Skip to main content
ವಿಡಿಯೋ
1/3
general

ಡಿಜಿಟಲ್‌ ರೇಷನ್‌ ಕಾರ್ಡ್‌ - ಏನಿದರ ಲಾಭ ಗೊತ್ತಾ?

By Shravanthi R
ಡಿಜಿಟಲ್‌ ರೇಷನ್‌ ಕಾರ್ಡ್‌ - ಏನಿದರ ಲಾಭ ಗೊತ್ತಾ?

ಡಿಜಿಟಲ್ ಪರಿವರ್ತನೆಯ ಭಾಗವಾಗಿ ರೇಷನ್‌ ಕಾರ್ಡ್ ಈಗ ಆನ್‌ಲೈನ್ ರೂಪ ಪಡೆದುಕೊಂಡಿದ್ದು, ONORC ಯೋಜನೆಯಡಿ ದೇಶದ ಯಾವುದೇ ರಾಜ್ಯದ ಫೇರ್ ಪ್ರೈಸ್ ಶಾಪ್‌ನಿಂದ ಪಡಿತರ ಪಡೆಯಲು ಅನುಕೂಲವಾಗಿದೆ.

ಡಿಜಿಟಲ್‌ಮಯ ಕೃಷೆಯಿಂದ ಎಲ್ಲವೂ ತಂತ್ರಜ್ಞಾನಮಯವಾಗಿ ಪರಿಣಮಿಸುತ್ತಿದೆ. ಇದೀಗ, ಪಡಿತರ ಚೀಟಿ - ಆನ್‌ಲೈನ್‌ ಸ್ವರೂಪ ಪಡೆದಿದ್ದು, ರೇಷನ್‌ನ್ನು ಮೊಬೈಲ್‌ ಮೂಲಕ ಪಡೆಯಲು ಅನುಕೂಲ ಮಾಡಿಕೊಟ್ಟಿದೆ ಎನ್ನಲಾಗಿದೆ. ಇದನ್ನು “ಒಂದು ರಾಷ್ಟ್ರ ಒಂದು ಕಾರ್ಡ್‌ (ONORC - One Nation, One Ration Card) ಯೋಜನೆಯಡಿ ರೂಪಿಸಲಾಗಿದೆ ಎನ್ನಲಾಗಿದೆ.

ಕಾಗದ ಸ್ವರೂಪದ ರೇಷನ್‌ ಕಾರ್ಡ್‌ಗೆ ವಿದಾಯ ಹೇಳುವ ಸಮಯ ಬಂದಾಗಿದೆ. ಈ ಮೂಲಕ ಪಿಡಿಎಸ್‌ - ಪಬ್ಲಿಕ್‌ ಡಿಸ್ಟ್ರಿಬ್ಯೂಷನ್‌ ಸಿಸ್ಟಂ ಅಡಿಯಲ್ಲಿ ದೊರೆಯುವ ಅಕ್ಕಿ, ಗೋಧಿ, ಸಕ್ಕರೆ ಹಾಗೂ ಸಬ್ಸಿಡಿ ಆಹಾರವನ್ನು ಸುಲಭವಾಗಿ ಪಡೆಯಬಹುದಾಗಿದೆ. ಮೊಬೈಲ್‌ ಪಿಡಿಎಫ್‌ ಅಥವಾ ಕ್ಯೂಆರ್‌ ಕೋಡ್‌ ಮೂಲಕ ಬಳಸಬಹುದೆಂದು ವರದಿ ತಿಳಿಸಿದೆ. 

ನಕಲಿ ಕಾರ್ಡ್‌ಗಳನ್ನು ತಡೆಯುವುದಲ್ಲದೇ, ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಪರಿಚಯಿಸಲಾಗಿದೆ. ಇದನ್ನು ಪ್ರತೀ ರಾಜ್ಯದ ಆಪ್‌ ಇಲ್ಲವೇ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. ಮೇರಾ ರೇಷನ್ 2.0, ಉಮಾಂಗ್ ಆಪ್ ಅಥವಾ ನಿಮ್ಮ ರಾಜ್ಯದ ಪಿಡಿಎಸ್ ಪೋರ್ಟಲ್ ಮೂಲಕ ಅರ್ಜಿ ಹಾಕಬಹುದು. 

ಒಮ್ಮೆ ಡಿಜಿಟಲ್‌ ಕಾರ್ಡ್‌ ಪಡೆದ ನಂತರ ಇದರ ಪ್ರಯೋಜನ ಪಡೆಯಬಹುದಾಗಿದೆ. ರಾಜ್ಯದ ಅಲ್ಲದೇ ಯಾವುದೇ ರಾಜ್ಯದ ಫೇರ್‌ ಪ್ರೈಸ್‌ ಶಾಪ್‌ನಿಂದಲೂ ಧಾನ್ಯಗಳನ್ನು ಪಡೆಯಬಹುದೆಂದು ತಿಳಿಸಲಾಗಿದೆ. ಇದರಿಂದ ವಲಸೆ ಕಾರ್ಮಿಕರು ಉಪಯುಕ್ತವಾಗಲಿದೆ. The Unspeakable Word Guessing Game for Kids Aged 5 Plus Fast-Paced Educational and Party Game 90 Cards One Minute Sand Timer and Manual Improves Vocabulary Communication and Thinking Skills

ಬೇಕಾಗುವ ದಾಖಲೆಗಳೇನು?

ಡಿಜಿಟಲ್‌ ರೇಷನ್‌ ಕಾರ್ಡ್‌ಗಾಗಿ ಆಧಾರ್ ಕಾರ್ಡ್, ವಿಳಾಸ, ಹಳೆಯ ರೇಷನ್ ಕಾರ್ಡ್ (ಇದ್ದರೆ) ಆದಾಯ ಪ್ರಮಾಣ ಪತ್ರ ಮತ್ತು ಫೋಟೋ ನೀಡಬಹುದು. ಅರ್ಜಿ ಹಾಕಿದ 15–30 ದಿನಗಳಲ್ಲಿ ಕಾರ್ಡ್ ಪಡೆಯಬಹುದು ಎನ್ನಲಾಗಿದೆ. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ʻಇ- ರೇಷನ್‌ ಕಾರ್ಡ್‌ʼ ಅನ್ನು ಡೌನ್ಲೋಡ್‌ ಮಾಡಬಹುದಾಗಿದೆ. ಇದನ್ನೂ ಓದಿ: ಮನುಷ್ಯ ಜೀವನ ʻನೀರ ಮೇಲಿನ ಗುಳ್ಳೆಯಂತೆʼಗೆ ಸಾಮ್ಯವಾದ ʻಎಐ ಬಬಲ್‌ʼ - ಎಂದರೇನು ಗೊತ್ತಾ!?