ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಘೋಷಿಸಿದ್ದಾರೆ. ಪಕ್ಷ ಹೇಳಿದ್ರೆ ದೆಹಲಿಗೆ ಹೋಗ್ತೀನಿ. ಆದರೆ ಈಗ ಮುಖ್ಯವಾಗಿ ಮೆಕ್ಕೆಜೋಳ ಮತ್ತು ಕಬ್ಬು ಬೆಳೆ ವಿಚಾರವಾಗಿ ದೆಹಲಿಗೆ ಹೋಗಬೇಕಿದೆ.
ಅಲ್ಲಿಗೆ ಹೋಗಿ ಕೇಂದ್ರ ಸಚಿವರನ್ನು ಭೇಟಿ ಮಾಡ್ತೇನೆ. ಮೇಕೆದಾಟು ಯೋಜನೆಯ ವಿಚಾರವಾಗಿಯೂ ಚರ್ಚೆ ಮಾಡ್ತೇವೆ. ಕೇಂದ್ರ ಸಚಿವರಿಗೆ ಸಂಪೂರ್ಣ ಮಾಹಿತಿ ಕೊಡ್ತೇವೆ” ಎಂದು ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ತಿಳಿಸಿದರು.Navlik Women's Viscose Embroidered Straight Kurta with Pant and Dupatta Sets (NK-642)
ಕರ್ನಾಟಕದ ರೈತರ ಹಿತ ಕಾಯುವ ನಿಟ್ಟಿನಲ್ಲಿ ಮೆಕ್ಕೆಜೋಳ ಮತ್ತು ಕಬ್ಬು ಬೆಳೆಗೆ ಕನಿಷ್ಠ ಬೆಂಬಲ ಬೆಲೆ (MSP) ಘೋಷಣೆ ಮಾಡಿಸುವುದು ಮತ್ತು ಕಬ್ಬಿನ ನ್ಯಾಯ ಬೆಲೆ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದೇ ದೆಹಲಿ ಪ್ರವಾಸದ ಮುಖ್ಯ ಉದ್ದೇಶ ಎನ್ನಲಾಗಿದೆ.ಇದನ್ನು ಓದಿ: ಶಿಕ್ಷಣದಲ್ಲಿ AI: ಅವಕಾಶಗಳು ಮತ್ತು ಸವಾಲುಗಳ ಅವ್ಯಕ್ತ ಅರಿವಿನ ಸಾಧಕ ಬಾಧಕಗಳೇನು!?
ಅಲ್ಲದೆ, ಬಹುದಿನಗಳಿಂದ ವಿವಾದಕ್ಕೊಳಗಾಗಿರುವ ಮೇಕೆದಾಟು ಕುಡಿಯುವ ನೀರು ಯೋಜನೆಯ ಬಗ್ಗೆಯೂ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ವಿವರವಾದ ಚರ್ಚೆ ನಡೆಸಲು ಡಿಕೆಶಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಕರ್ನಾಟಕದ ಜನರಿಗೆ, ರೈತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಗುರಿ. ಈ ಎಲ್ಲ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಸಹಕಾರ ಅಧಿಕಾರ ಅಗತ್ಯ. ಆದ್ದರಿಂದ ಶೀಘ್ರದಲ್ಲೇ ದೆಹಲಿಗೆ ತೆರಳಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಎಲ್ಲ ದಾಖಲೆಗಳೊಂದಿಗೆ ಮಾಹಿತಿ ನೀಡಿ ಒತ್ತಾಯ ಮಾಡ್ತೇವೆ ಎಂದು ಡಿಸಿಎಂ ತಿಳಿಸಿದರು.ಇದನ್ನು ಓದಿ: ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣ: ಹೈಕೋರ್ಟ್‌ನಲ್ಲಿ ಜಿ.ಟಿ. ದಿನೇಶ್ ಕುಮಾರ್ ಜಾಮೀನು ಅರ್ಜಿ ವಿಚಾರಣೆ!
ಈ ಹಿಂದೆಯೂ ಮೇಕೆದಾಟು ಯೋಜನೆಯಲ್ಲಿ ಕೇಂದ್ರದ ಅನುಮೋದನೆ ವಿಳಂಬವಾಗುತ್ತಿರುವ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿ ರೈತರ ಹಿತರಕ್ಷಣೆಯೊಂದಿಗೆ ಮೇಕೆದಾಟು ಸೇರಿದಂತೆ ಎಲ್ಲ ಪ್ರಮುಖ ವಿಚಾರಗಳನ್ನು ಒಂದೇ ಪ್ರವಾಸದಲ್ಲಿ ಪರಿಹರಿಸುವ ಉದ್ದೇಶ ಹೊಂದಿದ್ದಾರೆ.ಇದನ್ನು ಓದಿ: ಶಿಕ್ಷಣದಲ್ಲಿ AI: ಅವಕಾಶಗಳು ಮತ್ತು ಸವಾಲುಗಳ ಅವ್ಯಕ್ತ ಅರಿವಿನ ಸಾಧಕ ಬಾಧಕಗಳೇನು!?