Skip to main content
ವಿಡಿಯೋ
1/3
webstory

'ಥ್ಯಾಂಕ್ಸ್‌ ಗಿವಿಂಗ್‌' - ಕೃತಜ್ಞತೆಯೆಂಬ ಸಾತ್ವಿಕ ಗುರುತು!

By Shravanthi R
'ಥ್ಯಾಂಕ್ಸ್‌ ಗಿವಿಂಗ್‌' - ಕೃತಜ್ಞತೆಯೆಂಬ ಸಾತ್ವಿಕ ಗುರುತು!

ಕೃತಜ್ಞತಾ ಭಾವವೆಂಬ ಮಹತ್ವವು ಮಾನವ ಸಂಕುಲದ ಪರಸ್ಪರ ಮಿಡಿಯುವಿಕೆಯ ಸಂಕೇತವಾಗಿದೆ.

ಅಮೆರಿಕಾದಲ್ಲಿ ಒಂದು ಸಂಭ್ರಮಾಚರಣೆಯನ್ನು ಆಚರಿಸುವುದು ರೂಢಿ. ಅದೇ ʻಥ್ಯಾಂಕ್ಸ್‌ ಗಿವಿಂಗ್‌ ವೀಕ್‌ʼ. ಪ್ರತಿ ವರ್ಷ ನವೆಂಬರ್‌ ತಿಂಗಳ ನಾಲ್ಕನೇ ಗುರುವಾರದಂದು, ಅಲ್ಲಿ ಒಂದು ವಾರದ ಮಟ್ಟಿಗೆ ಈ ಆಚರಣೆಯನ್ನು ಕೈಗೊಳ್ಳುತ್ತಾರೆ. 1863 ರಲ್ಲಿ ಅಬ್ರಾಹಂ ಲಿಂಕನ್‌ ಅವರ ಅಧ್ಯಕ್ಷತೆಯ ಸಂದರ್ಭದಲ್ಲಿ ಈ ಹಬ್ಬವು ರಾಷ್ಟ್ರವ್ಯಾಪ್ತಿ ಆಚರಣೆಗೆ ಬಂದಿತೆನ್ನಲಾಗಿದೆ.

ವಸಾಹತುಶಾಹಿಯ 17 ನೇ ಶತಮಾನದಲ್ಲಿ ವಲಸೆಗಾರರು ಬಂದು ನೆಲಸಿದ ವೇಳೆ ಅವರಿಗೆ ಆಹಾರ ದೊರಕಿಸಿಕೊಟ್ಟ ದೇವರಿಗೆ, ಉತ್ತಮ ಫಸಲು ನೀಡಿದ ಭೂಮಿಯನ್ನು, ಪ್ರಾಣವನ್ನು ಪೊರೆದ ಪ್ರಕೃತಿ ಮಾತೆಯಗೆ ವಂದಿಸುವ ಕೃತಜ್ಞತಾಪೂರ್ವಕ ನೆನಪಿಗಾಗಿ ಈ ಹಬ್ಬದಾಚರಣೆ ಇದೆ ಎನ್ನುವುದು ಇತಿಹಾಸದ ಭಾಗವಾಗಿದೆ ಎನ್ನಲಾಗಿದೆ.

ಇದು ಬರಿಯ ಕುಟುಂಬ, ಮಿತ್ರವಲಯಕ್ಕಷ್ಟೇ ಸೀಮಿತವಾಗದೇ, ಪರಸ್ಪರ ಉಳ್ಳವರು ಇಲ್ಲದವರಿಗೆ ನೆರವಾಗುವ ಹೃದಯವಂತಿಕೆಗೆ ಈ ಥ್ಯಾಂಕ್ಸ್‌ ಗಿವಿಂಗ್‌ ನೇಚರ್‌ ಪ್ರತಿಬಿಂಬವಾಗಿದೆ ಎಂದು ಹೇಳಲಾಗುತ್ತದೆ. ಈ ಸಾತ್ವಿಕ ಗುಣವು ಪ್ರಪಂಚದಲ್ಲೆಲ್ಲವೂ ಹಸನಾಗಿರುವ ಚೇತನ ತುಂಬಿಸಿದೆ ಎನ್ನುವುದರ ಮೂಲಕ ಬೆಚ್ಚನೆಯ ಅನುಭೂತಿಯನ್ನು ನೀಡುತ್ತದೆ. Carlington Analog Watches for Women with mesh Strap - CT 2009

ವಿನಯವೇ ವಿದ್ಯೆಗೆ ಭೂಷಣವೆಂಬ ಮಾತಿದೆ. ಹೀಗಾಗಿ ಸನ್ನಡತೆಗೆ ಸಹ್ಯವಾಗಿರುವ ಕೃತಜ್ಞಾ ಭಾವವು ಧನ್ಯತೆಯ ಭಾವವನ್ನು ಸೂಚಿಸುವುದು. ಈ ಮೂಲಕ ಪುಟ್ಟ ಥ್ಯಾಂಕ್ಸ್‌ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ಹೊಸ ಸಂಬಂಧಗಳನ್ನು ಪೋಷಿಸುವುದು. ಇದನ್ನೂ ಓದಿ: ಯಾವುದೂ ಶಾಶ್ವತವಲ್ಲ: ನಿಮ್ಮ ಸಮಸ್ಯೆಗಳೂ ಕೂಡ - ಪ್ರತಿ ಕ್ಷಣದ ಮಹತ್ವವೇ ಬದುಕಿನ ವಾಸ್ತವತೆ!