Skip to main content
ವಿಡಿಯೋ
1/2
cinema

ನಟಿ ಸಮಂತಾ ಎರಡನೇ ಮದುವೆ ಫಿಕ್ಸ್ ಆಯ್ತಾ? ಇನ್‌ಸ್ಟಾಗ್ರಾಮ್ ಪೋಸ್ಟ್ ಹೇಳ್ತಿರೋ ಕಥೆ ಏನು?

By Ram Chethan
ನಟಿ ಸಮಂತಾ ಎರಡನೇ ಮದುವೆ ಫಿಕ್ಸ್ ಆಯ್ತಾ? ಇನ್‌ಸ್ಟಾಗ್ರಾಮ್ ಪೋಸ್ಟ್ ಹೇಳ್ತಿರೋ ಕಥೆ ಏನು?

ನಟಿ ಸಮಂತಾ ಅವರ ಎರಡನೇ ಮದುವೆ ಬಗ್ಗೆ ವದಂತಿ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ ನಿರ್ದೇಶಕ ರಾಜ್ ನಿಧಿಮೋರು ಜೊತೆ ಇಶಾ ಯೋಗ ಕೇಂದ್ರದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಇಬ್ಬರೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ನಿಜ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ನಟಿ ಸಮಂತಾ ಅವರ ಎರಡನೇ ಮದುವೆ ಕುರಿತ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಾಲಿವುಡ್ ನಿರ್ದೇಶಕ ರಾಜ್ ನಿಧಿಮೋರು ಅವರನ್ನು ಸಮಂತಾ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಮದುವೆಯಾಗಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ ಈ ವಿಚಾರಕ್ಕೆ ಇಬ್ಬರೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಸಮಂತಾ ಮತ್ತು ರಾಜ್ ಅವರು ದಿ ಫ್ಯಾಮಿಲಿ ಮ್ಯಾನ್ 2 ಸರಣಿಯಲ್ಲಿ ಕೆಲಸ ಮಾಡಿದ ನಂತರ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದರಿಂದ ಇವರಿಬ್ಬರ ನಡುವೆ ಆತ್ಮೀಯತೆ ಬೆಳೆದಿದೆ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಇತ್ತೀಚೆಗೆ ಸಮಂತಾ ಇಬ್ಬರ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವುದು ಈ ಸುದ್ದಿಗೆ ಇನ್ನಷ್ಟು ಬೆಂಬಲ ನೀಡಿದೆ.ಇದನ್ನು ಓದಿ:‘ಡೆವಿಲ್’ ಟ್ರೇಲರ್ ರೀಲಿಸ್ ಡೇಟ್ ಔಟ್: ಡಿಸೆಂಬರ್ 5ರಂದು ದರ್ಶನ್ ಧಮಾಕಾ!

ಈ ನಡುವೆ ರಾಜ್ ನಿಧಿಮೋರು ಅವರ ಪತ್ನಿ ಶ್ಯಾಮಲಿ ಹಾಕಿದ ಇನ್‌ಸ್ಟಾಗ್ರಾಮ್ ಪೋಸ್ಟ್ ಹೊಸ ಕುತೂಹಲ ಮೂಡಿಸಿದೆ. “ಹತಾಶರಾದ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ” ಎಂಬ ಅವರ ಬರಹ, ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಸಮಯದಲ್ಲಿ ಅವರು ಈ ಪೋಸ್ಟ್ ಹಂಚಿಕೊಂಡಿರುವುದು ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.Arayna Women's Cotton Printed Floral Straight Kurta with Palazzo Pants and Dupatta

ಸಮಂತಾ ಮೊದಲ ಪತಿ ನಾಗ ಚೈತನ್ಯ ಈಗಾಗಲೇ ತಮ್ಮ ಹೊಸ ಬದುಕು ಆರಂಭಿಸಿದ್ದಾರೆ. ಅದೇ ರೀತಿಯಾಗಿ ಸಮಂತಾ ಕೂಡ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ ಎಂಬ ಮಾತು ಹರಿದಾಡುತ್ತಿದೆಯಾದರೂ, ಮದುವೆ ಸುದ್ದಿ ನಿಜವೇ ಅಥವಾ ವದಂತಿಯೇ ಎಂಬುದು ಅಧಿಕೃತ ಘೋಷಣೆಯೊಂದಿಗೆ ಮಾತ್ರ ಸ್ಪಷ್ಟವಾಗಲಿದೆ.