ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ನಟ ಧ್ರುವಂತ್ ತಮ್ಮ ನೇರ ನಡೆ-ನುಡಿಯನ್ನು ತೋರಿಸಿ ಗಮನ ಸೆಳೆದಿದ್ದಾರೆ. ಇದರ ಪರಿಣಾಮವಾಗಿ, ಅವರು ಹಲವು ಸ್ಪರ್ಧಿಗಳೊಂದಿಗೆ ಜಗಳ ನಡೆಸಿದರು. ಮಾತನಾಡುವಾಗ ಕೆಲವೊಮ್ಮೆ ಅತಿರೇಕದ ಪದಗಳನ್ನು ಬಳಸಿದ ಧ್ರುವಂತ್‌ಗೆ ಸುರಜ್ ಕೋಪಗೊಂಡು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತು.Puma Unisex-Adult Rickie Classic Sneaker
ಈ ಜಗಳದ ವೇಳೆ ಧನುಷ್ ಮಧ್ಯಸ್ಥಿಯಾಗಿ ತಾರ್ಕಿಕವಾಗಿ ಮಾತುಕತೆ ನಡೆಸಿದರು. ಕೆಲ ಕ್ಷಣಗಳಲ್ಲಿ, ಸ್ಪರ್ಧಿಗಳು ಕೈ ಕೈ ಮಿಲಾಯಿಸುವ ಹಂತಕ್ಕೂ ಬಂದಿದೆ. ಜಗಳದ ವೇಳೆ ಧ್ರುವಂತ್ ಸಂಜನಾ ಮೇಲೆ ಸಹ ಕೂಗಾಡಿದ ಘಟನೆ ಗಮನ ಸೆಳೆದಿದೆ.ಇದನ್ನು ಓದಿ:ಪೃಥ್ವಿರಾಜ್ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿ – ಮಲ್ಲಿಕಾ ಸುಕುಮಾರನ್ ಶಾಕಿಂಗ್ ಹೇಳಿಕೆ
ಇಷ್ಟೊಂದು ವಾರಗಳ ಕಾಲ ಎಲ್ಲರೊಂದಿಗೆ ಜಗಳ ನಡೆಸುತ್ತಿದ್ದ ಅಶ್ವಿನಿ ಗೌಡ ಈ ಬಾರಿ ಶಾಂತವಾಗಿದ್ದರು. ಆದರೆ ಅವರ ಬದಲಿಗೆ ಧ್ರುವಂತ್ ಜಗಳದಲ್ಲಿ ಜೋರಾಗಿದ್ದಾರೆ. ನವೆಂಬರ್ 28ರ ಸಂಚಿಕೆಯ ಪ್ರೋಮೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.