ಪ್ಯಾನ್ ಇಂಡಿಯಾದಲ್ಲಿ ಹೆಸರು ಮಾಡಿರುವ ಪೃಥ್ವಿರಾಜ್ ಸುಕುಮಾರನ್ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಉತ್ತಮ ನಟನೆಯ ಮೂಲಕ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ರಾಜಮೌಳಿ ಸೇರಿದಂತೆ ಹಲವು ದೊಡ್ಡ ನಿರ್ದೇಶಕರಿಂದ ಮೆಚ್ಚುಗೆ ಪಡೆದಿರುವ ಅವರು, ಈಗ ‘ವಾರಣಾಸಿ’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟೊಂದು ಹೆಸರು ಗಳಿಸಿರುವ ನಟನಾದರೂ, ಮಲಯಾಳಂ ಚಿತ್ರರಂಗದಲ್ಲಿಯೇ ಅವರ ವಿರುದ್ಧ ಕುತಂತ್ರ ನಡೆಯುತ್ತಿದೆ ಎಂಬ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದೆ.
ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಪೃಥ್ವಿರಾಜ್ ನಟನೆಯ ‘ವಿಲಾಯತ್ ಬುದ್ಧ’ ಸಿನಿಮಾವನ್ನು ಚಿತ್ರಮಂದಿರಗಳಿಗೆ ಬರೋದಕ್ಕೂ ಮುಂಚೆ ಸೈಬರ್ ದಾಳಿ ಮಾಡಿ ಪೈರಸಿ ಮಾಡಲಾಗಿದೆ. ಇದರಿಂದ ಸಿನಿಮಾಕ್ಕೆ ದೊಡ್ಡ ನಷ್ಟವಾಯಿತು. ಈ ಘಟನೆ ಬಗ್ಗೆ ಮಾತನಾಡಿದ ಪೃಥ್ವಿರಾಜ್ ಅವರ ತಾಯಿ ಮತ್ತು ಹಿರಿಯ ನಟಿ ಮಲ್ಲಿಕಾ ಸುಕುಮಾರನ್, “ಇದು ನನ್ನ ಮಗನ ವೃತ್ತಿಯನ್ನು ಅಂತ್ಯಗೊಳಿಸಲು ಕೆಲವರು ಮಾಡುತ್ತಿರುವ ವ್ಯವಸ್ಥಿತ ಕುತಂತ್ರ” ಎಂದು ಆರೋಪಿಸಿದರು.Puma Unisex-Adult Rickie Classic Sneaker
ಅವರ ಮಾತಿನ ಪ್ರಕಾರ, ಪೃಥ್ವಿರಾಜ್ ವಿರುದ್ಧ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲೇ ಒತ್ತಡ, ಟ್ರೋಲ್, ಕೇಸು ಮತ್ತು ದೈಹಿಕ ದಾಳಿವರೆಗೆ ಹಲವು ಅಡೆತಡೆಗಳು ಸೃಷ್ಟಿಸಲಾಗಿದೆ. ‘ಲುಸಿಫರ್ 2’ ಸಿನಿಮಾದ ವೇಳೆ ಟ್ರೋಲ್‌ಗಳು ಹಾಗೂ ದೂರುಗಳು ಹೆಚ್ಚಿದವು. ‘ಆಡುಜೀವಿತಂ’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬರದ ಸಂದರ್ಭದಲ್ಲೂ ಅವರ ಮೇಲೆ ಅನಾವಶ್ಯಕ ಟೀಕೆಗಳು ಬಂದವು. ನಂತರ ಕಸ್ಟಮ್ಸ್ ಇಲಾಖೆಯವರು ಕಾರಿಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಘಟನೆ ಕೂಡ ದೊಡ್ಡ ಸಂಚಲನ ಮೂಡಿಸಿತು.ಹಿಟ್ ಸಿನಿಮಾ ‘ಡ್ಯೂಡ್’ ಸಿನಿಮಾ ಮೇಲೆ ದಾಖಲಾಯ್ತು ದೂರು..ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ತಂಡ… ಇಲ್ಲಿದೆ ಸಂಪೂರ್ಣ ಮಾಹಿತಿ
ಇತ್ತೀಚಿನ ಸೈಬರ್ ದಾಳಿ ಪೃಥ್ವಿರಾಜ್ ವಿರುದ್ಧ ನಡೆಯುತ್ತಿರುವ ಇದೇ ಕ್ರಮಬದ್ಧ ಕುತಂತರದ ಭಾಗವಾಗಿದೆ ಎಂದು ಮಲ್ಲಿಕಾ ಸುಕುಮಾರನ್ ಆರೋಪಿಸಿದ್ದಾರೆ. “ಇಷ್ಟು ದೊಡ್ಡ ಘಟನೆ ನಡೆದರೂ ಯಾವುದೇ ಸಂಘಟನೆ ಅಥವಾ ಹಿರಿಯರು ನನ್ನ ಮಗನ ಬೆಂಬಲಕ್ಕೆ ಬಂದಿಲ್ಲ” ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ.
ನಟನೆ, ಪ್ರಾಮಾಣಿಕತೆ ಮತ್ತು ಶ್ರಮದ ಮೂಲಕ ಹಲವು ಸಿನಿಮಾಗಳಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್ ಈಗ ಈ ವಿವಾದಗಳ ನಡುವೆ ನಿಂತಿದ್ದಾರೆ. ಈ ಆರೋಪಗಳ ಹಿಂದೆ ಯಾರಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದ್ದು, ಅಭಿಮಾನಿಗಳು ಮತ್ತು ಸಿನಿಪ್ರಿಯರು ಈ ವಿಷಯದ ಬಗ್ಗೆ ಸ್ಪಷ್ಟನೆ ನಿರೀಕ್ಷಿಸುತ್ತಿದ್ದಾರೆ.