Skip to main content
ವಿಡಿಯೋ
1/3
webstory

ಶಿಕ್ಷಣದಲ್ಲಿ AI: ಅವಕಾಶಗಳು ಮತ್ತು ಸವಾಲುಗಳ ಅವ್ಯಕ್ತ ಅರಿವಿನ ಸಾಧಕ ಬಾಧಕಗಳೇನು!?

By Shravanthi R
ಶಿಕ್ಷಣದಲ್ಲಿ AI: ಅವಕಾಶಗಳು ಮತ್ತು ಸವಾಲುಗಳ ಅವ್ಯಕ್ತ ಅರಿವಿನ ಸಾಧಕ ಬಾಧಕಗಳೇನು!?

ಈಗಿನ ಶಿಕ್ಷಣ ಕ್ಷೇತ್ರದಲ್ಲಿ ಕೃತಕಬುದ್ದಿಮತ್ತೆಯು ಪ್ರಯೋಗಾತ್ಮಕ ಸಾಧನವೇ ಅಲ್ಲವೇ? ಅಥವಾ ಡಿಜಿಟಲೀಕರಣಗೊಳ್ಳತ್ತಿರುವ ಶೈಕ್ಷಣಿಕ ವ್ಯವಸ್ಥೆಯ ಅಡಿಗಲ್ಲೆನಿಸಿದ ಇದುವೆ ಮಾನವನಿಗೂ ಮೀರಿದ ವಿಕಾಸವೇ ಎಂಬಿತ್ಯಾದಿ ವಿಷಯಗಳ ಅವಲೋಕಿಸುವುದು ಅವಶ್ಯಕ.

ಕೃತಕಬುದ್ದಿಮತ್ತೆಯು ಶಿಕ್ಷಣ ಕ್ಷೇತ್ರದಲ್ಲಿ ಪ್ರಚಲಿತಗೊಳ್ಳುತ್ತಿದೆ. ಜನರೇಟಿವ್‌ ಎಐ ಮೂಲಕ ತನ್ನ ಸ್ಥಾನಪಲ್ಲಟವನ್ನು ಮುಂದುವರೆಸಿದ್ದು, ಹೊಸ ಶಿಕ್ಷಣ ಮಾದರಿಗಳನ್ನು ಈಗಾಗಲೇ ಅಳವಡಿಸಿಕೊಳ್ಳುತ್ತಲಿದೆ. ಇದೊಂದು ಅತ್ಯಗತ್ಯ ಮೂಲಸೌಕರ್ಯವಾಗಿ ಮೂದಲಿಸುತ್ತಿರುವ ಸಂದರ್ಭದಲ್ಲಿ ಇದರ ಅನುಕೂಲಗಳು ಹಾಗೂ ಪ್ರತಿಕೂಲಗಳನ್ನು ವಿಶ್ಲೇಷಿಸಿದ ಅಂಕಣವಿದಾಗಿದೆ. 

ಇತ್ತೀಚೆಗೆ ಉಂಟಾಗಿರುವ ಜಾಗತಿಕ ಬೆಳವಣಿಗೆಗಳು, ಆಗುತ್ತಿರುವ ವರದಿಗಳು ಹಾಗೂ ಸಮೀಕ್ಷೆಗಳನ್ನು ಸಂಯೋಜಿಸ ಹೊರಟಾಗ, ಎಐ ಶಿಕ್ಷಣವನ್ನು ಹೇಗೆ ಕ್ರಾಂತಿಕಾರಿಯಾಗಿಸಿದೆ ಮತ್ತು ಸವಾಲುಗಳನ್ನೊಡ್ಡುತ್ತಿದೆ ಎಂದು ಮನದಟ್ಟಾಗಿದೆ. Carlington Analog Men's Watch with Stainless Steel Chain Strap, Multi-Color Dial Options, Premium Gift Watch for Men – Stylish Casual & Formal Wrist Watch - CT 8811

ಈ ನಿಟ್ಟಿನಲ್ಲಿ ಎಐ ಒದಗಿಸಿದ ಅವಕಾಶಗಳೆಂದರೆ:

  • ವೈಯಕ್ತಿಕ ಶಿಕ್ಷಣಕ್ಕೆ (Personal Learning) ಗೆ ಸಹಾಯ ಮಾಡುತ್ತಿರುವ ಎಐ ಶಾಲಾ-ಕಾಲೇಜುಗಳಿಂದ ವಿಮುಖರಾಗುವ ಪ್ರಮಾಣವನ್ನು ಕಡಿಮೆಗೊಳಿಸಿದೆ ಎನ್ನಲಾಗಿದೆ. ಸಮರ್ಥ ಶಿಕ್ಷಣಕ್ಕೆ ಸಾಥಿಯಾಗಿ ಎಐ ಕೆಲಸ ಮಾಡುತ್ತಿದೆ ಎಂದು ವರದಿ ತಿಳಿಸಿದೆ. 

  • ಸ್ಮಾರ್ಟ್‌ ಟುಟೂರಿಂಗ್‌ ಮೂಲಕ ಎಐ ವಿದ್ಯಾರ್ಥಿಗಳ ಅಂಕ ಗಳಿಕೆ ಹಾಗೂ ಕಲಿಕಾ ಸಮಗ್ರತೆಗೆ ಸಹಕರಿಸಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ. 

  • ಸಮಯ ಉಳಿಕೆ - ಶಿಕ್ಷಕರ ಪಾಠ ಪ್ರವಚನಕ್ಕೆ ಹಾಗೂ ಮಕ್ಕಳ ಪಾಠ ನಿಯೋಜನೆಗೆ ಎಐ ಬಳಕೆಯಿಂದ ಸಮಯ ಉಳಿತಾಯವಾಗುತ್ತಿರುವುದಾಗಿ ವರದಿಯಿಂದ ತಿಳಿದುಬಂದಿದೆ ಎಂದು ಹೇಳಲಾಗಿದೆ.

  • ವಿವಿಧ ಎಐ ಸಾಧನಗಳಿಂದ (ಚಾಟ್‌ಜಿಪಿಟಿ, ಗೂಗಲ್‌ ಜೆಮಿನಿ) ಶಿಕ್ಷಣ ತರಬೇತಿಗೆ ಸಹಾಯಕವಾಗಿದೆ ಎನ್ನಲಾಗಿದೆ. ಇಂಟರ್‌ವ್ಯೂ ಮಾಕ್‌ ಟೆಸ್ಟ್‌ಗಳಿಗೆ ಎಐ ಚಾಟ್‌ಬಾಟ್‌ಗಳು ಉತ್ತೇಜನಕಾರಿಯಾಗಿದೆ ಎನ್ನಲಾಗಿದೆ.

  • ಜಗತ್ತಿನಾದ್ಯಂತ ಸರಾಸರಿ ಎಐ ಬಳಕೆದಾರರು ತಮ್ಮ ಸ್ಮಾರ್ಟ್‌ ಲರ್ನಿಂಗ್‌ ಟೂಲ್‌ ಆಗಿದ್ದು, ಸಮಾನ ಗುಣಮಟ್ಟದ ಶಿಕ್ಷಣ ಮಾರ್ಗಸೂಚಿತ ಎಂದು ಇದನ್ನು ಬಣ್ಣಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ‘ವಾಟರ್ ಸ್ಟಾರ್ಟಅಪ್ ಕ್ಯಾಪಿಟಲ್’ ಆಗಲಿದೆ: ಜಲಮಂಡಳಿ ಮಹತ್ವದ ಯೋಜನೆ ..!

ಪ್ರಮುಖ ಸವಾಲುಗಳು -

  • ಗೌಪ್ಯತೆ ಹಾಗೂ ಡಿಜಿಟಲ್‌ ಅಕ್ಸೆಸ್‌ ದೃಷ್ಟಿಯಿಂದ ಇಂಟರ್‌ನೆಟ್‌ ಬಳಕೆ ಎಷ್ಟರ ಮಟ್ಟಿಗಿನ ಸುರಕ್ಷತೆ ಹೊಂದಿದೆ ಎಂಬುದು ಸವಾಲಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

  • ಎಐ ಸ್ವಯಂಚಾಲಿತ ಕೆಲಸಗಳನ್ನು ಮಾಡುವುದರಿಂದ ಶಿಕ್ಷಕರ ಉದ್ಯೋಗ ಪಾತ್ರವನ್ನು ಬದಲಿಸುತ್ತದೆಯೇ ಎನ್ನುವ ಆತಂಕವನ್ನು ಇರಿಸಿದೆ ಎನ್ನಲಾಗಿದೆ.

  • ಪ್ಲೇಗರಿಸಂ ಮತ್ತು ಡ್ಯೂಪ್ಲಿಕಸಿ ಈ ಕಾರಣ, ವಿದ್ಯಾರ್ಥಿಗಳ ನೈತಿಕ ಹಾಗೂ ಮೌಲ್ಯಾಧಾರಿತ ಪರೀಕ್ಷಾ ಕಾರ್ಯಗಳಲ್ಲಿ ವಂಚಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

  • ಮಾನವ ಬುದ್ದಿಮತ್ತೆಗೆ ಬಹುವಾಗಿ ಸವಾಲು ಎನಿಸಿರುವ ಎಐ, ಡಿಜಿಟಲ್‌ ಕಲಿಕೆ ಹೆಸರಿನಲ್ಲಿ ಸಾಂಪ್ರದಾಯಿಕ ಪದ್ದತಿಗಳನ್ನು ಮರುವ್ಯಾಖ್ಯಾನಿಸುವ ಅಸಂವೇದಾನಾತ್ಮಕ ಬಾಧ್ಯತೆಯನ್ನು ಹೆಚ್ಚುಗೊಳಿಸುತ್ತಿರುವುದು ಸ್ಪಷ್ಟವೆನಿಸಿದೆ.

  • ಎಐ ಎಲ್ಲವನ್ನೂ ಮಾಡುತ್ತದೆ ಎಂದು ನಂಬುವುದು ತಪ್ಪುಕಲ್ಪನೆಯಾಗಿದ್ದು., ಬಹುಭಾಗದ ವಿದ್ಯಾರ್ಥಿಗಳಿಗೆ ಯಂತ್ರಗಳಿಂದ ವಿದ್ಯಾಚೇತನವನ್ನು ಕರುಣಿಸುವುದು ತಂತ್ರಜ್ಞಾನ ಪ್ರೇರಕ ಯಶಸ್ಸೇ ಆದರೂ, ಮಾರ್ಗದರ್ಶನದಷ್ಟು ಪರಿಣಾಮಕಾರಿಯಲ್ಲವೆನ್ನಲಾಗಿದೆ.

ಒಟ್ಟಾರೆ, ಎಐ ಹಾಗೂ ಮಾನವನ ಬುದ್ದಿ ತೀಕ್ಷ್ಣತೆಗೆ ಸರಿಸಮಾನವಾಗಿ ಸಾಗುವುದೇ ನಿಜ ಶಿಕ್ಷಣದ ಜೀವಂತಿಕೆಗೆ ಸಹಕಾರಿಯೆಂದು ಹೇಳಲಾಗುತ್ತದೆ. ಇದರಿಂದಲೇ, ಭವಿಷ್ಯದ ಶಿಕ್ಷಣ ಮತ್ತು ತಂತ್ರಜ್ಞಾನ ಪ್ರಗತಿಗೆ ಉತ್ತರ ಕಂಡುಕೊಳ್ಳಲಿರುವ ಮಾರ್ಗವಾಗಿದೆ. ಇದನ್ನೂ ಓದಿ: ಉನ್ನತ ಶಿಕ್ಷಣ ನಿಯಂತ್ರಣ ಮಸೂದೆ 2025 - ಸಂಸತ್ತಿನಲ್ಲಿ ಉಲ್ಲೇಖಿಸಿ - ದಿಗ್ವಿಜಯ್‌ ಸಿಂಗ್‌ ಮನವಿ