Skip to main content
ವಿಡಿಯೋ
1/3
general

ಇಂದ್ರಜಾಲ್‌ ರೇಂಜರ್‌: ಎಐ ಚಾಲಿತ ಆಂಟಿ- ಡ್ರೋನ್‌ ಗಸ್ತು ವಾಹನ ಬಿಡುಗಡೆ - ಭಾರತದ ಆಂತರಿಕ ಭದ್ರತೆಗೆ ಬಲ!

By Shravanthi R
ಇಂದ್ರಜಾಲ್‌ ರೇಂಜರ್‌: ಎಐ ಚಾಲಿತ ಆಂಟಿ- ಡ್ರೋನ್‌ ಗಸ್ತು ವಾಹನ ಬಿಡುಗಡೆ - ಭಾರತದ ಆಂತರಿಕ ಭದ್ರತೆಗೆ ಬಲ!

ಕೃತಕಬುದ್ದಿಮತ್ತೆ (ಎಐ) ತಂತ್ರಜ್ಞಾನವುಳ್ಳ ಹೊಸ “ಇಂದ್ರಜಾಲ್‌ ರೇಂಜರ್‌” ಆಂಟಿ- ಡ್ರೋನ್‌ ಗಸ್ತು ವಾಹನವನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ದೇಶದ ರಕ್ಷಣಾ ಕ್ಷೇತ್ರದಲ್ಲೂ ಎಐ ಕ್ರಾಂತಿಯುಂಟು ಮಾಡಿದೆ ಎನ್ನಲಾಗಿದೆ.

ಹೈದರಾಬಾದ್‌ ಮೂಲಕ ಇಂದ್ರಜಾಲ್‌ ತನ್ನ ಹೊಸ “ಇಂದ್ರಜಾಲ್‌ ರೇಂಜರ್‌” ಆಂಟಿ- ಡ್ರೋನ್‌ ಗಸ್ತು ವಾಹನವನ್ನು ಪರಿಚಯಿಸಿದೆ. ಇದು ಎಐ ಚಾಲಿತ ಯುದ್ದತಂತ್ರ ಹಾಗೂ ಗಡಿಭದ್ರತಾ ನಿಯೋಜನೆಗಾಗಿ, ವಿನ್ಯಾಸಗೊಳಿಸಿದ ವಾಹನವಾಗಿದೆ. ಇದು ಚಲನೆಯಲ್ಲಿರುವ ಪ್ರತಿಕೂಲ ಡ್ರೋನ್‌ಗಳನ್ನು ಪತ್ತೆ ಹಚ್ಚುವುದು; ಅದನ್ನು ಟ್ರ್ಯಾಕ್‌ ಮಾಡುವುದು ಮತ್ತು ಅಪಹರಿಸಬಹುದು ಎಂದು ತಿಳಿಸಲಾಗಿದೆ. 

ಇದನ್ನು ಕೌಂಟರ್‌ - ಡ್ರೋನ್‌ ಹಾಗೂ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯಲ್ಲಿನ ದುರ್ಬಲತೆಯನ್ನು ಪರಿಹರಿಸಲು ಹಾಗೂ ಸಕ್ರಿಯ ಗಡಿ ಕಾರ್ಯಾಚರಣೆಗಳು, ಬೆಂಗಾವಲು ರಕ್ಷಣೆ ಮತ್ತು ವಾಯುನೆಲೆಯ ಭದ್ರತೆಗಾಗಿ ನಿರ್ಮಿಸಲಾಗಿದೆ ಎಂದು ತಿಳಿಸಲಾಗಿದೆ. ಇದು ಸಕ್ರಿಯವಾಗಿ ಚಲನೆಯಲ್ಲಿರುವಾಗ ಬೇರೆ ಡ್ರೋನ್‌ಗಳನ್ನು ಪತ್ತೆ ಹಚ್ಚಲು, ಟ್ರ್ಯಾಕ್‌ ಮಾಡಲು ಹಾಗೂ ಅದನ್ನು ತಟಸ್ಥಗೊಳಿಸಲು ಸಹಕರಿಸುತ್ತದೆ ಎನ್ನಲಾಗಿದೆ. Wooden India Map Puzzle for Kids with States & Capitals | Educational Geography Puzzle Game Learning Toy for Logic & Fine Motor Skills Development. Age 5-10 | Ideal Gift for Boys & Girls.

ಇದು ಅಕ್ರಮ ಶಸ್ತ್ರಾಸ್ತ್ರಗಳ ಒಳಹರಿವನ್ನು ತಡೆದು ಜೀವರಕ್ಷಕನಂತೆ ಕೆಲಸ ನಿರ್ವಹಿಸಲಿದ್ದು, ವಿಮಾನ ನಿಲ್ದಾಣಗಳು, ಗಡಿ ಭಾಗಗಳು, ಸಂಸ್ಕರಣಾಗಾರಗಳು, ಸಮುದ್ರ ಬಂದರುಗಳು, ನಗರ ಹಾಗೂ ಮಿಲಿಟರಿ ರಚನೆಗಳನ್ನು ರಕ್ಷಿಸುವಲ್ಲಿ ನೆರವಾಗಲಿದೆ ಎಂದು ಹೇಳಲಾಗಿದೆ. ಈ ಮೂಲಕ ಇದು ಭಾರತದ ಆಂತರಿಕ ಭದ್ರತೆಗೆ ಬಲತುಂಬಲಿದೆ. ಇಂದ್ರಜಾಲ್‌ನಲ್ಲಿ ಇದು ನಮ್ಮ ಪ್ರಾಥಮಿಕ ಧ್ಯೇಯವೆಂದು ಇಂದ್ರಜಾಲ್‌ ಸಿಇಓ ಹಾಗೂ ಸಂಸ್ಥಾಪಕರಾದ ಕಿರಣ್‌ ರಾಜು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 12th ಆದ ಮೇಲೆ ವೃತ್ತಿ ಆಯ್ಕೆಯ ಅನ್ವೇಷಣೆಗೆ ಇಲ್ಲಿವೆ ಅತ್ಯುತ್ತಮ ಕೋರ್ಸ್‌ಗಳು!