ಒಂದು ತಟ್ಟೆಯಲ್ಲಿ ಹೊಟ್ಟೆ ತುಂಬುವಷ್ಟು ಊಟವಿದೆ ಎಂದಿಟ್ಟುಕೊಳ್ಳಿ. ಆದರೆ, ಮನಸ್ಸೆಲ್ಲವೂ ಬೇರೊಬ್ಬರು ಸವಿಯುತ್ತಿರುವ ಸಿಹಿತಿನಿಸಿನ ಮೇಲೆ ಇರುತ್ತದೆ. ಇದು ಮನಸ್ಸಿನ ಸಾಮಾನ್ಯ ಗುಣಲಕ್ಷಣವಾಗಿರುತ್ತದೆ. ಅಂಗೈಯಲ್ಲಿನ ಬೆಣ್ಣೆಗಿಂತಲೂ ನಮಗೆ ಊರೂರ ತುಪ್ಪಕ್ಕಾಗಿ ಹಪಹಪಿಸಿದಂತೆ, ಮತ್ತೊಂದರ ಹಂಬಲ ಅಥವಾ ವಾಂಚೆ ನಮ್ಮ ನೆಮ್ಮದಿಯುತ ಮನಸ್ಸನ್ನು ಕೆಡಿಸುವುದುಂಟು.
ಮನಸ್ಸೆಂಬುದು ಮೊಸರು ತುಂಬಿದ ಗಡಿಗೆಗೆ ಸಮನಾದುದು. ಒಮ್ಮೆ ಕಲ್ಲು ತಾಕಿ ಬಿದ್ದರೆ ಮೊಸರೆಲ್ಲಾ (ಸತ್ವಯುತ ಜೀವನಾಂಶ) ವ್ಯರ್ಥವಾಗುತ್ತದೆ. ಇದಕ್ಕಿರುವ ಮಾರ್ಗವೇ ವಾಸ್ತವತೆಯನ್ನು ಒಪ್ಪಿಕೊಳ್ಳುವುದು. ಇದ್ದದ್ದನ್ನು ಇದ್ದಂತೆ ಒಪ್ಪಿಕೊಳ್ಳುವುದನ್ನು ಮನೋವಿಜ್ಞಾನದಲ್ಲಿ ʼರಿಯಲಿಸ್ಟಿಕ್ ಥಿಂಕಿಂಗ್ʼ ಎನ್ನಲಾಗುತ್ತದೆ. ವಾಸ್ತವದ ಜಾಡಿನಲ್ಲಿ, ಪ್ರತೀ ಕ್ಷಣವನ್ನು ಪ್ರೀತಿಯಿಂದ ಬಂದಂತೆ ಬರಮಾಡಿಕೊಳ್ಳುವುದರಲ್ಲಿ ನೆಮ್ಮದಿಯು ಅಡಗಿದೆ. NIBOSI Women Stainless Steel Watches Analog Rose Gold Band and Square Dial Women's Watch for Girls&Miss&Ladies Diamond Studded with Stylish Watches Waterproof
ಜೀವನದ ಪ್ರತೀ ಕ್ಷಣದಲ್ಲೂ ಜೀವಿಸಿ. ಅದಕ್ಕಾಗಿ ವಾಸ್ತವದ ಅರಿವು ಬಹುಮುಖ್ಯ. ಯಾರನ್ನೂ ನೋಯಿಸದೇ ಸ್ವತಃ ನಿಮ್ಮನ್ನೂ ಕೂಡ!. ಯಾವುದನ್ನೇ ಆಗಲಿ ಅತಿಯಾಗಿ ನಂಬುವುದು, ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ, ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಸಮಸ್ಯೆಗಳೂ ಸಹ!.
ತೆಗೆದುಕೊಂಡ ನಿರ್ಧಾರಗಳು ಅಂದುಕೊಂಡಂತೆ ಕೈಗೂಡದಿರಬಹುದು. ಆತ್ಮೀಯರು ಅಗಲಿ ಹೋಗಬಹುದು. ಆದರೂ ವಾಸ್ತವದಲ್ಲಿ ನಾವು ಬದುಕುವ ಬದುಕೇ ಸತ್ಯ ಹಾಗೂ ಜೀವಂತ. ಇದಕ್ಕಾಗಿ ಮನಸ್ಸೆಂಬ ಮಿತ್ರನನ್ನು ಮಿತ್ರನಾಗಿಸಬೇಕೆ ಅಥವಾ ಶತ್ರುವೇ ನೀವೇ ತಿಳಿಯಬೇಕಿದೆ. ಇದನ್ನೂ ಓದಿ: ಎಐ ಎಂಬ ಬೆಸ್ಟ್ ಫ್ರೆಂಡ್: ತಂತ್ರಜ್ಞಾನ ʻಹತ್ತಿರʼ ಮಾನವನ 'ಹೃದಯ' ದೂರವೇ!?