Skip to main content
ವಿಡಿಯೋ
1/3
cinema

ಬಿಗ್ ಬಾಸ್ ವಾರದ ಕತೆ: ಗಿಲ್ಲಿ ವಿವಾದ, ಅತಿಥಿಗಳ ವರ್ತನೆ – ಸುದೀಪ್ ಏನು ಹೇಳುತ್ತಾರೆ?

By Ram Chethan
ಬಿಗ್ ಬಾಸ್ ವಾರದ ಕತೆ: ಗಿಲ್ಲಿ ವಿವಾದ, ಅತಿಥಿಗಳ ವರ್ತನೆ – ಸುದೀಪ್ ಏನು ಹೇಳುತ್ತಾರೆ?

ಬಿಗ್ ಬಾಸ್ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಈ ವಾರ ಮನೆಯಲ್ಲಿ ನಡೆದ ಗಿಲ್ಲಿಯ ಮಿತಿಮೀರಿದ ಮಾತು, ಅತಿಥಿಗಳ ನಡೆ, ಅಭಿಷೇಕ್ ಪಾಯಿಂಟ್ ಹಂಚಿಕೆ ದೋಷ ಮತ್ತು ಧ್ರುವಂತ್ ಬಳಕೆ ಮಾಡಿದ ‘ಟಿ ಕೊಬ್ಬು’ ಪದ ಸೇರಿದಂತೆ ಹಲವು ವಿಚಾರಗಳನ್ನು ಕಠಿಣವಾಗಿ ಪರಿಶೀಲಿಸಲಿದ್ದಾರೆ. ಈ ಎಪಿಸೋಡ್‌ಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

ಬಿಗ್ ಬಾಸ್ ವಾರದ ಕತೆಯ ವೇದಿಕೆಯಲ್ಲಿ ಕಿಚ್ಚ ಸುದೀಪ್ ಈ ವಾರ ಮನೆಯಲ್ಲಿ ನಡೆದ ಪ್ರಮುಖ ವಿವಾದಗಳನ್ನು ಚರ್ಚಿಸಲು ಸಜ್ಜಾಗಿದ್ದಾರೆ. ಅತಿಥಿಗಳ ವರ್ತನೆ, ಗಿಲ್ಲಿಯ ಮಿತಿಮೀರಿದ ಮಾತುಗಳು, ಅಭಿಷೇಕ್ ಮ್ಯಾನೇಜರ್ ಆಗಿ ಮಾಡಿದ ಹಂಚಿಕೆ ದೋಷಗಳು ಮತ್ತು ಧ್ರುವಂತ್ ಬಳಸಿದ ‘ಟಿ ಕೊಬ್ಬು’ ಪದದ ಚರ್ಚೆಯ ಕೇಂದ್ರಬಿಂದುವಾಗಿವೆ.

ವಾರಪೂರ್ತಿ ನಡೆದ ಘಟನೆಗಳ ನಂತರ, ಸುದೀಪ್ ಅವರು ಗಿಲ್ಲಿಯ ನಡೆ ಕುರಿತು ಸ್ಪಷ್ಟನೆ ಕೇಳುವ ಸಾಧ್ಯತೆ ಹೆಚ್ಚು. ಮಂಜು ಬಳಿ “ಎಷ್ಟನೇ ಮದುವೆ?” ಎಂದು ಪ್ರಶ್ನಿಸಿರುವುದು, “ಬಿಟ್ಟಿ ತಿನ್ನೋಕೆ ಬಂದಿದ್ದೀರಾ?” ಎಂಬ ಮಾತುಗಳು ಹಾಸ್ಯವನ್ನು ಮೀರಿದವು ಎಂದು ವೀಕ್ಷಕರು ಹೇಳಿದ್ದಾರೆ. ಅತಿಥಿಗಳೂ ಕೂಡ ಮನೆಯಲ್ಲಿ ಮಿತಿಮೀರಿದ ವರ್ತನೆಯನ್ನು ತೋರಿದ್ದರಿಂದ, ಅವರ ಮೇಲೂ ಸುದೀಪ್ ಪ್ರಶ್ನೆ ಮಾಡುವ ಸೂಚನೆ ಇದೆ.Safari Genius Alley Set of 3 (Cabin + Medium + Large) Trolley Bags, Hard Case Polypropylene, 4 Wheels, 360 Degree Wheeling Luggage, Suitcase for Travel, Black

ಮ್ಯಾನೇಜರ್ ಆಗಿದ್ದ ಅಭಿಷೇಕ್ ಈ ವಾರ ಪಾಯಿಂಟ್ ಹಂಚಿಕೆ ಸರಿಯಾಗಿ ನಡೆಸಿಲ್ಲ ಎಂಬ ಅಸಮಾಧಾನ ಮನೆ ಸದಸ್ಯರಲ್ಲಿ ಕೇಳಿಬಂದಿದೆ. ಇದನ್ನೂ ಸುದೀಪ್ ಗಂಭೀರವಾಗಿ ಚರ್ಚಿಸುವ ಸಾಧ್ಯತೆ ಇದೆ. ಜೊತೆಗೆ, ಧ್ರುವಂತ್ ಬಳಸಿದ ‘ಟಿ ಕೊಬ್ಬು’ ಪದ ರಿಯಾಲಿಟಿ ಶೋದಲ್ಲಿ ಸೂಕ್ತವೆಂಬ ಪ್ರಶ್ನೆಯೂ ದೊಡ್ಡ ಚರ್ಚೆಗೆ ಕಾರಣವಾಗಿದೆ.ಇದನ್ನು ಓದಿ:ಭಾವನಾ ರಾಮಣ್ಣ ಮಗಳ ಹೆಸರು ಏನು ಗೊತ್ತಾ... ಅಜ್ಜಿ ಹೆಸರು ಇಟ್ಟಿದ್ದೇಕೆ? ಇಲ್ಲಿದೆ ಮಾಹಿತಿ

ಈ ಎಲ್ಲ ವಿಚಾರಗಳ ಮೇಲೆ ಸುದೀಪ್ ತಮ್ಮ ವಿಶೇಷ ಶೈಲಿಯಲ್ಲಿ ತೀರ್ಪು ನೀಡಲಿರುವ ಕಾರಣ, ಇಂದಿನ ವಾರದ ಕತೆ ಎಪಿಸೋಡ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.