ಓದಿನಲ್ಲಿ ನಿರಾಸಕ್ತಿಯಿದ್ದರೆ ನಿಮ್ಮ ಪ್ರತಿಭೆ ಹಾಗೂ ಕೌಶಲ್ಯದಿಂದಲೇ ನಿಮ್ಮ ವೃತ್ತಿ ಜೀವನವನ್ನು ಕಟ್ಟಿಕೊಳ್ಳಬಹುದು. ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಮುಖಾಂತರ ವಿದ್ಯಾರ್ಥಿಗಳು ಉತ್ತಮ ಆದಾಯವನ್ನು ಗಳಿಸಬಹುದಾಗಿದೆ. ಈ ಬಗ್ಗೆ ಆಸಕ್ತಿ ಹಾಗೂ ಮುಕ್ತತೆ ಇದ್ದರೆ ಯಶಸ್ಸು ನಿಶ್ಚಿತವಾಗುವುದು. ವೃತ್ತಿ ಜೀವನದ ಹಾದಿಯಲ್ಲಿ, ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ. ಇವತ್ತಿನ ಡಿಜಿಟಲ್ ವರ್ಡ್‌ನಲ್ಲಿ ಬೇಡಿಕೆಯಿರುವ ಅಧ್ಯಯನರಹಿತ ಕೋರ್ಸ್‌ಗಳ ಬಗ್ಗೆ ಇಲ್ಲಿದೆ ಉಪಯುಕ್ತವಾದ ಮಾಹಿತಿ.
ಯಾವ ಮಕ್ಕಳು ಇಂಟರ್‌ಮೀಡಿಯೆಟ್(12th) ಮುಗಿದ ನಂತರ, ಓದಲು ವಿಮುಖಗೊಂಡರೆ, ಅಂತಹವರಿಗೆ ಈ ಡಿಜಿಟಲ್ ಯುಗದಲ್ಲಿ ಸೃಜನಾತ್ಮಕ ಕೋರ್ಸ್‌ಗಳು ಉದ್ಯೋಗಾವಕಾಶಗಳಿಗೆ ಸಹಕರಿಸಿದೆ. ಅವುಗಳೆಂದರೆ:
ಗ್ರಾಫಿಕ್ ಡಿಸೈನ್ -
ಇದೊಂದು ಕ್ರಿಯಾತ್ಮಕ ಕೋರ್ಸ್. ಕ್ರಿಯೇಟಿವಿಗೆ ತಕ್ಕಂತೆ ಮೋಡಿ ಮಾಡುವಂತ ದೃಶ್ಯಾತ್ಮಕ ಕೈಚಳಕದ ಕೆಲಸ. ಇದರಲ್ಲಿ ಪೋಸ್ಟರ್ ಡಿಸೈನಿಂಗ್, ಜಾಹೀರಾತು, ಸಾಮಾಜಿಕ ಮಾಧ್ಯಮ ವಿನ್ಯಾಸಗಳು ಸೇರಿದಂತೆ ವಿಷಯ ಸೂಚಕ ಮಾದರಿಗಳನ್ನು ವರ್ಣಾತ್ಮಕ ಕೌಶಲ್ಯದ ಮೂಲಕ ತೋರ್ಪಡಿಸುವ ವಿಶಿಷ್ಟತೆ ಹೊಂದಿದೆ. ಕಾರ್ಪೋರೆಟ್‌ನಿಂದ ಫ್ರೀಲ್ಯಾನ್ಸಿಂಗ್ ವರೆಗೆ ಅನೇಕ ಉದ್ಯೋಗಾವಕಾಶಗಳಿವೆ.
ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ
ಇದೊಂದು ಕ್ಯಾಮೆರಾ ಕಥೆ. ಕ್ಯಾಮೆರಾ ಬಳಸಿ ಸ್ಟೋರಿ ಹೇಳುವ ವಿಭಿನ್ನ ಕಾರ್ಯತಂತ್ರವಾಗಿದೆ. ಮದುವೆ. ಕಾರ್ಯಕ್ರಮ ಸಮಾರಂಭ ಸೇರಿದಂತೆ ಛಾಯಾಗ್ರಹಣ ಇಷ್ಟಪಡುವವರಿಗೆ ನೆನೆಪುಗಳನ್ನು ನಿಜವಾಗಿಸುವವರಿಗೆ ಇದು ಉತ್ತಮ ವೇದಿಕೆ. ಕಲಾತ್ಮಕ ದೃಷ್ಟಿಯಿರುವ ವಿಡಿಯೋ ರಚನೆ ಮತ್ತು ವಿಶಿಷ್ಟ ಫೋಟೋಗ್ರಫಿಗೆ ಹೆಚ್ಚು ಉದ್ಯೋಗ ಬೇಡಿಕೆಯಿದೆ.
ಫ್ಯಾಷನ್ ಡಿಸೈನರ್
ಸೌಂದರ್ಯ ಮತ್ತು ಫ್ಯಾಷನ್ ಇಂಡಸ್ಟ್ರಿಯು ವೇಗವಾಗಿ ಬೆಳೆಯುತ್ತಿದೆ. ಮೇಕಪ್ ಹಾಗೂ ಕೇಶವಿನ್ಯಾಸದಲ್ಲಿ ಆಸಕ್ತಿಯಿರುವವರು ಈ ವೃತ್ತಿವಿಧವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕೋರ್ಸ್ ನಂತರ, ಸಲೂನ್ ಅಥವಾ ಫ್ಯಾಷನ್ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದಾಗಿದೆ. ಬ್ಯೂಟಿಷಿಯನ್ ಆಗಿ ಪಾರ್ಲರ್ ತೆರೆಯಬಹುದು. ಹೊಸ ಬಟ್ಟೆಗಳ ವಿನ್ಯಾಸದ ಪರಿಕಲ್ಪನೆಯ ಮೂಲಕ ಸ್ವ-ಉದ್ಯೋಗಕ್ಕೆ ಸಾಥ್ ನೀಡಲಿದೆ. Imagimake: Mapology India and World Maps with Capitals - Learn Capitals and Country Flags - Educational Toy for Kids Above 5 Years, Multicolor
ಕಂಟೆಂಟ್ ಕ್ರಿಯೇಟರ್
ಇಂದಿನ ದಿನಮಾನಕ್ಕೆ ಒಗ್ಗಿಕೊಂಡಿರುವ ಅಪೇಕ್ಷಿತ ಉದ್ಯೋಗವಿದಾಗಿದೆ. ಸಾಮಾಜಿಕ ಮಾಧ್ಯಮದ ಕಾಲಕ್ಕೆ ತಕ್ಕಂತೆ ವಿವಿಧ ಸೋಷಿಯಲ್ ಮೀಡಿಯಾ ಹ್ಯಾಂಡ್ಲಿಂಗ್‌ಗೆ ಕಂಟೆಂಟ್ ರಚನೆಕಾರರಿಗೆ ಬಹುವಾಗಿ ಬೇಡಿಕೆಯಿದೆ. ಶಾರ್ಟ್ ವಿಡಿಯೋಗಳು, ಕಂಟೆಂಟ್ ನಿರ್ಮಾಣ ಹಾಗೂ ಸಾಮಾಜಿಕ ಮಾಧ್ಯಮ ನಿರ್ವಹಣೆ ಸೇರಿದಂತೆ ವಿವಿಧ ಆಯಾಮಗಳನ್ನೊಳಗೊಂಡ ಕೋರ್ಸ್ ಮಾಡುವುದರಿಂದ ಉತ್ತಮ ಅವಕಾಶಗಳಿವೆ.
ಇಂಟೀರಿಯರ್ ಡಿಸೈನರ್
ಮನೆ ಅಥವಾ ಕಟ್ಟಡಗಳ ಸೃಜನಾತ್ಮಕ ವಿನ್ಯಾಸಕ್ಕಾಗಿ ವೃತ್ತಿಪರ ಸಹಯೋಗ ಮುಖ್ಯವಾಗಿರುತ್ತದೆ. ಸುಂದರಯುತ ಬಣ್ಣ, ಬೆಳಕು, ಪೀಠೋಪಕರಣಗಳು ಸಮ್ಮೋಹಕವಾದ ಕೌಶಲ್ಯಗಳಿಗೆ ಇದು ಉತ್ತಮ ಕೋರ್ಸ್ ಎನಿಸಿದೆ. ವಾಸ್ತುಶಿಲ್ಪದ ಒಳಾಂಗಣದ ವಿನ್ಯಾನಗಳಿಗೆ ಬೇಡಿಕೆಯಿದ್ದು, ಲೇಟೆಸ್ಟ್ ಸ್ಟೈಲ್‌ಗಳ ಮೂಲಕ ಆಕರ್ಷಿಸಿದೆ.
ಈ ಐದು ಕೋರ್ಸ್‌ಗಳಲ್ಲದೇ ಶೈಕ್ಷಣಿಕ ಕೋರ್ಸ್‌ಗಳ ಹೊರತಾಗಿ ಚೆಫ್ / ಕೇಟರರ್, ಪ್ರಾಜೆಕ್ಟ್ ಸಹಾಯಕರು ಹೀಗೆ ಇನ್ನಿತರೆ ಪ್ರತಿಭೆಗೆ ತಕ್ಕ ಮನ್ನಣೆ ನೀಡುವ ಕ್ಷೇತ್ರಗಳಲ್ಲಿ ಅಲ್ಪಾವಧಿಯ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ವೃತ್ತಿಜೀವನವನ್ನು ಸುಗಮಗೊಳಿಸಿಕೊಳ್ಳಬಹುದಾಗಿದೆ. ಇದನ್ನೂ ಓದಿ: NEP ಗೆ ಸೆಡ್ಡು ಹೊಡೆಯಲು SEP ಜಾರಿ - ಮುಂದಿನ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಸಾಧ್ಯತೆ!?