ಎಷ್ಟೋ ಜನರು ಹಣ ಸಂಪಾದನೆ, ಖರ್ಚು ಹಾಗೂ ಅದರ ನಿರ್ವಹಣೆ ಕುರಿತು ವಿವಿಧ ಆಯಾಮಗಳಲ್ಲಿ ಆಲೋಚಿಸುತ್ತಾರೆ. ಬರುವ ಆದಾಯದಲ್ಲಿ ಉಳಿತಾಯ, ಖರ್ಚು-ವೆಚ್ಚ, ಹೂಡಿಕೆ ವಿಷಯವಾಗಿ ನೆಮ್ಮದಿರಹಿತರಾಗಿರುತ್ತಾರೆ. ಇದೆಲ್ಲಕ್ಕೂ ಸರಳ ಸೂತ್ರವೆಂದರೆ ಮನಸ್ಥಿತಿ. ಆರ್ಥಿಕತೆ ಎನ್ನುವುದು ದುಡಿಮೆ ಹಾಗೂ ಮತ್ತದರ ಸದುಪಯೋಗಿಕ ನಿರ್ವಹಣೆಗೆ ಸಂಬಂಧಿಸಿರುವುದಾಗಿದೆ.
ಹಣಕಾಸು ಆದಾಯಗಳ ನಿರ್ವಹಣೆಯೊಂದು ಮನಸ್ಥಿತಿಗೆ ಸಂಬಂಧ ಪಟ್ಟಿದ್ದು, ಈ ಬಗ್ಗೆ ಇರುವ ತಪ್ಪುಗ್ರಹಿಕೆಗಳನ್ನು ಕಂಡುಹಿಡಿದು, ಸರಿದೂಗಿಸಿಕೊಂಡಲ್ಲಿ ಪರಿಹಾರ ಒದಗುತ್ತದೆ. ಸಾಮಾನ್ಯವಾಗಿ ಆದಾಯ ಮೈನಸ್ ಖರ್ಚು ಉಳಿತಾಯವೆಂಬ ಸಿದ್ದಾಂತವು ಸಮಾಜದಲ್ಲಿ ರೂಢಿಗತವಾಗಿದೆ. ಆದರೆ, ಆದಾಯ ಮೈನಸ್ ಉಳಿಕೆ ಹಣ ಉಳಿದದ್ದು ಖರ್ಚು ಎಂದು ಭಾವಿಸೋಣ. ಆಗ ಹಣದ ಬಗೆಗಿನ ಮನೋಭಾವ ಬದಲಾಗುತ್ತದೆ.
ಇದೇ ರೀತಿಯಲ್ಲಿ ಕೆಲವೊಂದು ವಿಚಾರಗಳಲ್ಲಿನ ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
ಮೈಂಡ್‌ಸೆಟ್ ಗ್ರಹಿಕೆಗಳು
ಬ್ಯಾಂಕಿಂಗ್ ನಾಲೆಜ್ಡ್
ಬಜೆಟಿಂಗ್ ಅನಾಲಿಸಿಸ್ ಪ್ಲಾನಿಂಗ್
ಭಾವನಾತ್ಮಕ ಹಾಗೂ ಲೈಫ್‌ಸ್ಟೈಲ್
ಹಣಕಾಸು ಯೋಜನೆಗಳು, ಇನ್‌ಶೂರೆನ್ಸ್ ಪ್ಲಾನ್ಸ್
ಹೂಡಿಕೆ ಮತ್ತು ಫಂಡಿಂಗ್
ಟ್ಯಾಕ್ಸ್ ಮತ್ತು ಕಾನೂನಾತ್ಮಕ ಅಂಶಗಳು
ಈ ರೀತಿಯ ಕೆಲವಂಶಗಳಲ್ಲಿ ನಮ್ಮ ಪರಿವರ್ತನೆ ಬಹುಮುಖ್ಯವಾಗಿರುತ್ತದೆ. ಬಹಳಷ್ಟು ಜನರು, ಹಣ ಗಳಿಸಿದ್ದೇ ತಡ ಅದನ್ನು ಸುರಕ್ಷಿತವಾಗಿರಿಸಲು ಖರ್ಚು ಮಾಡದೇ ಇರಬಹುದು. ದುಂದು ವೆಚ್ಚಕ್ಕೆ ಕೈ ಹಾಕದೇ ಉಳಿಸುವುದುಂಟು. ಆದರೆ, ಉಳಿಸುವುದು, ಹೂಡಿಕೆ ಮಾಡುವುದು ಮನಸ್ಥಿತಿಗೆ ಸಂಬಂಧಿಸಿದ್ದಾಗಿದೆ ಎಂದು ವರದಿ ತಿಳಿಸಿದೆ. ಹೆಚ್ಚು ಗಳಿಕೆಯಾದರೆ ಮಾತ್ರ ಹೂಡುವುದು ಸೂಕ್ತ ಎಂಬ ಪರಿಕಲ್ಪನೆಯನ್ನು ಪಾಲಿಸುವುದು ಪ್ರಶ್ನೆಯಾಗಿ ಉಳಿದುಬಿಡುತ್ತದೆ. Carlington Iconic 2040 Analog Ladies Watch with Premium Mesh Chain, Scratch-Resistant Dial, and Water-Resistant Body – Square Dial Watches for Women and Girls
ಆದರೆ, ಯಾವುದೇ ಸಂದರ್ಭದಲ್ಲೂ ಹಣವನ್ನು ವ್ಯಯಿಸಬೇಕೆ ಬೇಡವೇ ಎಂಬ ನಿರ್ಧಾರಕ್ಕೆ ಸರಳ ಯೋಜನೆ ಹಾಕಿಕೊಳ್ಳುವುದು ಸೂಕ್ತವಾಗಿರುತ್ತದೆ. ಇದಕ್ಕಾಗಿ ಬರೆಯುವುದು ಮಾರ್ಗವಾಗಿದೆ. ಒಂದು ಪಟ್ಟಿ ಮಾಡಿಕೊಂಡು ಯಾವುದು ಲಾಭದಾಯಕ ಅಥವಾ ಇಲ್ಲವೇ ಎಂದು ಕಾಯುವಿಕೆ ತಪ್ಪಲ್ಲ ಅಥವಾ ಕಾಲಮೀರಿದೆಯೇ ಎಂದು ಆತ್ಮವಿಮರ್ಶಿಸಿಕೊಳ್ಳುವುದು ಸಾಂತ್ವನದ ರೀತಿ ಅನ್ನಿಸಬಹುದು.
ಆದರೆ, ನಮ್ಮ ಕನಸಿನ ಹಣತಂತ್ರ ಯೋಜನೆಗಳಿಗೆ ಒಂದಿಲ್ಲ ಒಂದು ದಾರಿ ಮಾಡಿಕೊಳ್ಳಲು ಸಿದ್ದರಿರಬೇಕು. ಇದಕ್ಕಾಗಿ ದುಡುಕುವುದಲ್ಲ. ಬಹಳ ಯೋಜಿತವಾಗಿ ಹಣಕಾಸಿನ ಮನಸ್ಥಿತಿಯನ್ನು ರೂಪಿಸಿಕೊಳ್ಳುವುದು ಹಾಗೂ ಗಟ್ಟಿಗಳಿಸಿಕೊಳ್ಳುವುದು ಸೂಕ್ತವಾಗಿರುತ್ತದೆ. ಈಜು ಕಲಿಯಬೇಕೆಂದಿದ್ದರೆ ದಡದಲ್ಲೇ ನಿಂತು ನೋಡಬಾರದು ಬದಲಾಗಿ ನೀರಿಗೆ ಇಳಿಯಬೇಕಿರುತ್ತದೆ. ಇದನ್ನೂ ಓದಿ: ಇಂಡಿಯಾ - ಎಐ ಇಂಪ್ಯಾಕ್ಟ್ ಸಮ್ಮೇಳನಕ್ಕೂ ಮುನ್ನ ಹ್ಯಾಕರ್‌ಸ್ಪೇಸ್ ಮಂಗಳೂರು ಮೀಟ್ ಕಾರ್ಯಕ್ರಮಕ್ಕೆ ಕೇಂದ್ರ ಮಾನ್ಯತೆ - ಸಂಸದ ಕ್ಯಾ. ಬ್ರಿಜೇಶ್ ಚೌಟ