Skip to main content
ವಿಡಿಯೋ
1/3
general

ಎಐ ಬೂಮ್ ಅಥವಾ ಬಿಕ್ಕಟ್ಟು - ಅಮೆರಿಕಾ ಆರ್ಥಿಕತೆಗೆ ಹೊಸ ಕಂಗಾಲು!?

By Shravanthi R
ಎಐ ಬೂಮ್ ಅಥವಾ ಬಿಕ್ಕಟ್ಟು - ಅಮೆರಿಕಾ ಆರ್ಥಿಕತೆಗೆ ಹೊಸ ಕಂಗಾಲು!?

ಪ್ರಸ್ತುತದಲ್ಲಿ ಜಾಗತೀಕ ಆರ್ಥಿಕತೆಗೆ ಉದಾಹರಣೆಯಾಗಿರುವ ಅಮೆರಿಕಾ ದೇಶವು ಎಐ ತಂತ್ರಜ್ಞಾನವನ್ನು ನೆಚ್ಚಿಕೊಂಡಿದೆ. ಇದರ ಮಾರುಕಟ್ಟೆಯ ಚಿತ್ರಣ ಭವಿಷ್ಯದ ದಿನಗಳಲ್ಲಿ ಯಾವ ಪರಿಣಮಿತ ಉತ್ಪನ್ನಗಳನ್ನು ನೀಡಲಿದೆ ಎಂಬುದರ ಸಣ್ಣ ವಿಶ್ಲೇಷಣೆ ಇದಾಗಿದೆ.

ಕೃತಕಬುದ್ದಿಮತ್ತೆ ಇಂದು ಜಾಗತಿಕ ಆರ್ಥಿಕತೆಯಲ್ಲಿ ಬಹುದೊಡ್ಡ ಹೆಸರು ಪಡೆಯುತ್ತಲಿದೆ. ಅಮೆರಿಕಾದ ಆರ್ಥಿಕತೆಯನ್ನು ನೆಚ್ಚಿಕೊಂಡಿರುವ ಎಐ ತಂತ್ರಜ್ಞಾನವು, ದೊಡ್ಡ ಬಿಕ್ಕಟ್ಟಿನಲ್ಲಿದೆ ಎನ್ನಲಾಗಿದೆ. ಯಾಕೆಂದರೆ, ಅಲ್ಲಿನ ಶೇ. 40 ರಷ್ಟು ಭಾಗದ ಜಿಡಿಪಿಯು ಎಐ ತುಂಬಿಕೊಟ್ಟಿದೆ ಎಂದು ವರದಿ ತಿಳಿಸಿದೆ. ಇತರೆ ಕ್ಷೇತ್ರಗಳನ್ನು ಬಿಟ್ಟು, ಅಮೆರಿಕಾ ದೇಶದ ಟೆಕ್‌ ಅಥವಾ ಎಐ ಸ್ಟಾಕ್‌ಗಳಿಗೆ ವಿಪರೀತ ಬೇಡಿಕೆಯಿದೆ ಎನ್ನಲಾಗಿದೆ.

ಅಮೆರಿಕಾ ದೇಶವು ವಿತ್ತೀಯ ಕೊರತೆಯನ್ನು ಅನುಭವಿಸುತ್ತಿರುವುದಾಗಿಯೂ ತನ್ನ ಹೂಡಿಕೆಗಾಗಿ ಅಲ್ಲಿನ ಸರ್ಕಾರವು ಎಐ ಕ್ಷೇತ್ರವನ್ನು ಬೆಂಬಲಿಸುತ್ತಿದೆ. ಅಲ್ಲದೇ ಕೃತಕಬುದಿಮತ್ತೆಯ ಉದ್ಯಮವು ಹೆಚ್ಚು ಹೆಚ್ಚು ಕೇಂದ್ರೀಕೃತವಾಗುತ್ತಿದ್ದು, ಅಲ್ಲಿನ ಬೃಹತ್‌ ಕಂಪನಿಗಳು ಎಐ ಕ್ಷೇತ್ರವನ್ನು ಆಳುತ್ತಿದೆ. ಅವುಗಳು ತಮ್ಮ ತಮ್ಮಲ್ಲೇ ಹೂಡಿಕೆ ಮಾಡಿಕೊಳ್ಳುತ್ತಿರುವುದು ಅನುಮಾನಯುತ ಕ್ರಮವೆನಿಸಿದೆ. ಗಣಕಶಕ್ತಿಯನ್ನು ಅತ್ಯಂತವಾಗಿ ಬಳಸಿಕೊಳ್ಳುತ್ತಿರುವ ಈ ವಿದ್ಯಮಾನಗಳಿಂದ ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆಗಳಾಗುವುದೆಂಬ ಅಂಶಗಳು ಕಂಗೆಡಿಸಿವೆ. Carlington Analog Watches for Women with mesh Strap - CT 2007

ಕೃತಕಬುದ್ದಿಮತ್ತೆಯು ಉದ್ಯೋಗ, ಬಂಡವಾಳಶಾಹಿ ಹಾಗೂ ಜಾಗತಿಕ ಹೂಡಿಕೆಗಳ ಮೇಲೆ ಪರಿಣಮಿಸಿರುವುದಲ್ಲದೇ ವಿವಿಧ ವಲಯಗಳ ದೃಷ್ಟಿಯಿಂದ ಇದು ಆರ್ಥಿಕತೆಯತ್ತ ಯಾವ ಹೆಜ್ಜೆಯಿಡಲಿದೆ ಹಾಗೂ ಇದರ ಉತ್ಪಾದಕತೆಯು ಮಾನವ ಸಂಪನ್ಮೂಲಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂದು ಹೆಚ್ಚು ಹೆಚ್ಚು ಚರ್ಚಿಸುವಂತೆ ಮಾಡಿದೆ ಎನ್ನಲಾಗಿದೆ. ಇದನ್ನೂ ಓದಿ: 'ಥ್ಯಾಂಕ್ಸ್‌ ಗಿವಿಂಗ್‌' - ಕೃತಜ್ಞತೆಯೆಂಬ ಸಾತ್ವಿಕ ಗುರುತು!