Skip to main content
ವಿಡಿಯೋ
1/3
general

ಇಂಡಿಯಾ - ಎಐ ಇಂಪ್ಯಾಕ್ಟ್‌ ಸಮ್ಮೇಳನಕ್ಕೂ ಮುನ್ನ ಹ್ಯಾಕರ್‌ಸ್ಪೇಸ್‌ ಮಂಗಳೂರು ಮೀಟ್‌ ಕಾರ್ಯಕ್ರಮಕ್ಕೆ ಕೇಂದ್ರ ಮಾನ್ಯತೆ - ಸಂಸದ ಕ್ಯಾ. ಬ್ರಿಜೇಶ್‌ ಚೌಟ

By Shravanthi R
ಇಂಡಿಯಾ - ಎಐ ಇಂಪ್ಯಾಕ್ಟ್‌ ಸಮ್ಮೇಳನಕ್ಕೂ ಮುನ್ನ ಹ್ಯಾಕರ್‌ಸ್ಪೇಸ್‌ ಮಂಗಳೂರು ಮೀಟ್‌ ಕಾರ್ಯಕ್ರಮಕ್ಕೆ ಕೇಂದ್ರ ಮಾನ್ಯತೆ - ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಎಐ ತಂತ್ರಜ್ಞಾನ ಬೆಳವಣಿಗೆಗೆ ಕರಾವಳಿ ಭಾಗವಾದ ಮಂಗಳೂರು ಕೊಡುಗೆ ನೀಡುತ್ತಿದ್ದು, ಇಂದು ಆಯೋಜಿತಗೊಂಡಿರುವ ಅಲ್ಲಿನ ಹ್ಯಾಕರ್ಸ್‌ ಆಫ್‌ ಮಂಗಳೂರು ಮೀಟ್‌ ಕಾರ್ಯಕ್ರಮವು ಕೇಂದ್ರ ಸರ್ಕಾರದ ಇಂಡಿಯಾ-ಎಐ ಇಂಪ್ಯಾಕ್ಟ್‌ ಸಮ್ಮೇಳನದ ಪೂರ್ವ ಶೃಂಗಸಭೆಯಾಗಿ ಮಾನ್ಯತೆ ಪಡೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹ್ಯಾಕರ್‌ಸ್ಪೇಸ್‌ ಮಂಗಳೂರು ಆಯೋಜಿಸುವ ನವೆಂಬರ್‌ ತಿಂಗಳ HMNOV25 ಮೀಟ್‌ ಕಾರ್ಯಕ್ರಮವು ಭಾರತ ಸರ್ಕಾರವು ಮುಂದಿನ ವರ್ಷ ಫೆಬ್ರವರಿಯಲ್ಲಿ ಆಯೋಜಿಸಲಿರುವ ಅಂತರರಾಷ್ಟ್ರೀಯ ಮಟ್ಟದ ಇಂಡಿಯಾ - ಎಐ ಇಂಪ್ಯಾಕ್ಟ್‌ ಸಮ್ಮೇಳನಕ್ಕೂ ಮೊದಲು ಅಧಿಕೃತ ಮಾನ್ಯತೆ ಪಡೆದ ಪೂರ್ವ ಶೃಂಗಸಭೆ ಕಾರ್ಯಕ್ರಮವಾಗಿ ಗುರುತಿಸಲ್ಪಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತಿಳಿಸಿದ್ದಾರೆ ಎನ್ನಲಾಗಿದೆ. 

ಎಐ ಇಂಡಿಯಾ ಮಿಷನ್‌ ಜೊತೆಗೆ ಸಮನ್ವಯ ಸಾಧಿಸಿದ ಪರಿಣಾಮ ಹ್ಯಾಕರ್‌ಸ್ಪೇಸ್‌ ಮಂಗಳೂರು ಆಯೋಜಿತ ಈ ಕಾರ್ಯಕ್ರಮಕ್ಕೆ ಕೇಂದ್ರ ಮಾನ್ಯತೆ ಲಭ್ಯವಾಗಿದೆ ಎನ್ನಲಾಗಿದೆ. ಈ ಮಹತ್ವದ ಮಾನ್ಯತೆಯಿಂದಾಗಿ ಮಂಗಳೂರನ್ನು ಭಾರತದ ಸಿಲಿಕಾನ್‌ ಬೀಚ್‌ ಹಾಗೂ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆದಿರುವ ತಂತ್ರಜ್ಞಾನ ಆವಿಷ್ಕಾರಗಳ ಜೊತೆಗೆ ಇದನ್ನು ಎಐ ಹಬ್‌ ಆಗಿಸುವುದಕ್ಕೆ ಉತ್ತೇಜನ ನೀಡಲಾಗಿದೆ ಎನ್ನಲಾಗಿದೆ. Carlington Analog Watches for Women with mesh Strap - CT 2009

ಆ ಮೂಲಕ ರಾಷ್ಟ್ರ ಹಾಗೂ ಜಾಗತೀಕ ಮಟ್ಟದಲ್ಲಿ ಮಂಗಳೂರನ್ನು ಎಐ ಆವಿಷ್ಕಾರಗಳ ಸಾಲಿನಲ್ಲಿ ಗುರುತಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ. ಎಐ ತಂತ್ರಜ್ಞಾನ ಬಳಕೆಯನ್ನು ಪರಿಣಾಮಕಾರಿ ಮತ್ತು ಉಪಯುಕ್ತವಾಗಲಿರುವ ರೀತಿ ಉತ್ತೇಜಿಸುವ ಕಾರಣ ಇಂದು(ನ.29) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಲಾಗಿದೆ. ಕ್ಯಾ.ಬ್ರಿಜೇಶ್‌ ಚೌಟ ಅವರು ಟ್ವೀಟ್‌ ಮೂಲಕ ಈ ಕುರಿತಾಗಿ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಡೀಪ್‌-ಟೆಕ್‌ ವಿಚಾರ ಸಂಕಿರಣ, ಹೊಸ ಆವಿಷ್ಕಾರ ಪ್ರದರ್ಶನ, ಪ್ರಾಯೋಗಿಕ ಕಾರ್ಯಾಗಾರ, ಎಐ ವೃತ್ತಿಪರರು ಹಾಗೂ ಪರಿಣಿತರ ಸಂವಾದ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ವರದಿ ತಿಳಿಸಿದೆ. ವಿಶ್ವಮಟ್ಟದಲ್ಲಿ ಮಂಗಳೂರನ್ನು ಎಐ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಶಿಕ್ಷಣದಲ್ಲಿ AI: ಅವಕಾಶಗಳು ಮತ್ತು ಸವಾಲುಗಳ ಅವ್ಯಕ್ತ ಅರಿವಿನ ಸಾಧಕ ಬಾಧಕಗಳೇನು!?