯಲ್ಲಿ ಅಥವಾ ಕೇಂದ್ರ ಮೀಸಲು ಪೊಲೀಸ್‌ ಪಡೆಗಳಲ್ಲಿಯ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ 10ನೇ ತರಗತಿ ಪಾಸ್‌ ಆಗಿದ್ದರೆ ಸಾಕು. ಇದಕ್ಕಾಗಿ ವಿದ್ಯಾರ್ಹತೆ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಿರಲಿದ್ದು, ದೈಹಿಕ ಸಾಮರ್ಥ್ಯ ಹಾಗೂ ಸಹಿಷ್ಣುತೆಯ ಪರೀಕ್ಷೆ ಇರುತ್ತದೆ. ಇದನ್ನೂ ಓದಿ: ಡಿಜಿಟಲ್‌ ರೇಷನ್‌ ಕಾರ್ಡ್‌ - ಏನಿದರ ಲಾಭ ಗೊತ್ತಾ?

  1. ಅರಣ್ಯ ವೀಕ್ಷಕರು

ಪರಿಸರವನ್ನು ಇಷ್ಟ ಪಡುವವರಿಗೆ ಈ ಹುದ್ದೆ ಸೂಕ್ತವಾಗಿದ್ದು, ರಾಜ್ಯ ಮಾತ್ರವಲ್ಲದೇ ದೇಶದ ಯಾವುದೇ ರಾಜ್ಯದ ಅರಣ್ಯ ವೀಕ್ಷಕ ಹುದ್ದೆಗೆ ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಯ ಅಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಹಾಗೂ ಸಹಿಷ್ಣುತೆ ಪರೀಕ್ಷೆಗಳಿರಲಿವೆ. Imagimake: Mapology India and World Maps with Capitals - Learn Capitals and Country Flags - Educational Toy for Kids Above 5 Years, Multicolor

  1. ಡೇಟಾ ಎಂಟ್ರಿ ಆಪರೇಟರ್‌

ಗ್ರಾಮಪಂಚಾಯಿತಿ ಮಟ್ಟದಿಂದ ಯಾವುದೇ ಸರ್ಕಾರಿ ಇಲಾಖೆಗಳಲ್ಲಿ ಈ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಮೆಟ್ರಿಕ್ಯುಲೇಷನ್‌ ಜೊತೆಗೆ ಕಂಪ್ಯೂಟರ್‌ ಪ್ರಮಾಣ ಪತ್ರ ಪಡೆದವರು ಈ ಹುದ್ದೆಗೆ ಅರ್ಜಿ ಹಾಕಲು ಅರ್ಹತೆ ಪಡೆಯುವರು. 

  1. ಕೆಎಸ್‌ಆರ್‌ಟಿಸಿ ಬಸ್‌ ಚಾಲಕ

ಸರ್ಕಾರಿ ಸ್ವಾಮ್ಯದ ಯಾವುದೇ ಇಲಾಖೆಯ ವಾಹನ ಚಾಲಕರ ಹುದ್ದೆಗೂ ಸಹ 10th ಪಾಸ್‌ ಆಗಿದ್ದರೆ ಸಾಕಾಗಿರುವುದು. ಹೆಚ್ಚಿನ ಅರ್ಹತೆಗಾಗಿ, ವಾಹನ ಪರವಾನಗಿ (ಡ್ರೈವಿಂಗ್‌ ಲೈಸೆನ್ಸ್‌) ಹೊಂದಿರಬೇಕಾಗಿರುವುದು. 

ಇದಷ್ಟೇ ಅಲ್ಲದೇ, ವಿವಿಧ ವಲಯಗಳಾದ ಸೇನೆ, ಬ್ಯಾಂಕಿಂಗ್‌ನಲ್ಲಿ ಭದ್ರತಾ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತ/ಸಹಾಯಕರು, ಜೈಲು ವಾರ್ಡನ್‌ ಸೇರಿದಂತೆ ಸಾರ್ವಜನಿಕ ವಲಯ ಉದ್ಯಮಗಳಾದ ಬಿಎಚ್‌ಇಎಲ್, ಎಸ್‌ಎಐಎಲ್ ಮತ್ತು ಐಒಸಿಎಲ್‌ನಂತಹ ಅನೇಕ ತಾಂತ್ರಿಕ ವಲಯಗಳಲ್ಲೂ ಅಪ್ರೆಂಟಿಶಿಷ್‌ ಮಾಡಲೂಬಹುದಾಗಿದೆ. ಇದಕ್ಕಾಗಿ ಸರಿಯಾದ ಆಯ್ಕೆ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಇದನ್ನೂ ಓದಿ: ಮನುಷ್ಯ ಜೀವನ ʻನೀರ ಮೇಲಿನ ಗುಳ್ಳೆಯಂತೆʼಗೆ ಸಾಮ್ಯವಾದ ʻಎಐ ಬಬಲ್‌ʼ - ಎಂದರೇನು ಗೊತ್ತಾ!?