ಕೇಂದ್ರ ಸರ್ಕಾರದ ನ್ಯಾಷನಲ್ ಎಜುಕೇಷನ್ ಪಾಲಿಸಿಗೆ ಬದಲಾಗಿ ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) ತರಲಾಗುತ್ತಿದೆ. ಎನ್‌ಇಪಿಗೆ ಬದಲಾಗಿ ಎಸ್‌ಇಪಿಯನ್ನು ಜಾರಿಗೆ ತರಲು ಸಿದ್ದತೆ ನಡೆಸಲಾಗಿದೆ.
ರಾಜ್ಯ ಶಿಕ್ಷಣ ನೀತಿ ಕುರಿತಾಗಿ ಸಲ್ಲಿಸಿದ್ದ ವರದಿಯನ್ನು ಸಂಕ್ಷಿಪ್ತಗೊಳಿಸಿ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ಸದ್ಯದಲ್ಲೇ ಈ ಬಗ್ಗೆ ತೀರ್ಮಾನಿಸಲಾಗುವುದೆಂದು ವರದಿಯಲ್ಲಿ ತಿಳಿಸಿದೆ.
ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರಕ್ಕೆ ತರಲು ಸಿದ್ದತೆ ನಡೆದಿದೆ. ಇದರಿಂದಾಗಿ ರಾಜ್ಯ ಪಠ್ಯಕ್ರಮದತ್ತ ವಿದ್ಯಾರ್ಥಿಗಳು ಸನ್ನಿಹಿತವಾಗಲು ಅಂತಿಮ ವರದಿ ಸಲ್ಲಿಕೆಗೆ ತಯಾರಿ ನಡೆಸಲಾಗಿದೆ. ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದ ಜಾರಿಗೆ ಸರ್ಕಾರವು ಮುಂದಡಿ ಇಟ್ಟಿದೆ ಎನ್ನಲಾಗಿದೆ. Imagimake Mapology India with State Capitals - Educational Toy and Learning Aid for Boys and Girls - India Map Puzzle - Jigsaw Puzzle, 25 Pieces, Kids
ಮುಖ್ಯಮಂತ್ರಿಗಳ ಸೂಚನೆ ಹಿನ್ನಲೆಗೆ ಉನ್ನತ ಶಿಕ್ಷಣ ಇಲಾಖೆಯು ವರದಿ ತಯಾರಿಸಿದ್ದು, ಮುಂದಿನ ವರ್ಷದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಇಪಿ ಅಂಗೀಕಾರ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಫಲವಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಹಾಗೂ ಕಾಲೇಜಿನಲ್ಲಿ ಕಡ್ಡಾಯ ಎಸ್‌ಇಪಿ ಅಳವಡಿಕೆಯಾಗಲಿದೆ ಎನ್ನಲಾಗಿದೆ. ಇದನ್ನೂ ಓದಿ: 10ನೇ ತರಗತಿಯ ನಂತರ ಸರ್ಕಾರಿ ಉದ್ಯೋಗ: ನಿಮ್ಮ ಮುಂದಿರುವ ಅವಕಾಶಗಳು ಇಲ್ಲಿವೆ!