Skip to main content
ವಿಡಿಯೋ
1/2
general

ತುಮಕೂರಿಗೆ ಭವ್ಯ ಕೊಡುಗೆ - ಮಿಡಿತಾ ಹಾರ್ಟ್ ಸೆಂಟರ್ ಉದ್ಘಾಟನೆಗೆ ಕ್ಷಣಗಣನೆ..!

By Sushmitha R
ತುಮಕೂರಿಗೆ ಭವ್ಯ ಕೊಡುಗೆ - ಮಿಡಿತಾ ಹಾರ್ಟ್ ಸೆಂಟರ್ ಉದ್ಘಾಟನೆಗೆ ಕ್ಷಣಗಣನೆ..!

ತುಮಕೂರು - ಆರೋಗ್ಯ ಸೇವಾ ವಲಯದಲ್ಲಿ ಮಹತ್ವದ ಹೆಜ್ಜೆಯನ್ನಿಡಲು ತುಮಕೂರಿನ ಮಿಡಿತಾ ಹಾರ್ಟ್ ಸೆಂಟರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಉದ್ಘಾಟನೆಗೆ ಸಜ್ಜಾಗಿದೆ. ಈ ಬಹುನಿರೀಕ್ಷಿತ ಆಸ್ಪತ್ರೆಯು ನವೆಂಬರ್ 30 ಭಾನುವಾರದಂದು ಅಕ್ಷರಶಃ ನಕ್ಷತ್ರಗಳ ಸಮಾಗಮದೊಂದಿಗೆ ಶುಭಾರಂಭಗೊಳ್ಳಲಿದೆ.

ತುಮಕೂರು - ಆರೋಗ್ಯ ಸೇವಾ ವಲಯದಲ್ಲಿ ಮಹತ್ವದ ಹೆಜ್ಜೆಯನ್ನಿಡಲು ತುಮಕೂರಿನ ಮಿಡಿತಾ ಹಾರ್ಟ್ ಸೆಂಟರ್ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಉದ್ಘಾಟನೆಗೆ ಸಜ್ಜಾಗಿದೆ. ಈ ಬಹುನಿರೀಕ್ಷಿತ ಆಸ್ಪತ್ರೆಯು ನವೆಂಬರ್ 30 ಭಾನುವಾರದಂದು ಅಕ್ಷರಶಃ ನಕ್ಷತ್ರಗಳ ಸಮಾಗಮದೊಂದಿಗೆ ಶುಭಾರಂಭಗೊಳ್ಳಲಿದೆ.

​ತುಮಕೂರಿನಲ್ಲಿ ನಡೆಯಲಿದೆ ದೊಡ್ಡ ಸಮಾರಂಭ:

​ಮಿಡಿತಾ ಹಾರ್ಟ್ ಸೆಂಟರ್‌ನ ಉದ್ಘಾಟನಾ ಸಮಾರಂಭವು ನಾಳೆ ಬೆಳಗ್ಗೆ 11:00 ಗಂಟೆಗೆ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಣ್ಯರು, ಧಾರ್ಮಿಕ ಮುಖಂಡರು ಹಾಗೂ ವೈದ್ಯಕೀಯ ಕ್ಷೇತ್ರದ ದಿಗ್ಗಜರು ಆಗಮಿಸಲಿದ್ದಾರೆ.Pinkmint Women's Elegant Floral Anarkali Muslin Kurta Set& Straight Pant with Fancy Dupatta Fetive & Ethnic Suit Set Wear

ದಿವ್ಯ ಸಾನಿಧ್ಯ:

​ಸಮಾರಂಭಕ್ಕೆ ತುಮಕೂರು ಸಿದ್ಧಗಂಗಾ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಉದ್ಘಾಟನೆಯನ್ನ ಗೃಹ ಸಚಿವ

ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರು ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಸಂಸದರಾದ ವಿ. ಸೋಮಣ್ಣ ವಹಿಸಲಿದ್ದಾರೆ. ಹೀಗೆ ಹಲವು ಗಣ್ಯರು ಆಗಮಿಸಲಿದ್ದಾರೆ. ಇದನ್ನು ಓದಿ: ಉನ್ನತ ಶಿಕ್ಷಣ ನಿಯಂತ್ರಣ ಮಸೂದೆ 2025 - ಸಂಸತ್ತಿನಲ್ಲಿ ಉಲ್ಲೇಖಿಸಿ - ದಿಗ್ವಿಜಯ್‌ ಸಿಂಗ್‌ ಮನವಿ

ಮಿಡಿತಾ ಆಸ್ಪತ್ರೆಯ ವಿಶೇಷತೆ ಏನು?

​ಮಿಡಿತಾ ಹಾರ್ಟ್ ಸೆಂಟರ್ ಕೇವಲ ಬಹು-ವಿಶೇಷ ಆಸ್ಪತ್ರೆಯಾಗಿರದೇ, ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಭಾನುಪ್ರಕಾಶ್ ಮತ್ತು ಡಾರ್ಮಟೋಸರ್ಜನ್ ಡಾ. ಸುಷ್ಮಾ ಅವರ ನೇತೃತ್ವದಲ್ಲಿ ಉನ್ನತ ಗುಣಮಟ್ಟದ ಹೃದಯ ಸಂಬಂಧಿ ಹಾಗೂ ಚರ್ಮ ಸಂಬಂಧಿ ಚಿಕಿತ್ಸೆಗಳನ್ನು ನೀಡಲಿದೆ. ಆಧುನಿಕ ಸೌಲಭ್ಯಗಳು ಮತ್ತು ತಜ್ಞರ ತಂಡದೊಂದಿಗೆ, ತುಮಕೂರು ಮತ್ತು ಸುತ್ತಮುತ್ತಲಿನ ರೋಗಿಗಳಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ.ಇದನ್ನು ಓದಿ: ಮಕ್ಕಳ ಭವಿಷ್ಯ ಚಿಂತನೆಗೆ ಕಂಟಕವಾದ ಶಿಕ್ಷಣದ ವ್ಯಾಪಾರೀಕರಣ!?

ಕಾರ್ಯಕ್ರಮದ ವೇಳಾಪಟ್ಟಿ ಮತ್ತು ಸ್ಥಳ:

ನವೆಂಬರ್ 30, ಭಾನುವಾರ - 2025 ಪಾದಪೂಜೆ ಬೆಳಗ್ಗೆ 8.00 ಗಂಟೆಗೆ , ಉದ್ಘಾಟನೆ ಬೆಳಗ್ಗೆ 11.00 ಗಂಟೆಗೆ ,

ಭೋಜನ ಮಧ್ಯಾಹ್ನ 12.00 ರಿಂದ ನಡೆಯಲಿದೆ.

ಆಸ್ಪತ್ರೆ ವಿಳಾಸವು ​ವರಮಹಾಲಕ್ಷ್ಮಿ ಸಿಗ್ನಲ್, ಎದುರು, ಜನರಲ್ ಕ್ಯಾರಿಯೇಜ್ (ಬಾಡಿಬಿಲ್ಡರ್ಸ್) ರಸ್ತೆ, ಕೆ. ಆರ್. ಬಡಾವಣೆ ತುಮಕೂರಿನಲ್ಲಿದೆ. ​ಸಂಸ್ಥಾಪಕರಾದ ಡಾ. ಭಾನುಪ್ರಕಾಶ್ ಮತ್ತು ಡಾ. ಸುಷ್ಮಾ ಅವರು ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಶುಭ ಕೋರುವ ಮೂಲಕ ತಮ್ಮ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ.ಇದನ್ನು ಓದಿ: ದೃಷ್ಟಿಕೋನ ಬದಲಾದರೆ ಪರಿವರ್ತನೆ ಸಾಧ್ಯ - ನಿವೃತ್ತ ಪ್ರಾಧ್ಯಾಪಕ ಆರ್‌.ಕೆ ಹುಡಗಿ