ಇವತ್ತಿನ ಆಧುನಿಕ ಯುಗದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದನ್ನೇ ಬಂಡವಾಳವಾಗಿ ಪರಿಗಣಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಣವನ್ನು ಉದ್ಯಮವಾಗಿ ಮಾಡಿಕೊಂಡಿದೆ. ಖಾಸಗಿ ಸಂಸ್ಥೆಗಳಲ್ಲಿ ಓದುವುದೇ ಪ್ರತಿಷ್ಠೆಯನ್ನು ಹೆಚ್ಚಿಸಿದೆ ಎನ್ನುವ ಮಹತ್ವಾಕಾಂಕ್ಷೆಯನ್ನು ಮಕ್ಕಳಲ್ಲೂ ಬಿತ್ತುತ್ತಿರುವುದು ಅಪಾಯಕಾರಿ ಮುನ್ಸೂಚನೆಯಾಗಿದೆ.
ವಿದ್ಯಾರ್ಥಿಗಳು ಮುಂದಿನ ಓದು, ಕಲಿಕೆಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರುವ ಕನಸು ಹೊತ್ತಿರುತ್ತಾರೆ. ಅದಕ್ಕಾಗಿ ಸೀಟು ಕಾಯ್ದಿರಿಸಲು ಹೆಚ್ಚು ಹಣ ವ್ಯಯಿಸುವುದುಂಟು. ವಿಷಯಗಳ ಕಾಂಬಿನೇಷನ್ ಜೊತೆಗೆ ಇಂಥ ಸಂಸ್ಥೆಗೆ ಸೇರಿದರೆ ಸೂಕ್ತವೆಂದು ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಪೂರಕವಾಗುವಷ್ಟು ಹಣವನ್ನು ಪೋಷಕರು ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಾರೆ. Carlington Premium Watch for Men with Black Colored Chain Watch for Men Stainless Steel and Scratch Resistance
ಆರ್ಥಿಕ ಬಲ ಹೊಂದಿದವರು ಸೀಟು ಪಡೆಯಲು ಒದ್ದಾಡುವುದಿಲ್ಲ ಬದಲಾಗಿ, ಆರ್ಥಿಕ ಹೊರೆಯಿರುವವರು, ದೂರಗಾಮಿ ಶಿಕ್ಷಣ ಪಡೆಯಲು ಇಚ್ಛಿಸುವವರು ಇದರಿಂದ ನರಳುತ್ತಾರೆ. ಶಿಕ್ಷಣ ಸಂಸ್ಥೆಗಳ ಬಿಜಿನೆಸ್ ಮೈಂಡ್‌ಸೆಟ್‌ನಿಂದ ಇಂತ ಅನರ್ಥಗಳು ಸಂಭವಿಸುವುದು ಹೆಚ್ಚಾಗಿದೆ. ಲಾಭಾಂಶ ದೃಷ್ಟಿಕೋನಗಳನ್ನು; ಶಿಕ್ಷಣ ವ್ಯವಸ್ಥೆಯಲ್ಲಿನ ವ್ಯವಹಾರ ಪ್ರವೇಶಾತಿಗಳನ್ನು ದಿಕ್ಕರಿಸುವುದು ಅಗತ್ಯವಾಗಿದೆ. ಇದನ್ನೂ ಓದಿ: ದೃಷ್ಟಿಕೋನ ಬದಲಾದರೆ ಪರಿವರ್ತನೆ ಸಾಧ್ಯ - ನಿವೃತ್ತ ಪ್ರಾಧ್ಯಾಪಕ ಆರ್.ಕೆ ಹುಡಗಿ