ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎನಿಸಿರುವ ಐಕ್ಯೂ 15 ಬಿಡುಗಡೆಯಾಗಿದ್ದು, ಇದು ಬಳಕೆ ಮಾಡಿದಷ್ಟು ಬಿಸಿಯಾಗುವುದಿಲ್ಲ ಎನ್ನಲಾಗಿದೆ. ಏಕೆಂದರೆ. ಇದನ್ನು ತಂಪಾಗಿಸಲು 14,000mm² ವೇಪರ್ ಚೇಂಬರ್ ಅನ್ನು ಹೊಂದಿದೆ ಎನ್ನಲಾಗಿದೆ.
ಈ ಫೋನ್ ತನ್ನ ಫೀಚರ್ಸ್‌ಗಳಿಂದ ಹಾಗೂ ಕಾರ್ಯಕ್ಷಮತೆಯಿಂದ ಗ್ರಾಹಕರ ಮನಸೆಳೆದಿದೆ. ಇದರ ಬೆಲೆ ಮತ್ತು ಕಾರ್ಯ ವಿಷೇಶಣಗಳ ಕುರಿತ ಮಾಹಿತಿ ಈ ಕೆಳಗಿನಂತಿವೆ:
ಇದರಲ್ಲಿ ಉನ್ನತ ಶ್ರೇಣಿಯ ಬೃಹತ್ 7000mAh ಬ್ಯಾಟರಿ ಕೆಪಾಸಿಟಿ, ಅಲ್ಟ್ರಾ ಫಾಸ್ಟ್ 100w ವೈರ್ಡ್ ಚಾರ್ಜಿಂಗ್ 40w ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವುದು. ಸ್ವಯಂ ಅಭಿವೃದ್ದಿಪಡಿಸಿದ ಗೇಮಿಂಗ್ ಚಿಪ್, 6.85 ಇಂಚ್‌ನ, 50MP ಅಲ್ಟ್ರಾವೈಡ್ ಲೆನ್ಸ್ ಹೊಂದಿದ್ದು, ಎಐ ಬೆಂಬಲಿತ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. Imagimake Mapology India with State Capitals - Educational Toy and Learning Aid for Boys and Girls - India Map Puzzle - Jigsaw Puzzle, 25 Pieces, Kids
ಇದರ ಆರಂಭಿಕ ಬೆಲೆಯು 64,999 ರೂ ಗಳಲ್ಲಿ ಸಿಗಲಿದೆ. 12GB RAM 256 Storage 72,999; 16GB RAM 512 Storage 79,999 ಬೆಲೆಯಲ್ಲಿ ದೊರೆಯಲಿದೆ. ಇದರಲ್ಲಿ ಕಲರ್ ಆಪ್ಶನ್‌ಗಳಾಗಿ ಲಿಂಗ್ಯುನ್, ಲೆಜೆಂಡರಿ ಎಡಿಷನ್, ಟ್ರ್ಯಾಕ್ ಎಡಿಷನ್ ಮತ್ತು ವೈಲ್ಡರ್ನೆಸ್ ಹೊಂದಿದೆ.
ಈಗಾಗಲೇ, ಆನ್‌ಲೈನ್ ಫ್ಲಾಟ್‌ಫಾರ್ಮ್‌ಗಳಲ್ಲಿ, ಪ್ರೀ ಬುಕ್ಕಿಂಗ್ ಆಗಿದ್ದು, ದಾಖಲೆ ಬರೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ಹೆಸರಲ್ಲಿ ʻಎಐʼ ಮನುಷ್ಯರ ವಂಚನೆ - ಏನಿದು ಇ.ಡಿ ಪ್ರಕರಣ!?