ದೇಶದ ಗೃಹ ಸಚಿವರಾದ ಅಮಿತ್ ಶಾ ಸೇರಿದಂತೆ, ಕೇಂದ್ರ ಸಚಿವರು ತಮ್ಮ ಮೇಲ್ ಐಡಿಯನ್ನು ಝೋಹೊ ಮೇಲ್‌ಗೆ ಬದಲಾಯಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅವರು ಸಾರ್ವಜನಿಕರಿಗೂ ಕರೆ ನೀಡಿದ್ದು, ಡಿಜಿಟಲ್ ಸ್ವಾವಲಂಬನೆಯತ್ತ ಸ್ವದೇಶಿ ಇ-ಮೇಲ್‌ಗೆ ಉತ್ತೇಜನ ನೀಡಲಾಗುತ್ತಿದೆ ಎನ್ನಲಾಗಿದೆ.
ಇದರ ಭಾಗವಾಗಿ, ಜಿ-ಮೇಲ್ ನ ಎಲ್ಲಾ ಮೇಲ್‌ಗಳನ್ನು ಝೊಹೋಗೆ ವರ್ಗಾಯಿಸಲು ಸರಳ ಪ್ರಕ್ರಿಯೆಯನ್ನು ಪರಿಚಯಿಸಲಾಗಿದೆ.The Unspeakable Word Guessing Game for Kids Aged 5 Plus Fast-Paced Educational and Party Game 90 Cards One Minute Sand Timer and Manual Improves Vocabulary Communication and Thinking Skills
ಈ ಮೂಲಕ ಯಾವುದೇ ಸಂಪರ್ಕವನ್ನು ಕಳೆದುಕೊಳ್ಳದೇ, ಸರಾಗವಾಗಿ ನಿರ್ವಹಿಸಲು ಈ ಕ್ರಮವನ್ನು ಸೂಚಿಸಿದೆ:
Zoho ಮೇಲ್ ವೆಬ್‌ಸೈಟ್‌ನಲ್ಲಿ ಮೇಲ್ ಖಾತೆಯನ್ನು ರಚಿಸಿ.
Gmail ನಲ್ಲಿ IMAP ಸಕ್ರಿಯಗೊಳಿಸಿ - ಜಿ-ಮೇಲ್ ಸೆಟ್ಟಿಂಗ್‌ಗಳು - ಫಾರ್ವರ್ಡ್ ಮಾಡುವಿಕೆ - Post Office Protocol - (POP) / Internet Message Access Protocol (IMAP). ಇದು ಡೇಟಾ ವರ್ಗಾವಣೆಗಾಗಿ Zoho ನಿಮ್ಮ Gmail Inbox ಪ್ರವೇಶಿಸಲು ಅನುಮತಿಸುತ್ತದೆ.
Zoho ಮೇಲ್‌ನ ಸೆಟ್ಟಿಂಗ್ಸ್‌ನಲ್ಲಿರುವ Migration wizard ಬಳಸಿ. ಇದು ನಿಮ್ಮ ಡೇಟಾವನ್ನು ಸಂಘಟಿಸಲಾಗಿದೆ ಮತ್ತು ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸುವುದು.
Zoho Inbox ನಲ್ಲಿ ಜಿ-ಮೇಲ್‌ಗಳನ್ನು ಸ್ವೀಕರಿಸಲು, ಜಿ-ಮೇಲ್ ಸೆಟ್ಟಿಂಗ್‌ನ ಫಾರ್ವರ್ಡ್ ವಿಭಾಗದ POP/IMAP ಗೆ ಹೋಗಿ Zoho ಮೇಲ್ ವಿಳಾಸವನ್ನು ಸೇರಿಸಿ.
ಈ ಎಲ್ಲಕ್ಕೂ ಮೊದಲು ಡೊಮೈನ್‌ನ್ನು ಪರಿಶೀಲಿಸಿ ಮತ್ತು ಫಾರ್ವರ್ಡ್ ಮಾಡುವಿಕೆಯಂತಹ ಸೆಟ್ಟಿಂಗ್ ವಿವರಗಳನ್ನು ಪರಿಶೀಲಿಸಿ.
Zoho ವೂ ಕಸ್ಟಮೈಸ್ಡ್ ಡೊಮೈನ್ ಸಿಸ್ಟಮ್ ಹೊಂದಿದೆ ಎನ್ನಲಾಗಿದೆ. 1 GB ಯಷ್ಟು Doc File Attachment ಮಿತಿಗಳನ್ನು ಹೊಂದಿದ್ದು, ಜಾಹೀರಾತು -ಮುಕ್ತ ಇನ್‌ಬಾಕ್ಸ್ ಸೌಲಭ್ಯ ಸೇರಿದಂತೆ, ಇತರೆ ವೈಶಿಷ್ಟ್ಯಗಳನ್ನು ಒದಗಿಸುವುದೆಂದು ತಿಳಿಸಲಾಗಿದೆ. ಇದನ್ನೂ ಓದಿ: ಜನಪ್ರಿಯ ಆನ್‌ಲೈನ್ ವಿಡಿಯೋ ಮೀಟಿಂಗ್ ಆಪ್ ʻಗೂಗಲ್ ಮೀಟ್ʼ ಸ್ಥಗಿತ: ನೆಟ್ಟಿಗರ ಆಕ್ರೋಶ!