Skip to main content
ವಿಡಿಯೋ
1/3
technology

ಜನಪ್ರಿಯ ಆನ್‌ಲೈನ್‌ ವಿಡಿಯೋ ಮೀಟಿಂಗ್‌ ಆಪ್‌ ʻಗೂಗಲ್‌ ಮೀಟ್‌ʼ ಸ್ಥಗಿತ: ನೆಟ್ಟಿಗರ ಆಕ್ರೋಶ!

By Shravanthi R
ಜನಪ್ರಿಯ ಆನ್‌ಲೈನ್‌ ವಿಡಿಯೋ ಮೀಟಿಂಗ್‌ ಆಪ್‌ ʻಗೂಗಲ್‌ ಮೀಟ್‌ʼ ಸ್ಥಗಿತ: ನೆಟ್ಟಿಗರ ಆಕ್ರೋಶ!

ಆಧುನಿಕ ಸಂವಹನ ವಿಧಾನಗಳಲ್ಲಿ ಮಹತ್ವ ಪಡೆದಿರುವ ಆನ್‌ಲೈನ್‌ ಮೀಟಿಂಗ್‌ ಹಾಗೂ ವಿಡಿಯೋ ಕಾಲಿಂಗ್‌ ವೇದಿಕೆಯಾಗಿರುವ ಗೂಗಲ್‌ ಮೀಟ್‌ ಇಂದು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತು.

ಇಂಟರ್‌ನೆಟ್‌ ಬಳಕೆದಾರರು ಸಭೆ ಸೇರಲು ಬಳಸುತ್ತಿದ್ದ ಸೋಷಿಯಲ್‌ ಕನೆಕ್ಟಿವ್‌ ಸ್ಪೇಸ್‌ ಆಗಿರುವ ʻಗೂಗಲ್‌ ಮೀಟ್‌ʼ ಇಂದು ಸೇವಾ ಅಡಚಣೆಯನ್ನು ಹೊಂದಿತು. ಈ ಕಾರಣ ಹಲವಾರು ಸಂಸ್ಥೆಗಳು, ವ್ಯಕ್ತಿಗಳು ಸೇರಬೇಕಿದ್ದ ನಿಗದಿತ ಮೀಟಿಂಗ್‌ಗಳನ್ನು ಮುಂದೂಡಲಾಯಿತು; ಅಲ್ಲದೇ ಕೆಲಸಕ್ಕೆ ಕಳುಹಿಸಬೇಕಾದ ಸಂದೇಶಗಳನ್ನು ಸಂವಹಿಸುವಲ್ಲಿ ದೋಷ ಉಂಟಾಯಿತು. 

ಈ ಬಗ್ಗೆ ಹೆಚ್ಚಿನ ಬಳಕೆದಾರರು ದೂರಿದ್ದು, ಪ್ರಮುಖ ಸಮಸ್ಯೆಗಳ ಕುರಿತು ಹಂಚಿಕೊಂಡಿದ್ದಾರೆ. ಡೌನ್‌ಡಿಟೆಕ್ಟರ್‌ನಂತಹ ಸ್ವತಂತ್ರ ಔಟೇಜ್‌ ಟ್ರ್ಯಾಕರ್‌ಗಳು ಸಲ್ಲಿಸಿದ ವರದಿಗಳಲ್ಲಿ ಉಂಟಾಗಿರುವ ತೀವ್ರ ಅಡಚಣೆಯ ವ್ಯಾಪ್ತಿಯನ್ನು, ಸಂಪರ್ಕ ದೋಷಗಳನ್ನು ತೋರ್ಪಡಿಸಿದೆ ಎನ್ನಲಾಗಿದೆ.  Wooden India Map Puzzle for Kids with States & Capitals | Educational Geography Puzzle Game Learning Toy for Logic & Fine Motor Skills Development. Age 5-10 | Ideal Gift for Boys & Girls.

ಇದರಿಂದಾಗಿ ವರ್ಚೂಯಲ್‌ ಅವಧಿಗಳಲ್ಲಿ ಡೇಟಾ ಪೂರೈಕೆಯಾಗದೇ, ಪರದಾಡುವಂತಾಗಿದೆ ಎನ್ನಲಾಗಿದೆ. ಈ ರೀತಿಯ ಹಠಾತ್‌ ಅಡಚಣೆಯ ಬಗ್ಗೆ ಬಳಕೆದಾರರು ಹತಾಶರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿರುವುದಾಗಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಎಷ್ಟೇ ಬಳಸಿದ್ರೂ ಬಿಸಿಯಾಗದ ಫೋನ್‌ - ಇಂದು ಭಾರತದಲ್ಲಿ iQOO 15 ಅಧಿಕೃತ ಬಿಡುಗಡೆ!?