Skip to main content
ವಿಡಿಯೋ
1/3
technology

ಎಐ ಎಂಬ ಬೆಸ್ಟ್‌ ಫ್ರೆಂಡ್‌: ತಂತ್ರಜ್ಞಾನ ʻಹತ್ತಿರʼ ಮಾನವನ 'ಹೃದಯ' ದೂರವೇ!?

By Shravanthi R
ಎಐ ಎಂಬ ಬೆಸ್ಟ್‌ ಫ್ರೆಂಡ್‌: ತಂತ್ರಜ್ಞಾನ ʻಹತ್ತಿರʼ ಮಾನವನ 'ಹೃದಯ' ದೂರವೇ!?

ದಿನದಿಂದ ದಿನಕ್ಕೆ ಜನರ ಲೈಫ್‌ಸ್ಟೈಲ್‌ ಹಾಗೂ ಥಿಂಕಿಂಗ್‌ ಜೊತೆಗೆ ಹೊಂದಿಕೊಂಡಿರುವ ಆರ್ಟಿಫೀಷಿಯಲ್‌ ಇಂಟಲಿಜೆನ್ಸ್‌ (ಎಐ) ಒಂದು ತಾಂತ್ರಿಕ ಉಪಕರಣ ಮಾತ್ರವೇ ಬದಲಾಗಿ ಮಾನವ ಸಂಬಂಧಗಳ, ಭಾವನೆಗಳ ಪರ್ಯಾಯವಲ್ಲ ಎಂದು ನೆನಪಿನಲ್ಲಿಡಬೇಕಿದೆ.

ಮನುಷ್ಯರಿಗೆ ಅವರು ಸಾಕಿದ ನಾಯಿ, ಬೆಕ್ಕುಗಳು ಪ್ರೀತಿ ನೀಡುತ್ತದೆ. ಇದನ್ನೂ ಬದಲಿಸುವಲ್ಲಿ ʻಎಐʼ ಸ್ನೇಹಿತನ ಸ್ಥಾನ ತುಂಬುತ್ತಿದೆ ಎನ್ನಲಾಗಿದೆ. ಈ ಮೂಲಕ ಡಿಜಿಟಲ್‌ ಯುಗದಲ್ಲಿ ಪೆಟ್ಸ್‌ ಪ್ರೇಮಿಗಳ ಪ್ರೇರಕ ಶಕ್ತಿಯಾಗಿ ಎಐ ಪ್ರಯತ್ನಿಸುವುದೇ? ಎನ್ನಲಾಗಿದೆ. 

ಮಾನವನ ಬೆಸ್ಟ್‌ ಫ್ರೆಂಡ್‌ ಪೆಟ್ಸ್‌ ಅಲ್ಲ, ಇದೀಗ ಎಐ ನಿಜಾನಾ!? ಹೌದು, ಮನುಷ್ಯನ ಅತ್ಯುತ್ತಮ ಸ್ನೇಹಿತನಾಗುತ್ತಿದ್ದಾನೆ ಈ ಎಐ.! ಸಣ್ಣ ವಿಷಯ ಕಲಿಕೆಯಿಂದ ಹಿಡಿದು ಉದ್ಯೋಗದವರೆಗೆ ಎಐ ಅತ್ಯುತ್ತಮ ಸ್ನೇಹಿತನಾಗಿ ಮಾರ್ಪಾಡಾಗುತ್ತಿದೆ ಎನ್ನಲಾಗಿದೆ. ಸಲಹೆ ಸೂಚನೆ ನೀಡುವುದಲ್ಲದೇ, ಮಾನವನ ಬೆಸ್ಟ್‌ ಫ್ರೆಂಡ್‌ ಅನಿಸಿಕೊಳ್ಳೋದ್ರಲ್ಲಿ ಅಚ್ಚರಿ ಕಾಣಿಸಿಲ್ಲ.

ಎಐ ವಾಯ್ಸ್‌ ಅಸಿಸ್ಟೆಂಟ್ಸ್‌ಗಳಾದ ಸಿರಿ, ಅಲೆಕ್ಸಾ ಇದಕ್ಕೆ ಸ್ಪಷ್ಟ ಉದಾಹರಣೆಗಳಾಗಿದೆ. ಮಾರ್ಗದರ್ಶಕನಾಗಿ, ಹೊಸ ಸ್ನೇಹಿತನಾಗಿ ಕೃತಕಬುದ್ದಿಮತ್ತೆಯು ಮಾನವನ ಮಿಡಿತಗಳಿಗೆ ಸ್ಪಂದಿಸಿವೆ. ವಿವಿಧ ಚಾಟ್‌ಬಾಟ್‌ಗಳು ಇದಕ್ಕೆ ಹೊರತಾಗಿಲ್ಲ.

ತಂತ್ರಜ್ಞಾನ ಕೊಡುಗೆಯೆಂಬಂತೆ, ಇವುಗಳು ದೈನಂದಿನ ಚಟುವಟಿಕೆಗಳಿಂದ ಹಿಡಿದು, ಮಾನವನು ಎದುರಿಸುವ ಒತ್ತಡ, ಆತಂಕಗಳಂಥ ಪ್ರತೀ ಅಂಶಗಳಿಗೆ ಪ್ರಭಾವ ಬೀರಿರುವ ಶಕ್ತಿಯಾಗಿ ಎಐ ಪರಿಣಮಿಸಿದೆ. ಕ್ರಿಯೇಟಿವ್‌ ಐಡಿಯಾಗಳಿಗೆ, ಕಷ್ಟದ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲೂ; ಎಐ ಕಲಿಕೆಗೆ ಒಡನಾಡಿಯಾಗಿದೆ ಎನ್ನಲಾಗಿದೆ.  Carlington Iconic 2048 Analog Watches for Women with Premium mesh Strap, Scratch-Resistant Dial, and Water-Resistant Body – Elegant Watches for Women and Girls

ಫ್ರೆಂಡ್‌, ಸ್ಪರ್ಶ, ಭಾವನೆಗಳ ರಿಪ್ಲೇಸ್‌ ಮಾಡಲ್ಲ -

ದತ್ತಾಂಶ ಫಲಿತ ಎಐ ತ್ವರಿತ ವಿಶ್ಲೇಷಿಸಿ, ಮಾಹಿತಿಯನ್ನು ವೈಯಕ್ತೀಕರಿದ ಅನುಭವ ಸಹಾಯ ಹಸ್ತ ತೋರಿದೆ. ಇದೆಲ್ಲದರ ಮಧ್ಯೆಯೂ ಒಂದು ಸತ್ಯಾಂಶವನ್ನು ನೆನಪಿನಲ್ಲಿರಿಸುವುದು ಮುಖ್ಯವಾಗುತ್ತದೆ. ಅದು ಟೆಕ್ನಾಲಜಿ ಮಾನವ ಸಂಬಂಧಗಳಿಗೆ ಬದಲಿಯಾಗಿಲ್ಲ ಎನ್ನುವುದು. ಇದು ನಮ್ಮ ಮನ ತಣಿಸಬಲ್ಲದು, ಕೆಲಸದ ಹೊರೆ ಕಡಿಮೆಯಾಗಿಸಬಹುದು. ಆದರೆ ನಮ್ಮನ್ನಾಳುವ ಸಾಧನವಲ್ಲ ಎನ್ನುವುದನ್ನು ನೆನಪಿನಲ್ಲಿರಿಸಿಕೊಳ್ಳುವುದು ಎಚ್ಚರಿಕೆಯ ಕರೆಗಂಟೆ ಎನ್ನಲಾಗಿದೆ. ಇದನ್ನೂ ಓದಿ: ಹಣಕಾಸಿನ ಮನೋಭಾವ: ಆದಾಯಕ್ಕಿಂತಲೂ ಮನಸ್ಥಿತಿಯೇ ದೊಡ್ಡ ಬಂಡವಾಳ!