ದೇಶದಲ್ಲೇ ಪ್ರಪ್ರಥಮ ಬಾರಿಗೆ ಸರ್ಕಾರಿ ಜಲಮಂಡಳಿಯಿಂದ ನವೋದ್ಯಮಗಳಿಗೆ ಆಹ್ವಾನ, ಮೊದಲ ಹೆಜ್ಜೆಯಾಗಿ ಕಾಡುಬೀಸನಹಳ್ಳಿ ಘಟಕದಲ್ಲಿ 'ಬೋಸಾನ್ ವೈಟ್ವಾಟರ್’ ಸ್ಟಾರ್ಟ್‌ಅಪ್ ಕಾರ್ಯನಿರ್ವಹಣೆಗೆ ಚಾಲನೆ ಬೆಂಗಳೂರು, ನವೆಂಬರ್ 28, 2025 ಬೆಂಗಳೂರು ನಗರವನ್ನು ದೇಶದ 'ವಾಟರ್ ಸ್ಟಾರ್ಟ್‌ಅಪ್ ಕ್ಯಾಪಿಟಲ್' ಮಾಡುವ ನಿಟ್ಟಿನಲ್ಲಿ, ವಾಟರ್ ಸ್ಟಾರ್ಟ್‌ಅಪ್‌ಗಳ ತಮ್ಮ ತಂತ್ರಜ್ಞಾನದ 'ಪ್ರೂಫ್ ಆಫ್ ಕಾನ್ಸೆಪ್ಟ್' (PoC) ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಿದೆ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ನಗರದ ಕಾಡುಬೀಸನಹಳ್ಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ 'ಬೋಸಾನ್ ವೈಟ್ವಾಟರ್’ ಸ್ಟಾರ್ಟ್‌ಅಪ್ ಅಳವಡಿಸಿದ ಯಂತ್ರೋಪಕರಣಗಳಿಗೆ ಶುಕ್ರವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ವಾಟರ್ ಸ್ಟಾರ್ಟ್‌ಅಪ್‌ಗಳಿಗೆ ಜಲಮಂಡಳಿಯಿಂದ ಮುಕ್ತ ಆಹ್ವಾನ:
ಬೆಂಗಳೂರನ್ನು ವಾಟರ್ ಸ್ಟಾರ್ಟ್‌ಅಪ್ ಕ್ಯಾಪಿಟಲ್ ಮಾಡುವ ದಿಕ್ಕಿನಲ್ಲಿ ನಾವು ಯೋಚನೆ ಮಾಡುತ್ತಿದ್ದೇವೆ. ಈಗಾಗಲೇ ಮೊದಲನೇ ಸ್ಟಾರ್ಟಪ್‌ಗೆ (ಬೋಸಾನ್ ವೈಟ್‌ವಾಟರ್) ಅವಕಾಶ ನೀಡಲಾಗಿದೆ. Navlik Women’s Casual Kurta with Pant & Dupatta – Stylish Ethnic Wear
ಮುಂದಿನ ದಿನಗಳಲ್ಲಿ ನೀರಿನ ನಿರ್ವಹಣೆ, ಮರುಬಳಕೆ ಮತ್ತು ಹೊಸ ತಂತ್ರಜ್ಞಾನಗಳಲ್ಲಿ ಆಸಕ್ತಿ ಇರುವ ವಾಟರ್ ರಿಲೇಟೆಡ್ ಸ್ಟಾರ್ಟ್‌ಅಪ್‌ಗಳಿಗೆ ಜಲಮಂಡಳಿಯ ಘಟಕಗಳಲ್ಲಿ ತಮ್ಮ ತಂತ್ರಜ್ಞಾನದ 'ಪ್ರೂಫ್ ಆಫ್ ಕಾನ್ಸೆಪ್ಟ್' (Proof of Concept - PoC) ಯೋಜನೆಗಳನ್ನು ಪೈಲೆಟ್ ರೂಪದಲ್ಲಿ ಅನುಷ್ಠಾನಗೊಳಿಸಲು ಮುಕ್ತವಾಗಿ ಅವಕಾಶ ನೀಡಲು ಸಿದ್ಧರಿದ್ದೇವೆ, ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಐತಿಹಾಸಿಕ ಹೆಜ್ಜೆ:
ಬೋಸಾನ್ ವೈಟ್‌ವಾಟರ್ ಸಂಸ್ಥೆಯೊಂದಿಗೆ ಜಂಟಿಯಾಗಿ ಆರಂಭಿಸಲಾದ ಈ ಪ್ರಾಯೋಗಿಕ ಯೋಜನೆಯು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಒಂದು ಸರ್ಕಾರಿ ಜಲಮಂಡಳಿಯು ಖಾಸಗಿ ನವೋದ್ಯಮಕ್ಕೆ ನೈಜ ಪರಿಸ್ಥಿತಿಯಲ್ಲಿ ನೀರು ಮರುಬಳಕೆಯ ತಂತ್ರಜ್ಞಾನವನ್ನು ಪ್ರದರ್ಶಿಸಲು ತನ್ನ ಎಸ್‌ಟಿಪಿ ಆವರಣದಲ್ಲಿ ಅವಕಾಶ ನೀಡಿದ ಐತಿಹಾಸಿಕ ಹೆಜ್ಜೆಯಾಗಿದೆ.ಇದನ್ನು ಓದಿ: ತುಮಕೂರಿಗೆ ಭವ್ಯ ಕೊಡುಗೆ - ಮಿಡಿತಾ ಹಾರ್ಟ್ ಸೆಂಟರ್ ಉದ್ಘಾಟನೆಗೆ ಕ್ಷಣಗಣನೆ..!
ಈ ಪ್ರಾಯೋಗಿಕ ಘಟಕವು ಸರ್ಕಾರದ ಎಸ್‌ಟಿಪಿಯಿಂದ ಸಂಸ್ಕರಿಸಿದ ನೀರನ್ನು ಪಡೆಯಲಿದ್ದು, ಅದನ್ನು ಬೋಸಾನ್ ವೈಟ್ವಾಟರ್‌ನ ವಿಶೇಷ 11-ಹಂತದ ಶುದ್ಧೀಕರಣ ವ್ಯವಸ್ಥೆಯ ಮೂಲಕ ಮತ್ತಷ್ಟು ಶುದ್ಧೀಕರಿಸುತ್ತದೆ. ಈ ಘಟಕವು ಪ್ರತಿದಿನ 70,000 ಲೀಟರ್‌ಗಳಷ್ಟು ಉನ್ನತ ಗುಣಮಟ್ಟದ (ಕುಡಿಯುವ ಮಟ್ಟಕ್ಕೆ ಸಮೀಪ) ನೀರನ್ನು ಉತ್ಪಾದಿಸಲಿದೆ.
ಬಳಕೆದಾರರು: ಹೊರವರ್ತುಲ ರಸ್ತೆಯ (ORR) ಸುತ್ತಮುತ್ತಲಿನ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ (ಮುಖ್ಯವಾಗಿ ಕೂಲಿಂಗ್ ಟವರ್‌ಗಳ ಬಳಕೆಗೆ) ಈ ನೀರನ್ನು ಪೂರೈಸುವ ಗುರಿ ಹೊಂದಲಾಗಿದೆ.ಇದನ್ನು ಓದಿ: ಮಕ್ಕಳ ಭವಿಷ್ಯ ಚಿಂತನೆಗೆ ಕಂಟಕವಾದ ಶಿಕ್ಷಣದ ವ್ಯಾಪಾರೀಕರಣ!?
ಪರಿಸರ ಲಾಭ: ಈ ಕ್ರಮದಿಂದ ನಗರದ ಅಮೂಲ್ಯ ಸಿಹಿನೀರಿನ ಮೇಲಿನ ಅವಲಂಬನೆ ಕಡಿಮೆಯಾಗುವುದಲ್ಲದೆ, ತ್ಯಾಜ್ಯ ನೀರು ಅನಗತ್ಯವಾಗಿ ಕೆರೆಗಳಿಗೆ ಸೇರುವುದನ್ನು ತಪ್ಪಿಸಬಹುದು.
ಹೂಡಿಕೆ ಮತ್ತು ಸಹಕಾರ ಮಾದರಿ: ಈ ಯೋಜನೆಯಲ್ಲಿ ಜಲಮಂಡಳಿಯು ಯಾವುದೇ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಬದಲಿಗೆ, ಬೋಸನ್ ಸಂಸ್ಥೆಯು ತಮ್ಮ ಸ್ವಂತ ವೆಚ್ಚದಲ್ಲಿ ಅಗತ್ಯವಿರುವ ಅತ್ಯಾಧುನಿಕ ಶುದ್ಧೀಕರಣ ಉಪಕರಣಗಳನ್ನು ಅಳವಡಿಸಲಿದೆ. ಜಲಮಂಡಳಿಯು ಕಚ್ಚಾ ವಸ್ತುವಾಗಿ 'ತ್ಯಾಜ್ಯ ನೀರನ್ನು' ಸರಬರಾಜು ಮಾಡಲಿದ್ದು, ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಮಾರುಕಟ್ಟೆ ಸಂಪರ್ಕ ಒದಗಿಸಲು ಸಹಾಯ ಮಾಡಲಿದೆ.ಉನ್ನತ ಶಿಕ್ಷಣ ನಿಯಂತ್ರಣ ಮಸೂದೆ 2025 - ಸಂಸತ್ತಿನಲ್ಲಿ ಉಲ್ಲೇಖಿಸಿ - ದಿಗ್ವಿಜಯ್ ಸಿಂಗ್ ಮನವಿ
ಈ ಸಂದರ್ಭದಲ್ಲಿ ಜಲಮಂಡಳಿಯ ಪ್ರಧಾನ ಮುಖ್ಯ ಎಂಜನಿಯರ್ ಬಿ.ಎಸ್.ದಲಾಯತ್,ಮುಖ್ಯ ಎಂಜನಿಯರ್ ಪರಮೇಶ್ವರ್ ಸೇರಿದಂತೆ ಎಂಜನಿಯರ್ ಗಳು ಹಾಗೂ ಬೋಸಾನ್ ಪ್ರತಿನಿಧಿಗಳು ಇದ್ದರು.