ನಟಿ ಭಾವನಾ ರಾಮಣ್ಣ ಹಾಗೂ ಭಾವನಾ ಬೆಳಗೆರೆ ಒಳ್ಳೆಯ ಗೆಳತಿಯರು. ಇತ್ತೀಚೆಗೆ ಭಾವನಾ ರಾಮಣ್ಣ ಅವರು ತಮ್ಮ ಎರಡೂವರೆ ತಿಂಗಳ ಮಗಳನ್ನು ಕರೆದುಕೊಂಡು ಗೆಳತಿ ಭಾವನಾ ಬೆಳಗೆರೆ ಅವರ ಮನೆಗೆ ಭೇಟಿ ನೀಡಿ ಹೃತ್ಪೂರ್ವಕವಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮಗಳಿಗೆ ‘ರುಕ್ಮಿಣಿ’ ಎಂದು ಹೆಸರು ಇಟ್ಟಿರುವ ವಿಶೇಷ ಕಾರಣವನ್ನು ಅವರು ಹಂಚಿಕೊಂಡಿದ್ದಾರೆ.
ಭಾವನಾ ರಾಮಣ್ಣ ಅವರು ಐವಿಎಫ್ ಮೂಲಕ ತಾಯಿ ಆದ ಮೇಲೆ ಮಗಳಿಗೆ ಜನ್ಮ ನೀಡಿದ್ದರು. ಅವರಿಗೆ ಅವಳಿ ಮಕ್ಕಳು ಜನಿಸಬೇಕಿದ್ದರೂ, ಒಂದು ಮಗು ಹುಟ್ಟುವ ಮುನ್ನವೇ ಕಳೆದುಕೊಂಡ ನೋವು ಅವರ ಮನದಲ್ಲಿದೆ. ಈಗ ಜನಿಸಿದ ಮಗಳು ಅವರಿಗೇ ತುಂಬಾ ಅಮೂಲ್ಯ. ಮಗಳು ಐವಿಎಫ್ ಮೂಲಕ ಜನಿಸಿದ್ದನ್ನು ದೊಡ್ಡ ಮನಸ್ಸಿನಿಂದ ಅವಳಿಗೆ ತಿಳಿಸುವೆ, ಧೈರ್ಯವಾಗಿ ಬೆಳೆಸುವೆ ಎಂದು ಭಾವನಾ ಹೇಳಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta
ಮಗಳ ಹೆಸರಿನ ಬಗ್ಗೆ ಮಾತನಾಡಿದಾಗ, “ರುಕ್ಮಿಣಿ ಅನ್ನೋದು ನನ್ನ ಅಜ್ಜಿ ಹೆಸರು. ಅವರು ತುಂಬಾ ಬೋಲ್ಡ್, ಧೈರ್ಯಶಾಲಿ, ಎಲ್ಲರಿಗೂ ಮಾದರಿ. ನನ್ನನ್ನೂ ನಾನು ಅದೇ ರೀತಿ ನಡೆದುಕೊಳ್ಳುತ್ತೇನೆ ಎಂದು ಗೇಲಿ ಮಾಡುತ್ತಿದ್ದರು. ಹಾಗಾಗಿ ನನ್ನ ಮಗಳೂ ಅಜ್ಜಿ ಅವರಂತೆ ಬುದ್ಧಿವಂತೆ, ಧೈರ್ಯವಂತೆ ಬೆಳೆಯಲಿ ಎಂಬ ಆಶಯದಿಂದ ಆ ಹೆಸರನ್ನು ಇಟ್ಟಿದ್ದೇನೆ” ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.ಇದನ್ನು ಓದಿ:ಬಿಗ್ ಬಾಸ್ ಕನ್ನಡ 12: ಧ್ರುವಂತ್–ಸುರಜ್ ಜಗಳ ಪ್ರೋಮೋ ವೈರಲ್, ಧನುಷ್ ಮಧ್ಯಸ್ಥ.! ಮಾಹಿತಿ ಇಲ್ಲಿದೆ
ಮನೆಯಲ್ಲೇ ಸಹಾಯಕರಿದ್ದರೂ ಕೂಡ, ಮಗಳಿಗೆ ಮಸಾಜ್ ಮಾಡುವುದು, ಸ್ನಾನ ಮಾಡಿಸುವುದು, ದಿನನಿತ್ಯದ ಆರೈಕೆ ಅಜ್ ಭಾವನಾ ತಾವೇ ನೋಡಿಕೊಳ್ಳುತ್ತಾರೆ ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ. ತಾಯ್ತನದ ಸಂತೋಷದಲ್ಲಿ ಮಗಳು ರುಕ್ಮಿಣಿಯನ್ನು ಪ್ರೀತಿಯಿಂದ ಬೆಳೆಸುತ್ತಿರುವ ಭಾವನಾ ರಾಮಣ್ಣ ಅವರ ಈ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿಯಾಗಿ ವೈರಲ್ ಆಗುತ್ತಿದೆ.