ಇಂದು ಬೆಳಿಗ್ಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಟ್ಟವಾದ ಮಂಜು ಆವರಿಸಿತ್ತು. ಈ ಕಾರಣ, ವಿಮಾನ ನಿಲ್ದಾಣದ ಸುತ್ತಲೂ ಕವಿದಿದ್ದ ಮಂಜು ಸ್ಪಷ್ಟ ಗೋಚರತೆಯನ್ನು ಕಡಿಮೆ ಮಾಡಿತ್ತು. ಹೀಗಾಗಿ ವಿಮಾನ ಹಾರಾಟಕ್ಕೆ ತಡೆಯುಂಟಾಯಿತು.
ವಾತಾವರಣವು ಕತ್ತಲೆಯಂತೆ ಭಾಸವಾಗಿ ಪೈಲಟ್‌ಗಳು ಮುಂಜಾನೆ ಸಮಯದಲ್ಲಿ ಕಾರ್ಯನಿರ್ವಹಿಸಲು ಪರದಾಡುವಂತಾಯಿತು. ಬೆಳಿಗ್ಗೆ 10 ಗಂಟೆವರೆಗೂ ಹವಾಮಾನವು 20°C ತಾಪಮಾನವನ್ನು ಹೊಂದಿತ್ತು. ಹವಾಮಾನ ಇಲಾಖೆಯು ಸಾಧಾರಣ ಮಳೆಯ ಎಚ್ಚರಿಕೆಯನ್ನು ನೀಡಿತ್ತು. ಗಾಳಿಯು 14 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, 800 ಅಡಿ ಮತ್ತು 1,200 ಅಡಿಗಳ ಎತ್ತರಗಳಲ್ಲಿ ಚದುರಿದ ಮೋಡಗಳಿದ್ದವು ಎನ್ನಲಾಗಿದೆ. Casio G-Shock GA-2100RL-1ADR Analog-Digital Black Dial Men (G1686)
ಅಂತರಾಷ್ಟ್ರೀಯ ಸಂಚಾರಕ್ಕೆ ಪರಿಣಾಮ ಬೀರಿದ ವಾತಾವರಣವು ಇಂದು ಮಧ್ಯಾಹ್ನದವರೆಗೆ ಸುಧಾರಣೆ ಕಂಡುಬರುವ ನಿರೀಕ್ಷೆಯಿತ್ತು. ದಿನದ ತಾಪಮಾನ 18°C ಮತ್ತು 28°C ನಡುವೆ ಇರುವುದು ಎನ್ನಲಾಗಿದೆ. ಇದನ್ನೂ ಓದಿ: AI ಭಯವೋ? ಬೆಳವಣಿಗೆಯೋ - ಒಂದು ವಿಭಿನ್ನ ದೃಷ್ಟಿಕೋನ!?