Skip to main content
ವಿಡಿಯೋ
1/3
technology

AI ಭಯವೋ? ಬೆಳವಣಿಗೆಯೋ - ಒಂದು ವಿಭಿನ್ನ ದೃಷ್ಟಿಕೋನ!?

By Shravanthi R
AI ಭಯವೋ? ಬೆಳವಣಿಗೆಯೋ - ಒಂದು ವಿಭಿನ್ನ ದೃಷ್ಟಿಕೋನ!?

ಎಐ Automation ಬಗ್ಗೆ ಕೇಳಿಬಂದಿರುವ ಉದ್ಯೋಗ ಕತ್ತರಿ ಹಾಗೂ ತಂತ್ರಜ್ಞಾನ ಅತಿಕ್ರಮಣದ ಕುರಿತ ಆಲೋಚನೆಗಳಿಗೆ ಪಾಸಿಟಿವ್‌ ಇಂಪ್ಯಾಕ್ಟ್‌ ಟಚ್‌ನಂತಹ ಮಾಹಿತಿ ಇಲ್ಲಿದೆ.

ಆರ್ಟಿಫೀಷಿಯಲ್‌ ಇಂಟಲಿಜೆನ್ಸ್‌ (ಎಐ) ಎಲ್ಲಾ ಕ್ಷೇತ್ರಗಳಲ್ಲೂ ಆವರಿಸಿಕೊಳ್ಳುತ್ತಿದೆ. ಇದು, ಉದ್ಯೋಗ ಕಡಿತಗೊಳಿಸುತ್ತದೆ, ಮಾನವ ತಂತ್ರಗಳನ್ನೂ ಅತಿಕ್ರಮಿಸುತ್ತಿದೆ ಎಂಬ ಆತಂಕ ಸೃಷ್ಟಿಸಿದೆ. ಶೇರು ಮಾರುಕಟ್ಟೆ ಟ್ರೇಡಿಂಗ್‌ ಮೇಲೆ ಪ್ರಭಾವ ಬೀರಿ ಬಹಳಷ್ಟು ಸದ್ದು ಮಾಡುತ್ತಿದೆ ಎನ್ನಲಾಗಿದೆ. ಎಲ್ಲಾ ಉದ್ಯೋಗ ವಲಯಕ್ಕೂ ಭವಿಷ್ಯದಲ್ಲಿ ದುಷ್ಪರಿಣಾಮ ಉಂಟು ಮಾಡುವುದೇ ಎಂಬ ಯಕ್ಷಪ್ರಶ್ನೆಯನ್ನು ಸೃಷ್ಟಿಸಿದೆ. 

ಆದರೆ, ಈ ಎಲ್ಲಾ ಚರ್ಚೆಗಳ ಬದಿಗಿರಿಸಿ, ಒಂದು ವಿಭಿನ್ನ ದೃಷ್ಟಿಕೋನ ಬೆಳೆಸಿಕೊಳ್ಳುವುದು ಪ್ರಮುಖವಾಗಿದೆ. ಅದೇನೆಂದರೆ, ಎಐ ತಂತ್ರಜ್ಞಾನ ಅಳವಡಿಕೆಯಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಉತ್ತರ ಕಂಡುಕೊಳ್ಳವುದರಲ್ಲಿ ಒಂದು ದಾರಿಯಿದೆ. ಯಾವುದೇ ತಂತ್ರಜ್ಞಾನವನ್ನು ಪರಿಚಿಯಿಸಿದ ಹೊಸತರಲ್ಲಿ ವಿರೋಧಾಭಾಸ ಕೇಳಿಬರುತ್ತದೆ. ಉದಾಹರಣೆಗೆ, ಕೆಲದಶಕಗಳ ಹಿಂದೆ, ಐಟಿ ತಂತ್ರಜ್ಞಾನ ಉದ್ಯಮಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅಭಿವೃದ್ದಿ ಶಂಕಿತವಾಗಿತ್ತು. 

ಆದರೆ, ಪ್ರಸಕ್ತವಾಗಿ ಈ ಕ್ಷೇತ್ರದಿಂದ ಭಾರತದಲ್ಲಿ 40% ರಷ್ಟು ರಫ್ತು ಕೊಡುಗೆಗೆ ಮುಂದಾಗಿದೆ. ಅದೇ ರೀತಿ, ಎಐನಿಂದಾಗಿ ಕೆಲಸಗಳು 100 ರಷ್ಟು ಕಳೆದುಕೊಂಡಿದ್ದರೂ, 50 ರಷ್ಟು ಮರುಸೃಷ್ಟಿಗೊಳ್ಳಲಿವೆ. ಇದಕ್ಕೆ ʻರೆಸಿಸ್ಟೆನ್ಸ್‌ʼ ಎನ್ನುತ್ತಾರೆ. ಈ ಬದಲಾವಣೆಯು ನಾವು ಪೂರಕವಾಗಿ ಬದಲಾವಣೆಗೆ ಸ್ಪಂದಿಸುವ ಮೂಲಕ ಪರಿವರ್ತನೆಗೆ ಕಾರಣವಾಗುತ್ತದೆ. ಅಂದು ಐಟಿ, ಇಂದು ಎಐ ಮುಂದೆ ಮತ್ತೊಂದು ಹೊಸ ಆವಿಷ್ಕಾರಕ್ಕೆ ನಮ್ಮ ಮುಂದೆ ಸವಾಲು ಬಂದೊದಗುತ್ತದೆ. Fastrack Limitless FS2 Pro 1.96" AMOLED Smart Watch with BT Calling, AI Voice Assistant, 100+ Sports Modes, 5-Day Battery, Fast Charge, Health Tracking, – Smartwatch for Men & Women (Beige)

ಹೇಗೆ, ಮೊಬೈಲ್‌ ಇಂಡಸ್ಟ್ರಿಯು ಕ್ಯಾಮೆರಾ ಇಂಡಸ್ಟ್ರಿಗೆ ಹೊಡೆತ ತಂದಿತೋ ಅದೇ ರೀತಿ ಸಬ್ಸಿಡಿಯರಿಯಾಗಿ ಗಡಿಯಾರ, ಕ್ಯಾಲ್‌ಕ್ಯುಲೇಟರ್‌ ಹೀಗೆ ಮಗದೊಂದು ಪ್ರಾಡಕ್ಟ್‌ ಕಂಪನಿಗಳಿಗೆ ಹೊಡೆತ ಬಿತ್ತು. ಈಗ ಎಐ ಮಾನವ ಕೆಲಸಕ್ಕೆ ಕತ್ತರಿ ಹಾಕಿರುವುದು ನಿಜ. ಆದರೆ, ಇದರಿಂದ ಹೊರಗುಳಿಯದೇ ಹೊಸ ಕೌಶಲ್ಯಗಳನ್ನು, ಹೊಸ ತಂತ್ರಜ್ಞಾನವನ್ನು ಪಾಸಿಟಿವ್‌ ನೋಷನ್‌ನಿಂದ ಬರಮಾಡಿಕೊಳ್ಳುವುದು ಹಾಗೆ ಯೋಚಿಸುವುದು ಮುಖ್ಯವಾಗಿರುತ್ತದೆ. 

ಶೇರು ಮಾರುಕಟ್ಟೆಗೆ ಎಐ ಪ್ರಭಾವ -

ಎಐ ತಂತ್ರಜ್ಞಾನ ಬಳಕೆಯಿಂದ ಟ್ರೇಡಿಂಗ್‌ ಆಟೋಮೇಟೆಡ್‌ ಆಗಲಿದೆ ಎನ್ನುವ ಮಾತಿದೆ. ಆದರೆ ಅದು ಅಸತ್ಯವೆನ್ನಲಾಗಿದೆ. ಬದಲಾಗಿ ಎಐ ಹೂಡಿಕೆದಾರರಿಗೆ ಸೂಕ್ತ ಡೇಟಾ ಅನಾಲಿಸಿಸ್‌ ಮಾಡಲು ಅನುವು ಮಾಡಿಕೊಡುತ್ತದೆ. ಈ ಪ್ರಕಾರ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಸೂಕ್ತವಾಗಿರುತ್ತದೆ. ಇದನ್ನೂ ಓದಿ: ಇಂದ್ರಜಾಲ್‌ ರೇಂಜರ್‌: ಎಐ ಚಾಲಿತ ಆಂಟಿ- ಡ್ರೋನ್‌ ಗಸ್ತು ವಾಹನ ಬಿಡುಗಡೆ - ಭಾರತದ ಆಂತರಿಕ ಭದ್ರತೆಗೆ ಬಲ!